ಕೃತಿ ಲೋಕಾರ್ಪಣೆ
ತುಮಕೂರು: ಇಲ್ಲಿನ ಡಾ. ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಡಿ.22 ರಂದು ಬೆಳಿಗ್ಗೆ 10 ಗಂಟೆಗೆ ತು.ರಾ. ಸುಂದರರಾಜ್ ಅವರ ಕೃತಿಗಳ ಲೋಕಾರ್ಪಣೆ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮವನ್ನು ಐ.ಆರ್. ಪೆರುಮಾಳ್ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಕವಿತಾಕೃಷ್ಣ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ವಿಜಯಕೃಷ್ಣಕುಮಾರ್, ಎಂ.ಬಿ. ಸಿದ್ದೇಗೌಡ, ಜಿ.ಎಂ. ಸಣ್ಣಮುದ್ದಯ್ಯ, ಡಾ. ಸೋಮು ಭಾಸ್ಕರಾಚಾರ್, ಬಿ.ಎಚ್. ಪುರುಷೋತ್ತಮ್ ಸಿಂಗ್ ಆಗಮಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಬಸವರಾಜ್ ಆಪಿನಕಟ್ಟೆ ಆಗಮಿಸಲಿದ್ದಾರೆ.
ಇಂದು ವಾರ್ಷಿಕೋತ್ಸವ: ಇಲ್ಲಿನ ಮಾಕಂ ಕಲ್ಯಾಣ ಮಂದಿರದಲ್ಲಿ ಭಾನುವಾರ ಸಂಜೆ 4 ಗಂಟೆಗೆ ಅವೋಪ 18ನೇ ವಾರ್ಷಿಕೋತ್ಸವ ಮತ್ತು ಉಚಿತ ವಿದ್ಯಾರ್ಥಿ ನಿಲಯಗಳ ವಾರ್ಷಿಕೋತ್ಸವ ಸಮಾರಂಭ ನಡೆಯಲಿದೆ. ಕಾರ್ಯಕ್ರಮವನ್ನು ಬೆಂಗಳೂರಿನ ಹೆಬ್ಬಾಳ ಶಾಸಕ ಆರ್. ಜಗದೀಶ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಡಾ. ರಮೇಶ್ ಗೋಪಾಲ್, ಕಾಸಲ ವಿಠಲ್, ಎಸ್.ಆರ್. ಶ್ರೀಧರಮೂರ್ತಿ ಆಗಮಿಸಲಿದ್ದಾರೆ. ಅಧ್ಯಕ್ಷತೆಯನ್ನು ಎಚ್.ಎನ್. ರಾಧಾಕೃಷ್ಣ ಗುಪ್ತ ವಹಿಸಲಿದ್ದಾರೆ.
ಇಂದು ಪ್ರಶಸ್ತಿ ಸಮಾರಂಭ: ಇಲ್ಲಿನ ಸಿದ್ಧಗಂಗಾ ಮಠದ ಹಳೆಯ ವಿದ್ಯಾರ್ಥಿಗಳ ಹಾಗೂ ಹಿತೈಷಿಗಳ ಸಂಘದ ಸರ್ವಸದಸ್ಯರ ಸಭೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭವನ್ನು ಭಾನುವಾರ ಬೆಳಗ್ಗೆ 10 ಗಂಟೆಗೆ ಹಮ್ಮಿಕೊಳ್ಳಲಾಗಿದೆ. ಸಾನಿಧ್ಯವನ್ನು ಡಾ. ಶಿವಕುಮಾರ ಸ್ವಾಮೀಜಿ ವಹಿಸಲಿದ್ದಾರೆ. ಸಿದ್ಧಲಿಂಗ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಡಾ. ಜಿ.ವಿ. ಜಯರಾಜಶೇಖರ್ ಹಾಗೂ ಜಿ.ಎಸ್. ಜಯದೇವ ಅವರಿಗೆ ಸಿದ್ಧಗಂಗಾ ಶಿವಕುಮಾರ ಶ್ರೀ ಹಾಗೂ ಸಿ.ಎಸ್. ರಾಮದಾಸ್, ಪಿ.ವಿ. ಹುಚ್ಚವೀರಯ್ಯ, ಕೆ.ಎಸ್. ಶಂಕರಯ್ಯ, ರಾಜಶೇಖರಯ್ಯ ಅವರಿಗೆ ಸಂಘ ಸಿರಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಇಂದು ಮಹಾಕುಂಭಾಭಿಷೇಕ: ಇಲ್ಲಿಗೆ ಸಮೀಪದ ಮಲ್ಲಸಂದ್ರದ ಪಾದಕ್ಷೇತ್ರದಲ್ಲಿ 22 ರ ಭಾನುವಾರ ದತ್ತಾತ್ರೇಯ ಜಯಂತಿ ಹಾಗೂ ಗಣಪತಿ ದತ್ತಪೀಠ ಸೇವಾ ಟ್ರಸ್ಟ್ನ 7ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮವನ್ನು ವಾಲ್ಮೀಕಿ ಸಂಜಯಕುಮಾರ ಸ್ವಾಮೀಜಿ ಉದ್ಘಾಟಿಸಲಿದ್ದಾರೆ. ಶ್ರೀಧರಾನಂದ ಗುರೂಜಿ, ಕುಮಾರ ನಾಯಕ್, ಪಿ. ಸತ್ಯನಾರಾಯಣ್, ಸಿ.ಕೆ. ಸಣ್ಣನಾಯಕ್ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ.
ಜ್ಯೋತಿ ಕಾರ್ಯಕ್ರಮ
ಕುಣಿಗಲ್: ಪಟ್ಟಣದ ತುಮಕೂರು ರಸ್ತೆಯಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಭಾನುವಾರದಂದು ಶ್ರೀ ಸ್ವಾಮಿಯವರ 36ನೇ ವರ್ಷದ ಜ್ಯೋತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ ಗ್ರಾಮದೇವತೆ ದೇವಾಲಯದಲ್ಲಿ ಶ್ರೀಸ್ವಾಮಿಯನ್ನು ಆಕರ್ಷಕ ಕದಳಿ ಮಂಟಪದಲ್ಲಿ ಪಟಪ್ರತಿಷ್ಠಾಪನೆ, ನಂತರ ಶ್ರೀ ಸ್ವಾಮಿಯವರಿಗೆ ವಿಶೇಷ ಪೂಜೆ, ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಂಡಿದೆ. ಮಧ್ಯಾಹ್ನ ಸಾಮೂಹಿಕ ಅನ್ನಸಂತರ್ಪಣೆ ಆಯೋಜಿಸಿದ್ದು, ಸಂಜೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸ್ವಾಮಿಯ ಅಲಂಕೃತ ಉತ್ಸವ ಮೂರ್ತಿ ಹಾಗೂ ಜ್ಯೋತಿಯ ಮೆರವಣಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಸಂಚಾಲಕ ಕೆ.ಎಸ್. ರಮೇಶ್ ತಿಳಿಸಿದ್ದಾರೆ.
ಬಿಜೆಪಿ ಪದಾಧಿಕಾರಿಗಳು
ತುಮಕೂರು: ಭಾರತೀಯ ಜನತಾ ಪಾರ್ಟಿಯ 2013-2015ನೇ ಸಾಲಿನ ಕುಣಿಗಲ್ ಮಂಡಲದ ಮಹಿಳಾ ಮೋರ್ಚಾ ಪದಾಧಿಕಾರಿಗಳನ್ನು ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಪ್ರೇಮಾಹೆಗ್ಗಡೆ ನೇಮಿಸಿದ್ದಾರೆ. ಅಧ್ಯಕ್ಷೆಯಾಗಿ ಪದ್ಮಾವತಿ, ಉಪಾಧ್ಯಕ್ಷರಾಗಿ ಸರೋಜಮ್ಮ, ಭಾಗ್ಯಮ್ಮ, ಪವಿತ್ರ, ಪ್ರಧಾನ ಕಾರ್ಯದರ್ಶಿಯಾಗಿ ರೂಪ, ಕಾರ್ಯದರ್ಶಿಯಾಗಿ ಸುಶೀಲಮ್ಮ, ಮೀನಾಕ್ಷಿ, ವನಜಾಕ್ಷಿ, ಪೂರ್ಣಿಮಾ ಹಾಗೂ ಖಜಾಂಚಿಯಾಗಿ ಲಕ್ಷ್ಮೀದೇವಮ್ಮ ಅವರನ್ನು ನೇಮಿಸಲಾಗಿದೆ.
ನಿಧಿ ಭೇಟೆ ಸ್ಪರ್ಧೆ
ತಿಪಟೂರು: ಜಯಕರ್ನಾಟಕ ವೇದಿಕೆ ವತಿಯಿಂದ 58ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನಿಧಿ ಭೇಟೆ (ದ್ವಿಚಕ್ರವಾಹನದಲ್ಲಿ) ಸ್ಪರ್ಧೆಯನ್ನು ಪಟ್ಟಣದ ಬಯಲು ರಂಗಮಂದಿರದಲ್ಲಿ ಭಾನುವಾರ ಬೆಳಿಗ್ಗೆ 9ಗಂಟೆಗೆ ಆಯೋಜಿಸಲಾಗಿದೆ. ಭಾಗವಹಿಸಲು ಆಸಕ್ತಿಯುಳ್ಳವರು ಮೊ. 9141750763, 9844950334 ಸಂಪರ್ಕಿಸಬಹುದು. ಸಂಜೆ ರಸ ಸಂಜೆ ಕಾರ್ಯಕ್ರಮ ಏರ್ಪಡಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

