ತುಮಕೂರು

ಸ್ಲಂ ನಿವಾಸಿಗಳಿಗೆ ನಿವೇಶನ: ಕೆಜೆಎಸ್ ಅಭಿನಂದನೆ

Published On :

ಕನ್ನಡಪ್ರಭ ವಾರ್ತೆ ತುಮಕೂರು ಡಿ.22
ಸ್ಲಂ ನಿವಾಸಿಗಳ ನಿರಂತರ ಹೋರಾಟದಿಂದಾಗಿ ಮನೆಗಳ ನಿರ್ಮಾಣಕ್ಕೆ 12 ಎಕರೆ ಜಾಗ ನೀಡಲು ನಿರ್ಧರಿಸಿರುವುದು ಐತಿಹಾಸಿಕ ಗೆಲುವು ಎಂದು ಕರ್ನಾಟಕ ಸ್ಲಂ ಜನಾಂದೋಲನದ ನರಸಿಂಹಮೂರ್ತಿ ಅಭಿಪ್ರಾಯಪಟ್ಟರು.
ಅವರು ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ಎರಡು ದಶಕಗಳಿಂದ ಸ್ಲಂ ನಿವಾಸಿಗಳ ಬದುಕುವ ಹಕ್ಕು  ಸ್ವಾಭಿಮಾನಯುತ ಹೋರಾಟದಿಂದಾಗಿ 2000ನೇ ಇಸವಿಯಿಂದ ಪಾರಂಭಿಸಿದ ಕೊಳಗೇರಿ ಜನರ ಸಂಘಟನೆಯ ಹೋರಾಟದ ಫಲವಾಗಿ 2012ರಲ್ಲಿ ಆಗಿನ ಶಾಸಕ ಎಸ್. ಶಿವಣ್ಣ ಆಶ್ರಯ ಸಮಿತಿಯ 12 ಎಕರೆ ಜಾಗವನ್ನು ಕೊಳಗೇರಿ ನಿವಾಸಿಗಳ ಪುನರ್ ವಸತಿಗೆ ಮಂಜೂರು ಮಾಡಿದ್ದರು. ಈ ಭೂಮಿ ಪಡೆಯಲು ತುಮಕೂರು ಜಿಲ್ಲಾ ಕೊಳಗೇರಿ ಸಮಿತಿಯು ಸತತ ಹೋರಟ ಮತ್ತು ಒತ್ತಡದ ಫಲವಾಗಿ ಪಡೆಯಲಾಗಿದೆ.
ಹಾಲಿ ಶಾಸಕ ಡಾ. ಎಸ್. ರಫಿಕ್ ಅಹ್ಮದ್ ಕೇಂದ್ರದ ರಾಜೀವ್ ಆವಾಜ್ ಯೋಜನೆಯಲ್ಲಿ ನಗರದಲ್ಲಿರುವ ಅತಂತ್ರ ಸ್ಥಿಯಲ್ಲಿರುವ 6 ಕೊಳಚೆ ಪ್ರದೇಶಗಳಲ್ಲಿರುವ 625 ನಿವಾಸಿಗಳ ಪುನರ್ ವಸತಿ ಸೇರಿದ್ದಂತೆ ಒಟ್ಟು 1200  ಮನೆಗಳ ನಿರ್ಮಾಣಕ್ಕೆ ದಿಬ್ಬೂರಿನಲ್ಲಿ  ಮನೆ ನಿರ್ಮಿಸಸು 68, 25.75 ಕೋಟಿ ಬಿಡುಗಡೆಯಾಗಿದ್ದು 2ನೇ ಹಂತದಲ್ಲಿ 9 ಕೊಳಚೆ ಪ್ರದೇಶಗಳಲ್ಲಿ ಇನ್ಸಿಟಿವ್ ಮಾದರಿಯಲ್ಲಿ ಮನೆ ನಿರ್ಮಿಸಸು 96 ಕೋಟಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಇದು ಸಹ ಅನುಮೋದನೆ ಗೊಂಡಿರುತ್ತದೆ. ಇದಕ್ಕೆ ಸಂಬಂದಿಸಿದಂತೆ ಕೊಳಗೇರಿ ನಿವಾಸಿಗಳ ಸಮಿತಿಗೆ ವಿಧಾನಸಭೆ ಚುನವಾಣೆಯ ಪ್ರಣಾಳಿಕೆಯ ಭರವಸೆಯಂತೆ ಶಾಸಕರು ಕಾರ್ಯೋನ್ಮೋಮುಖರಾಗಿದ್ದಾರೆ ಎಂದರು.
ಜ.4 ರಂದು ಸ್ಲಂ ಹಬ್ಬ: ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿಯು ಜ.4 ರಂದು ಸಾಧನಾ  ಸಮಾವೇಶ ಮತ್ತು  ಸ್ಲಂ ಹಬ್ಬವನ್ನು ನಡೆಸಲಾಗುತ್ತಿದ್ದು, ಈ ಸಮಾವೇಶವನ್ನು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ನಗರ ಶಾಸಕ ಡಾ. ಎಸ್ ರಫೀಕ್ ಅಹ್ಮದ್, ಆತಿಥಿಗಳಾಗಿ ಶಾಸಕ ಕೆ.ಎನ್. ರಾಜಣ್ಣ, ವಿಧಾನ ಪರಿಷತ್ ಸದಸ್ಯ ಡಾ. ಎಂ. ಆರ್.ಹುಲಿನಾಯ್ಕರ್, ಜಿಲ್ಲಾಧಿಕಾರಿ ಕೆ.ಎಸ್.ಸತ್ಯಮೂರ್ತಿ ರವರು ಭಾಗವಹಿಸುವರು ಎಂದರು.  ಸೈಯದ್ ಅಲ್ತಾಫ್ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.