ಖಾಸಗಿ ಪಡಿತರ ಸೇವಾ ಕೇಂದ್ರಗಳು ಸ್ಥಗಿತ
ತುಮಕೂರು: ತುಮಕೂರು ನಗರ ಪ್ರದೇಶದಲ್ಲಿ ತುಮಕೂರು-ಒನ್ ಕೇಂದ್ರಗಳು ಕಾರ್ಯನಿರ್ವಹಿಸುತ್ತಿರುವುದರಿಂದ, ತುಮಕೂರು ನಗರ ಪ್ರದೇಶದಲ್ಲಿ ಖಾಸಗಿಯವರು ನಡೆಸುತ್ತಿದ್ದ 19 ಪಡಿತರ ಸೇವಾ ಕೇಂದ್ರಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.
ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ವತಿಯಿಂದ ಸಾರ್ವಜನಿಕ ಪಡಿತರ ವಿತರಣೆ ವ್ಯವಸ್ಥೆಯಡಿ ಪಡಿತರ ಚೀಟಿಗೆ ಸಂಬಂಧಿಸಿದ ಫಲಾನುಭವಿಗಳ ಮತ್ತು ಅರ್ಜಿದಾರರ ಭಾವಚಿತ್ರ ಹಾಗೂ ಜೀವಮಾಪಕ ಸಂಗ್ರಹಿಸಲು ತುಮಕೂರು ನಗರದಲ್ಲಿ ಒಟ್ಟು 19 ಪಡಿತರ ಚೀಟಿ ಸೇವಾ ಕೇಂದ್ರಗಳನ್ನು ಖಾಸಗಿಯವರಿಗೆ ನಡೆಸಲು ಅನುಮತಿ ನೀಡಲಾಗಿತ್ತು.
ಆದರೆ ಈಗ ತುಮಕೂರು ನಗರದಲ್ಲಿ ತುಮಕೂರು ಒನ್ ಮೂರು ಕೇಂದ್ರಗಳು ಕಾರ್ಯನಿರ್ವಹಿಸುತ್ತಿರುವುದರಿಂದ ಖಾಸಗಿಯವರಿಗೆ ಅನುಮತಿಸಲಾದ ಪಡಿತರ ಚೀಟಿ ಸೇವಾ ಕೇಂದ್ರಗಳ ಕಾರ್ಯವನ್ನು ಸ್ಥಗಿತಗೊಳಿಸಲು ಆಯುಕ್ತರು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಬೆಂಗಳೂರು ಅವರು ಆದೇಶಿಸಿರುವ ಹಿನ್ನಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಪಡಿತರ ಚೀಟಿಗೆ ಸಂಬಂಧಿಸಿದ ಭಾವಚಿತ್ರ ಮತ್ತು ಬಯೋವುಟ್ರಿಕ್ಸ್ ನೀಡುವಿಕೆ, ಇನ್ನಿತರ ಕಾರ್ಯಗಳಿಗೆ ಸಂಬಂಧಿಸಿದ ಸೇವೆಯನ್ನು ಇನ್ನು ಮುಂದೆ ಈ ಕೆಳಕಂಡ ತುಮಕೂರು ಒನ್ ಕೇಂದ್ರಗಳಲ್ಲಿ ಪಡೆಯಬಹುದಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.
ತುಮಕೂರು-ಒನ್: ಸಿ.ಎಂ.ಸಿ ಕಟ್ಟಡ, ತುಮಕೂರು ಕ್ಲಬ್ ಮುಂದೆ, ಟೌನ್ ಹಾಲ್ ವೃತ್ತ, ತುಮಕೂರು. ತುಮಕೂರು-ಒನ್ , ನಗರಸಭೆ ಮಳಿಗೆ ಸಂಕೀರ್ಣ, ಸಿರಾ ಗೇಟ್, ತುಮಕೂರು. ತುಮಕೂರು-ಒನ್, 14 ನೇ ಕ್ರಾಸ್, ಕರ್ನಾಟಕ ಬ್ಯಾಂಕ್ ಎದುರು, ಎಸ್.ಎಸ್. ಪುರಂ, ತುಮಕೂರು. ತುಮಕೂರು ಜಿಲ್ಲೆಯ ತಾಲೂಕು ಕೇಂದ್ರಗಳ ಪಟ್ಟಣ ಪ್ರದೇಶಗಳಲ್ಲಿನ ಪಡಿತರ ಚೀಟಿ ಸೇವಾ ಕೇಂದ್ರಗಳಲ್ಲಿ ಪಡಿತರ ಚೀಟಿಗೆ ಸಂಬಂಧಿಸಿದ ಸೇವೆಯನ್ನು ಈ ಮೊದಲಿನಂತೆ ಪಡೆಯಬಹುದಾಗಿದ್ದು, ಜಿಲ್ಲೆಯ ಎಲ್ಲ 9 ಪಟ್ಟಣ ಪ್ರದೇಶಗಳಲ್ಲಿನ ಎಲ್ಲ ಪಡಿತರ ಸೇವಾ ಕೇಂದ್ರಗಳು ಕಾರ್ಯನಿರ್ವಹಿಸುತ್ತವೆ ಎಂದು ಅವರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

