ತುಮಕೂರು

ಎಚ್‌ಐವಿ ಸೋಂಕಿತರ ನೆರವಿಗೆ ಸಾಕಷ್ಟು ಕಾನೂನು

Published On :

ಕುಣಿಗಲ್: ಲೈಂಗಿಕ ಅಲ್ಪಸಂಖ್ಯಾತರು ಸೇರಿದಂತೆ ಎಚ್‌ಐವಿ ಸೋಂಕಿತರ ನೆರವಿಗೆ ಸಾಕಷ್ಟು ಕಾನೂನುಗಳಿದ್ದು, ಇಂತಹವರು ಉಚಿತ ಕಾನೂನು ನೆರವು ನೀಡಲು ಕಾನೂನು ಸೇವೆಗಳ ಸಮಿತಿ ಸದಾ ಸಿದ್ಧವಿದೆ. ಸಮಿತಿ ಸೇವೆಯ ಸದ್ಬಳಕೆ ಮಾಡಿಕೊಂಡು ಸಬಲರಾಗುವಂತೆ ನ್ಯಾಯಾಧೀಶರಾದ ಶಾರದ ತಿಳಿಸಿದರು.
ತಾಲೂಕಿನ ಭಕ್ತರಹಳ್ಳಿಯ ಸಂತ ಗ್ರೇಗೊರಿಯಸ್ ದಯಾಭವನದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘದ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ ವಿಶ್ವ ಎಡ್ಸ್ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಎಚ್‌ಐವಿ ಸೋಂಕಿತರನ್ನು ಅಸ್ಪೃಶ್ಯರಂತೆ ಕಾಣುವುದಾಗಲಿ, ಅವರನ್ನು ಬೇರೆ ತರಹ ನೋಡುವುದು ಕಾನೂನಿನ ವಿರುದ್ಧವಾಗಿದ್ದು, ಅವರನ್ನು ಸಾಮಾನ್ಯರಂತೆ ಗೌರವಿಸಿ ಅವರ ನೈತಿಕ ಶಕ್ತಿ ವೃದ್ಧಿಸುವ ಕೆಲಸ ಸಮಾಜದಿಂದ ಆಗಬೇಕಿದೆ. ಈ ನಿಟ್ಟಿನಲ್ಲಿ ಜನಸಾಮಾನ್ಯರು ಸಮಾನ ಮನಸ್ಕರಾಗಿ ಸ್ಪಂದಿಸಬೇಕೆಂದರು.
ತೀರ್ಪಿಗೆ ಬದ್ಧರಾಗಿ: ಎಚ್‌ಐವಿ ಮತ್ತು ಸಲಿಂಗಕಾಮಿಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಸಿದ್ದು, ಎಚ್‌ಐವಿ ಸೋಂಕಿತರು ತಮ್ಮನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಸರಕಾರ ಹತ್ತು ಹಲವು ಸೌಲಭ್ಯ ನೀಡಿದೆ. ಅವುಗಳನ್ನು ದೊರಕಿಸಿಕೊಡಲು ಅಧಿಕಾರಿ ವರ್ಗ ವಿಳಂಬ ನೀತಿ ಅನುಸುರಿಸುತ್ತಿದ್ದು ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಕೆಲವರು ಮನವಿ ಮಾಡಿದರೆ, ಮತ್ತೆ ಕೆಲವರು ಸರ್ವೋಚ್ಚ ನ್ಯಾಯಾಲಯ ನೀಡಿದ  ಸಲಿಂಗಕಾಮಿಗಳು, ವಯಸ್ಕರ ನಡುವಿನ ಸಮ್ಮತಿಯ ಸಲಿಂಗರತಿ ಅಪರಾದ ಎಂಬ ತೀರ್ಪಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ನ್ಯಾಯಾಧೀಶರು, ಸರ್ವೋಚ್ಚ ನ್ಯಾಯಾಲಯದ ತೀರ್ಪಿಗೆ ಬದ್ಧರಾಗಿ ನಡೆದುಕೊಳ್ಳುವುದು ಎಲ್ಲ ರೀತಿಯಿಂದ ಒಳ್ಳೆಯದೆಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ನ್ಯಾಯಾಧೀಶರಾದ ಮುನಿರಾಜು, ಜಿ.ಕೆ.ದಾಕ್ಷಾಯಿಣಿ, ಎಪಿಪಿ ಸುರೇಖಾ ಹಿರೇಮಠ, ವಕೀಲರ ಸಂಘಧ ಅಧ್ಯಕ್ಷ ದಯಾನಂದ್, ವಕೀಲರಾದ ಸುರೆಶ್, ಚಂದ್ರಶೇಖರ್, ದಯಾಭವನದ ವ್ಯವಸ್ಥಾಪಕ ಜೀನೇಶ್ ಕೆ.ವರ್ಕಿ, ವೈದ್ಯರಾದ ನಟರಾಜ್, ರಾಜಕುಮಾರ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.