ಖಾಸಗಿಗಿಂತ ಸರ್ಕಾರಿ ಶಾಲೆಯೇ ಮೇಲು: ಶಾಸಕ
ಕನ್ನಡಪ್ರಭ ವಾರ್ತೆ ಕೊರಟಗೆರೆ, ಡಿ.22
ಖಾಸಗಿ ಶಾಲೆಗಳಿಗಿಂತ ಇಂದು ಸರ್ಕಾರಿ ಶಾಲೆಗಳು ಹೆಚ್ಚು ಪರಿಣಾಮಕಾರಿಯಾದ ಭೋದನೆಯನ್ನು ಮಾಡುತ್ತಿದ್ದು ಪ್ರತಿಯೊಬ್ಬರು ಖಾಸಗಿ ಶಾಲೆಗೆ ಮೊರೆ ಹೋಗದೆ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ ಎಂದು ಶಾಸಕ ಪಿ.ಆರ್. ಸುಧಾಕರ್ಲಾಲ್ ತಿಳಿಸಿದರು.
ತಾಲೂಕಿನ ಅಕ್ಕಿರಾಂಪುರ ಪಂಚಾಯ್ತಿಯ ಹೊಸಹಳ್ಳಿಯಲ್ಲಿನ ಹೊಸ ಶಾಲೆಯ ಕಟ್ಟಡ ಮತ್ತು ಶಾಲಾ ಕಾಂಪೌಂಡ್ ಉದ್ಘಾಟಿಸಿ ಮಾತನಾಡಿ, ಮುಂಬರುವ ದಿನದಲ್ಲಿ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಎಡುಸ್ಯಾಟ್ ಮಾದರಿಯಲ್ಲಿ ಶಿಕ್ಷಣವನ್ನು ನೀಡಲು ತಯಾರು ಮಾಡುತ್ತಿದ್ದು ಎಲ್ಲಾ ಸರ್ಕಾರಿ ಶಾಲೆಗಳು ಉತ್ತಮವಾಗಲಿದ್ದು ಪೋಷಕರು ಮಕ್ಕಳ ವಿದ್ಯಾಬ್ಯಾಸದ ಬಗ್ಗೆ ಚಿಂತಿಸಬೇಕಾದ ಅವಶ್ಯಕತೆ ಇಲ್ಲಾ ಎಂದರು.
ಜೆಡಿಎಸ್ ಮುಖಂಡ ಎಲ್. ರಾಜಣ್ಣ ಮಾತನಾಡಿ ಶಾಲೆಯ ಆವರಣ ಮತ್ತು ಶಾಲೆಯನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಿ ಮಾದರಿ ಶಾಲೆಯನ್ನಾಗಿ ಮಾಡಲು ಗ್ರಾಮಸ್ಥರು ಪ್ರೋತ್ಸಾಹಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿ.ಪಂ ಸದಸ್ಯೆ ದಾಕ್ಷಾಯಿಣಿ, ತಾಪಂ ಅಧ್ಯಕ್ಷ ಅನಿತಾ, ಉಪಾಧ್ಯಕ್ಷ ಸಂಗೀತಾ, ಬಿಇಒ ಐ.ಎಸ್ ಮಹೇಶ್, ಅಕ್ಕಿರಾಂಪುರ ಗ್ರಾ.ಪಂ ಅಧ್ಯಕ್ಷ ವೆಂಕಟರಣಪ್ಪ,ಸದಸ್ಯ ನಯಾಜ್, ರಾಮಕೃಷ್ಣಯ್ಯ, ಸಂಜೀವಮ್ಮ ಸಿಆರ್ಪಿ ಹನುಮಂತರಾಯಪ್ಪ, ಮುಖಂಡರಾದ ಎಲ್. ರಾಜಣ್ಣ, ಚನ್ನಬಸವಾರಾಧ್ಯ, ಎಸ್ಡಿಎಂಸಿ ಅಧ್ಯಕ್ಷ ಅರ್. ಜಿ. ಬಸವರಾಜು, ಸದಸ್ಯರಾದ ಎಚ್.ಕೆ. ಶಾಂತಕುಮಾರ್, ಲಕ್ಷ್ಮೀವೀರಣ್ಣ, ಪಿಡಿಒ ಆನಂದ್ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

