ಹೈನುಗಾರಿಕೆಗೆ ಒಕ್ಕೂಟದಿಂದ ರೈತರಿಗೆ ಸಾಲ
ಕ.ಪ್ರ.ವಾರ್ತೆ ತುರುವೇಕೆರೆ ಡಿ. 19
ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕರಾಗಿ ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ನಿರ್ದೇಶಕರಾಗಿ ಇತ್ತೀಚೆಗೆ ಆಯ್ಕೆಯಾಗಿರುವ ಚೆಂಡೂರಿನ ಸಿ.ವಿ. ಮಹಲಿಂಗಯ್ಯನವರನ್ನು ಸನ್ಮಾನಿಸಲಾಯಿತು.
ತಾಲೂಕು ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ಕ್ಷೇಮಾಭಿವೃಧ್ಧಿ ಸಂಘದ ವತಿಯಿಂದ ಗೌರವ ಸಲ್ಲಿಸಲಾಯಿತು. ಪಟ್ಟಣದ ವಿರಕ್ತ ಮಠದಲ್ಲಿ ನಡೆದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಮಹಲಿಂಗಯ್ಯ, ರೈತರ ಜೀವನಾಡಿಯಾಗಿರುವ ಹೈನುಗಾರಿಕೆಗೆ ಒಕ್ಕೂಟ ಹೆಚ್ಚು ಪ್ರೋತ್ಸಾಹ ನೀಡುತ್ತಿದೆ. ರೈತರಿಗೆ ನೆರವಾಗಲು ಸಾಲವನ್ನೂ ನೀಡಲಾಗುತ್ತಿದೆ. ಉತ್ತಮ ತಳಿಯ ಹಸುವನ್ನು ಖರೀದಿ ಮಾಡಿದಲ್ಲಿ ನೆಮ್ಮದಿಯ ಬದುಕನ್ನೂ ಮಾಡಬಹುದಾಗಿದೆ ಎಂದರು. ನಿರ್ದೇಶಕರಾಗಿ ಆಯ್ಕೆಯಾಗಲು ಕಾರಣಕರ್ತರಾದ ಶಾಸಕ ಎಂ.ಟಿ.ಕೃಷ್ಣಪ್ಪ, ಹಾಗೂ ತಾಲೂಕಿನ ಎಲ್ಲಾ ಸಹಕಾರ ಸಂಘದ ಪದಾಧಿಕಾರಿಗಳಿಗೂ ಕೃತಜ್ಞತೆಯನ್ನು ಸಲ್ಲಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ ಜನರ ಭಾವನೆಯನ್ನು ಗೆದ್ದು ಅಧಿಕಾರ ಪಡೆಯುವುದು ತುಂಬಾ ಕಷ್ಟದ ಕೆಲಸ. ಮಹಲಿಂಗಯ್ಯನವರಿಗೆ ರೈತರ ಬವಣೆಯನ್ನು ತಪ್ಪಿಸಿ ಉತ್ತಮ ಬಾಳ್ವೆ ಮಾಡಲು ಸಹಕಾರಿಯಾಗುವ ಅವಕಾಶ ದೊರೆತಿದೆ. ಆದ್ದರಿಂದ ಸಿಕ್ಕ ಅವಕಾಶವನ್ನು ಉಪಯೋಗಿಸಿಕೊಂಡು ರೈತರ ಸಮಸ್ಯೆಯನ್ನು ಪರಿಹರಿಸಲು ಪ್ರಾಮಾಣಿಕವಾಗಿ ಸ್ಪಂದಿಸಬೇಕು ಎಂದು ಕಿವಿ ಮಾತು ಹೇಳಿದರು.
ಆರ್.ಕೆ.ಕುಮಾರ್ಗೂ ಸತ್ಕಾರ: ಜಿಲ್ಲಾ ಹಾಲು ಒಕ್ಕೂಟದ ಸಹಾಯಕ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಆರ್.ಕೆ.ಕುಮಾರ್ ಅವರನ್ನೂ ಸತ್ಕರಿಸಿ ಅವರು ರೈತರ ಹಾಗೂ ನೌಕರರಿಗೆ ನೆರವಾದ ಸಂಗತಿಯನ್ನು ಮೆಲುಕು ಹಾಕಲಾಯಿತು. ಸಮಾರಂಭದಲ್ಲಿ ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಕೊಂಡವಾಡಿ ಚಂದ್ರಶೇಖರ್, ನಿರ್ದೇಶಕರಾದ ಎಚ್.ಕೆ. ರೇಣುಕಾ ಪ್ರಸಾದ್, ಶಿರಾದ ನಿರ್ದೇಶಕ ಎಸ್.ಆರ್. ಗೌಡ, ಪಾವಗಡದ ಕೆ.ಆರ್.ಸುರೇಶ್, ಕೊರಟಗೆರೆಯ ಎಂ.ಪಿ.ವಿಜಯಶಂಕರ್, ಗುಬ್ಬಿಯ ಪಶು ಆಹಾರ ಘಟಕದ ಪ್ರಧಾನ ವ್ಯವಸ್ಥಾಪಕ ಡಾ.ಎ.ಆರ್.ಚಂದ್ರಶೇಖರ್, ಸಹಕಾರಿ ಬಂಧು -ಮಿತ್ರ ಎನ್.ಕಿರಣ್, ಎಪಿಎಂಸಿಯ ನಿರ್ದೇಶಕ ಮಂಗಿಕುಪ್ಪೆ ಬಸವರಾಜು, ಜೆಡಿಎಸ್ ಮುಸ್ಲಿಂ ಘಟಕದ ಅಧ್ಯಕ್ಷ ಜಫ್ರುಲ್ಲಾ, ಯುವ ಮುಖಂಡ ಅಮ್ಜದ್ ಪಾಷಾ ಉಪಸ್ಥಿತರಿದ್ದರು. ಹಾಲು ಉತ್ಪಾದಕರ ಸಹಕಾರ ಸಂಘದ ನೌಕರರ ಕ್ಷೇಮಾಭಿವೃಧ್ಧಿ ಸಂಘದ ಕಾರ್ಯನಿರ್ವಹಣಾಧಿಕಾರಿ ಸಿ.ಎನ್.ಪುಟ್ಟಯ್ಯ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

