ಹೊಸ ರುಚಿ, ಅಭಿರುಚಿ ಬೆಳೆಸಿದವರು ಜಿಎಸ್ಸೆಸ್
ತುಮಕೂರು: ಎಸ್ಸೆಸ್, ಕವಿಯಾಗಿ, ಕಾವ್ಯ ಮೀಮಾಂಸಕರಾಗಿ, ಅಧ್ಯಾಪಕರಾಗಿ ಹಾಗೂ ಸಾಹಿತ್ಯ ಆಡಳಿತಗಾರರಾಗಿ ಕನ್ನಡಿಗರಲ್ಲಿ ಸಾಹಿತ್ಯ , ಸಂಸ್ಕೃತಿಗಳ ಹೊಸ ರುಚಿ, ಅಭಿರುಚಿಗಳನ್ನು ಬೆಳೆಸಿದವರು ಎಂದು ಸೂಫ್ಹಾ ವಿದ್ಯಾಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ಡಾ. ಇಂತಿಯಾಜ್ ಅಹಮದ್ ಅಭಿಪ್ರಾಯಪಟ್ಟರು.
ಗೂಳೂರಿನ ವಿದ್ಯಾ ಸಂಸ್ಥೆಯಲ್ಲಿ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ನಿಧನದ ಅಂಗವಾಗಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಸಂತಾಪ ಅರ್ಪಿಸಿ ಮಾತನಾಡಿದ ಅವರು ಜಿ.ಎಸ್. ಶಿವರುದ್ರಪ್ಪನವರು ಪಂಪ ಪ್ರಶಸ್ತಿ ವಿಜೇತರು. ಗೋವಿಂದ ಪೈ, ಕುವೆಂಪು ನಂತರ ಮೂರನೆಯ ರಾಷ್ಟ್ರಕವಿ ಎಂಬ ಹೆಗ್ಗಳಿಕೆಗೆ ಪಾತ್ರರಾದವರು ಎಂದರು.
ಸುಮಾರು ಐದೂವರೆ ದಶಕಗಳಿಂದ ಕಾವ್ಯ ಕೃಷಿ ಮಾಡುತ್ತಿರುವ ಶಿವರುದ್ರಪ್ಪ, ಕವಿ ಮಾತ್ರವಲ್ಲ, ಬರಹಗಾರ, ವಿಮರ್ಶಕ, ವಿಶ್ಲೇಷಕ ಹಾಗೂ ನವೋದಯ ಮತ್ತು ನವ್ಯ ಪ್ರಕಾರಗಳೆರಡರಲ್ಲೂ ಕಾವ್ಯ ರಚನೆ ಮಾಡಿರುವ ಮಹಾನ್ ಕವಿಯಾಗಿದ್ದರು ಎಂದು ಹೇಳಿದರು.
ಡಾ.ಜಿ.ಎಸ್. ಶಿವರುದ್ರಪ್ಪನವರ ಕಾಲದಲ್ಲೇ ಕನ್ನಡ ವಿಭಾಗವು ಕನ್ನಡ ಅಧ್ಯಯನ ಕೇಂದ್ರವಾಯಿತು. ಜಿಎಸ್ಎಸ್ ಅವರ ಕಾವ್ಯ ಕವಿತೆಯಾಗಿ ಕನ್ನಡಿಗರ ಮನಸ್ಸಿನಲ್ಲಿ ಮನೆಮಾತಾಗುವಂತೆ ಮಾಡಿದೆ. ಕರ್ನಾಟಕದ ನೆಲ, ಜಲ, ಭಾಷೆ ಮೇಲೆ ಕವಿತೆಯನ್ನು ರಚಿಸಿರುವ ಜಿಎಸ್ಎಸ್ ಅವರನ್ನು ನಾವೆಂದು ಮರೆಯುವಂತಿಲ್ಲ ಎಂದರು.
ಡಾ. ಈಶ್ವರರೆಡ್ಡಿ, ಗೂಳೂರಿನ ಯುವ ಮುಖಂಡ ಹನುಮೇಶ್, ಗೋವರ್ಧನ್, ಪ್ರಾಧ್ಯಾಪಕಿ ಫೀರ್ ದೊಸ್, ಫಹಿಮಾಭಾನು, ಕಾಂತರಾಜು ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

