ತುಮಕೂರು

ಮನಮೋಹಕ ನೂಪುರ ಚರಣ ನೃತ್ಯೋತ್ಸವ

Published On :

ತುಮಕೂರು: ತುಮಕೂರಿನ ಖ್ಯಾತ ಭರತನಾಟ್ಯ ತರಬೇತಿ ಸಂಸ್ಥೆ ರಾಜ ರಾಜೇಶ್ವರಿ ನೃತ್ಯ ಕಲಾಮಂದಿರದ ವತಿಯಿಂದ ವಾರ್ಷಿಕೋತ್ಸವದ ಅಂಗವಾಗಿ 51 ನೇ ನೂಪುರ ಚರಣ ನೃತ್ಯೋತ್ಸವವನ್ನು ಡಾ. ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿತ್ತು.
ರಾಜ-ರಾಜೇಶ್ವರಿ ನೃತ್ಯ ಕಲಾಮಂದಿರ ಟ್ರಸ್ಟ್ ತುಮಕೂರು ಮತ್ತು ಬೆಂಗಳೂರಿನ ಸೀನಿಯರ್ ಹಾಗೂ ಜೂನಿಯರ್ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ ವಿಭಿನ್ನ ನೃತ್ಯಗಳು ಮನಮೋಹಕವಾಗಿ ಮೂಡಿಬಂದವು.
ಮೊದಲ ದಿನದ ಕಾರ್ಯಕ್ರಮವನ್ನು ತುಮಕೂರು ಹಿರೇಮಠಾಧ್ಯಕ್ಷ ಡಾ.ಶಿವಾನಂದ ಶಿವಾಚಾರ್ಯ ಸ್ವಾಮಿಗಳು ಉದ್ಘಾಟಿಸಿದರು. ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ ಮುಖ್ಯ ಅತಿಥಿಗಳಾಗಿದ್ದರು. ಇದೇ ಸಂದರ್ಭದಲ್ಲಿ ಬೆಂಗಳೂರಿನ ನಾರಾಯಣ ಹೃದಯಾಲಯದ  ಹೃದಯ ತಜ್ಞ ಡಾ. ಕೆ.ಪ್ರವೀಣ್‌ಕುಮಾರ್  ಅವರನ್ನು ಸನ್ಮಾನಿಸಲಾಯಿತು.
ಎರಡನೇ ದಿನದ ಕಾರ್ಯಕ್ರಮದಲ್ಲಿ ಅಂತರ ರಾಷ್ಟ್ರೀಯ ಪ್ರಸಿದ್ಧಿಯ ಮೃದಂಗ ವಿದ್ವಾನ್ ಗುರು ಎಂ.ಆರ್. ರಂಗಸ್ವಾಮಿ ಅವರಿಗೆ ನಾಟ್ಯಶ್ರೀ ಕೆ.ಎಂ. ರಾಮನ್ ಪ್ರಶಸ್ತಿ ಮತ್ತು ಐದು ಸಾವಿರ ರು. ನಗದು ಪುರಸ್ಕಾರ ನೀಡಿ  ಸನ್ಮಾನಿಸಲಾಯಿತು. ನಗರಸಭೆ ಅಧ್ಯಕ್ಷೆ ಗೀತಾ ರುದ್ರೇಶ್ ಮುಖ್ಯ ಅತಿಥಿಗಳಾಗಿದ್ದರು. ವಿದ್ಯಾವಾಚಸ್ಪತಿ ಕವಿತಾಕೃಷ್ಣ ಅವರು ಅಧ್ಯಕ್ಷತೆ ವಹಿಸಿದ್ದರು.
ಟ್ರಸ್ಟ್ ಮುಖ್ಯಸ್ಥರಾದ ಕೆ.ಎಂ.ರಾಮನ್, ವಿದುಷಿ ದೇವಕಿ ರಾಮನ್, ವಿದ್ವಾನ್ ಹರೀಶ್ ರಾಮನ್, ವಿದ್ವಾನ್ ಗಿರೀಶ್ ರಾಮನ್,  ಶರ್ಮಿಳಾ ಕರ್ಕೆರಾ, ಮುರಳಿ ರಾಮನ್, ವಿದುಷಿ  ಗುಣವತಿ ಪ್ರಭಾಕರ್ ಉಪಸ್ಥಿತರಿದ್ದರು.
ನೃತ್ಯ ಮಹೋತ್ಸವದಲ್ಲಿ ವಿದ್ವಾನ್ ಹರೀಶ್ ರಾಮನ್ ಮತ್ತು ವಿದ್ವಾನ್ ಗಿರೀಶ್ ರಾಮನ್, ನಟುವಾಂಗಂನಲ್ಲಿ  ಬೆಂಗಳೂರಿನ ವಿದ್ವಾನ್ ರಘುನಂದನ್, ಹಾಡುಗಾರಿಕೆಯಲ್ಲಿ ಬೆಂಗಳೂರಿನ ವಿದ್ವಾನ್ ಬೆಟ್ಟ ವೆಂಕಟೇಶ್, ಮೃದಂಗಂನಲ್ಲಿ  ಬೆಂಗಳೂರಿನ ವಿದ್ವಾನ್ ಭಾಸ್ಕರ್, ಕೊಳಲುನಲ್ಲಿ ಪಕ್ಕವಾದ್ಯ ಸಹಕಾರ ನೀಡಿದರು. ಇಳಂಗೋವನ್ ತಂಡದವರು ವರ್ಣಾಲಂಕಾರದಲ್ಲಿ ಸಹಕಾರ ನೀಡಿದರೆ ಮೈಸೂರಿನ ಜಯಶ್ರೀ ನಾಗೇಶ್ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.