ತುಮಕೂರು

ಬ್ಯಾಗಿನಲ್ಲಿಟ್ಟಿದ್ದ 1.20 ಲಕ್ಷ ನಾಪತ್ತೆ, ದೂರು

Published On :

ಕುಣಿಗಲ್: ಸಂಬಂಧಿಕರ ಮದುವೆಗ ಬಂದಿದ್ದ ದಂಪತಿ ಬ್ಯಾಗಿನಲ್ಲಿಟ್ಟಿದ್ದ 1.20 ಲಕ್ಷ ರು.ನಗದು ಸೇರಿದಂತೆ ಐದು ಲಕ್ಷ ರು.ಮೌಲ್ಯದ ಒಡವೆಗಳು ಕಲ್ಯಾಣಮಂಟಪದಿಂದ ಕಳುವಾಗಿರುವ ಘಟನೆ ಭಾನುವಾರ ನಡೆದಿದೆ. ತುಮಕೂರಿನ ಗಂಗಶಾನಯ್ಯ ಎಂಬುವವರು ಪಟ್ಟಣದ ತುಮಕೂರು ರಸ್ತೆಯಲ್ಲಿನ ಖಾಸಗಿ ಕಲ್ಯಾಣಮಂಟಪ (ಗಂಗಾಧರೇಶ್ವರ ಪ್ಯಾಲೆಸ್)ನಲ್ಲಿ ತಮ್ಮ ಸಂಬಂಧಿಕರ ಮದುವೆಗೆ ಆಗಮಿಸಿದ್ದು, ಭಾನುವಾರ ರಾತ್ರಿ ಕಲ್ಯಾಣಮಂಟಪದ ಕೊಣೆಯಲ್ಲಿ ಮಲಗಿದ್ದು,  ಅರುಣ ಅವರು  ತಮ್ಮ ಒಡವೆ, ಗಂಗಶಾನಯ್ಯನವರ ಒಡವೆ, ಮೊಬೈಲ್‌ನ್ನು ಪತ್ನಿಯ ಬ್ಯಾಗ್‌ನಲ್ಲಿಟ್ಟಿದ್ದರು.
 ಬೆಳಗ್ಗೆ ನೋಡಿದಾಗ ಬ್ಯಾಗ್ ಕಳುವಾಗಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ ಕುಣಿಗಲ್ ಠಾಣೆಗೆ ಗಂಗಶಾನಯ್ಯ ನವರು 1.20 ಲಕ್ಷ ರು.ನಗದು, 208 ಗ್ರಾಂ ಚಿನ್ನಾಭರಣಗಳು ಕಳುವಾಗಿರುವ ಬಗ್ಗೆ ನೀಡಿದ ದೂರಿನ ಮೇರೆಗೆ ಪ್ರಕರಣದಾಖಲಿಸಿದ್ದು, ಎಎಸ್ಪಿ ಕಾರ್ತಿಕ್ ರೆಡ್ಡಿ, ಪಿಎಸೈ ಗುರುಪ್ರಸಾದ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಳೆದೊಂದು ವಾರದಿಂದಲೂ ತುಮಕೂರು ರಸ್ತೆಯಲ್ಲಿ ಕಳವು ಪ್ರಕರಣಗಳು ನಡೆಯುತ್ತಿದ್ದು, ಇದೀಗ ಕಲ್ಯಾಣ ಮಂಟಪದಲ್ಲಿ ಲಕ್ಷಾಂತರ ರು.ಮೌಲ್ಯದ ಕಳುವಾಗಿರುವುದು ನಾಗರಿಕರಲ್ಲಿ ಕಳವಳ ಹುಟ್ಟಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.