ಸೂಲಗಿತ್ತಿ ನರಸಮ್ಮಗೆ ರಾಯಲುಸೀಮೆ ರತ್ನ
ತುಮಕೂರು: ಪಾವಗಡ ತಾಲೂಕು ಕೃಷ್ಣಾಪುರ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ರಾಜ್ಯ ಮತ್ತು ರಾಷ್ಟ್ರಪ್ರಶಸ್ತಿ ವಿಜೇತೆ ಸೂಲಗಿತ್ತಿ ನರಸಮ್ಮ ಅವರಿಗೆ ರಾಯಲುಸೀಮೆ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಮಾತನಾಡಿದ ಮುಖ್ಯೋಪಾಧ್ಯಾಯ ವಿಜಯಕುಮಾರ್, ನರಸಮ್ಮ ಅವರು ಆಂಧ್ರ ಮತ್ತು ಕರ್ನಾಟಕ ಎರಡು ರಾಜ್ಯಗಳ ಗಡಿಯಲ್ಲಿ ಪ್ರಸೂತಿ ಸೇವೆ ಸಲ್ಲಿಸಿ ಗಡಿನಾಡಿನ ಕೀರ್ತಿಯನ್ನು ಬೆಳಗಿಸಿ ರಾಯಲುಸೀಮೆ ರತ್ನರಾಗಿದ್ದಾರೆ ಎಂದರು.
ಕಿರಿಯ ಪ್ರಾಥಮಿಕ ಶಾಲೆಯ ಉಪಾಧ್ಯಾಯ ಇರ್ಷಾದ್ ಪಾಷ ಮಾತನಾಡಿ ಯಾವ ಪದವಿಯನ್ನೂ ಪಡೆಯದೆ ಈ ಅಜ್ಜಿ ಸೂಲಗಿತ್ತಿ ಕೆಲಸದಲ್ಲಿ ಅವರು ಸಾಧಿಸಿದ ಸಾಧನೆಯಿಂದ ಭಾರತ ದೇಶವೇ ಒಂದು ಸಾರಿ ಪಾವಗಡದ ಕಡೆ ತಿರುಗಿ ನೋಡುವಂತೆ ಮಾಡಿದ ಕೀರ್ತಿ ನರಸಮ್ಮ ಅಜ್ಜಿಗೆ ಸಲ್ಲುತ್ತದೆ ಎಂದರು. ರೆವೆನ್ಯೂ ಇನ್ಸ್ಪೆಕ್ಟರ್ ಇಮಾಮ್ ಖಾನ್, ವಿಲೇಜ್ ಅಕೌಂಟೆಂಟ್ ಅರುಣಕುಮಾರ್, ಕೃಷ್ಣಮೂರ್ತಿ, ಫರೀದಾ ಟೀಚರ್, ಮಹೇಶ್ಬಾಬು, ಶಂಕರಪ್ಪ ಮಾತನಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

