ತುಮಕೂರು

ಬೆಂಕಿ ಆಕಸ್ಮಿಕ: 4 ಹುಲ್ಲಿನ ಬಣವೆಗಳು ಭಸ್ಮ

Published On :

ತುರುವೇಕೆರೆ: ತಾಲೂಕಿನ ಬಲಮಾದಿಹಳ್ಳಿಯಲ್ಲಿ ಕಣ ಮಾಡಲು ಸಿಧ್ಧತೆ ಮಾಡಿಕೊಂಡಿದ್ದ 4 ರಾಗಿ ಹುಲ್ಲಿನ ಬಣವೆಗೆ ಬೆಂಕಿ ತಗುಲಿದ ಪರಿಣಾಮ ಸಂಪೂರ್ಣ ಭಸ್ಮವಾಗಿರುವ ಘಟನೆ ನಡೆದಿದೆ.  ಗ್ರಾಮದಿಂದ ಕೆಲ ಅಂತರದಲ್ಲಿದ್ದ ಹುಲ್ಲಿನ ಬಣವೆಗೆ ರಾತ್ರಿ ಬೆಂಕಿ ತಗುಲಿದೆ. ಗ್ರಾಮದ ಜಗದೀಶ್ ಎಂಬುವವರಿಗೆ ಸೇರಿದ ಜಮೀನಿನಲ್ಲಿ ಮರಿಲಿಂಗಯ್ಯ ಎಂಬುವವರು ಬೇಸಾಯ ಮಾಡಿ ಸಂಗ್ರಹ ಮಾಡಿಟ್ಟಿದ್ದ ರಾಗಿ ಮೆದೆ, ಮಂಗಳಮ್ಮ, ಕಾಂತರಾಜು, ನಂಜಮ್ಮ ಹಾಗೂ ಬಸವರಾಜು ಎಂಬುವವರಿಗೆ ಸೇರಿದ ರಾಗಿ ಮೆದೆಗೆ ಬೆಂಕಿ ಬಿದ್ದಿದೆ. ವರ್ಷವಿಡೀ ಕಷ್ಟಪಟ್ಟು ಬೆಳೆದಿದ್ದ ಬೆಳೆ ಬೆಂಕಿಗೆ ಆಹುತಿಯಾಗಿದ್ದರಿಂದ ರೈತರಿಗೆ ತುಂಬಾ ನಷ್ಟವಾಗಿದೆ. ಬೆಂಕಿ ಕೆನ್ನಾಲಿಗೆ ಇತರೆ ಹುಲ್ಲಿನ ಬಣವೆಗೆ ಹಾನಿಯಾಗುವ ಸಾಧ್ಯತೆ ಇತ್ತು. ತುರುವೇಕೆರೆ ಹಾಗೂ ಚಿಕ್ಕನಾಯಕನಹಳ್ಳಿ ಯ ಅಗ್ನಿ ಶಾಮಕ ದಳ ಆಗಮಿಸಿ ಸಂಭವಿಸಬಹುದಾಗಿದ್ದ ಭಾರಿ ಅನಾಹುತವನ್ನು ತಪ್ಪಿಸಿತು. ಗ್ರಾಮಸ್ಥರೂ ಸಹ ಬೆಂಕಿ ಆರಿಸುವ ಪ್ರಯತ್ನದಲ್ಲಿ ಕೈ ಜೋಡಿಸಿದರು.
ಶಂಕೆ: ಗ್ರಾಮದಲ್ಲಿ ಬೆಂಕಿಗೆ ಆಹುತಿಯಾದ ಹುಲ್ಲಿನ ಬಣವೆಗೆ ಉದ್ದೇಶಪೂರ್ವಕವಾಗಿ ಯಾರೋ ದುಷ್ಕರ್ಮಿಗಳು ಬೆಂಕಿ ಹಾಕಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ. ದಂಡಿನಶಿವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸ್ಥಳಕ್ಕೆ ಕಂದಾಯ ಇಲಾಖಾ ಅಧಿಕಾರಿಗಳು ಆಗಮಿಸಿದ್ದರು. ಸುಮಾರು 2.50 ಲಕ್ಷ ರು.ಗಳ ನಷ್ಟ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ.
ಮಕ್ಕಳು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲಿ
ಶಿರಾ: ಪುಟ್ಟ ಮಕ್ಕಳು  ಸಾಂಸ್ಕೃತಿಕ  ಚಟುವಟಿಕೆಗಳಲ್ಲಿ ಪಾಲ್ಗೊಂಡು ತಮ್ಮಲ್ಲಿರುವ ಪ್ರತಿಭೆಯನ್ನು  ಸಾರ್ವಜನಿಕ ವೇದಿಕೆಯಲ್ಲಿ ಪ್ರಚುರಪಡಿಸಿದಾಗ ಅಂಜಿಕೆ ದೂರವಾಗಿ  ಜ್ಞಾನ ಮತ್ತು ಚುರುಕುತನ ವೃದ್ಧಿಯಾಗಲಿದ್ದು, ಮುಂದಿನ ಶೈಕ್ಷಣಿಕ ಪ್ರಗತಿಗೆ ಭದ್ರ ಬುನಾದಿಯಾಗಲಿದೆ ಎಂದು  ಸಿಡಿಪಿಓ ಸಿದ್ದಯ್ಯ ಹೇಳಿದರು.  ಅವರು ತಾಲೂಕಿನ ಯಂಜಲಗೆರೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಶು ಆಭಿವೃದ್ಧಿ ಇಲಾಖೆ ಹಾಗೂ ಹುಲಿಕುಂಟೆ  ಗ್ರಾಮ ಪಂಚಾಯತಿ ಸಹಭಾಗಿತ್ವದಲ್ಲಿ ಹಮ್ಮಿಕೊಂಡಿದ್ದ ಬಾಲಮೇಳ ಕಾರ್ಯಕ್ರಮವನ್ನು  ಉದ್ಘಾಟಿಸಿ ಮಾತನಾಡಿದರು. ಗ್ರಾಮೀಣ ಪ್ರದೇಶದಲ್ಲಿ ರೈತ ವರ್ಗ ತನ್ನ ಮಕ್ಕಳಿಗೆ  ಆಂಗ್ಲ ಮಾಧ್ಯಮದ ಶಿಕ್ಷಣಕ್ಕೆ ಹೆಚ್ಚು ಒತ್ತು  ನೀಡುತ್ತಿದ್ದು,  ಪುಟ್ಟ ಮಗು ಆಟವಾಡುವ ವಯಸ್ಸಿನಲ್ಲಿ  ಪುಸ್ತಕಗಳ ಹೊರೆ ಹೊರುವಂತ ಸ್ಥಿತಿ ನಿರ್ಮಾಣವಾಗಿದೆ. ಮಕ್ಕಳ ಪೋಷಣೆ ಜೊತೆಗೆ ಬುದ್ಧಿಬೆಳವಣಿಗೆಗೆ ವಿಶೇಷ ಗಮನ ನೀಡುತ್ತಿದ್ದು ರುಚಿಯಾದ ತಿಂಡಿ ವೈದ್ಯಕೀಯ ತಪಾಸಣೆ ಮಾಡಿಸುತ್ತಿದ್ದು, ಅಂಗನವಾಡಿಗೆ ದಾಖಲಿಸುವಂತೆ ಮನವಿ ಮಾಡಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.