ತುಮಕೂರು

ಶಾಸಕರಿಂದ ತಂಗುದಾಣ ಉದ್ಘಾಟನೆ

Published On :

ತಿಪಟೂರು: ಒಂದು ಹಳ್ಳಿಗೆ ಬೀದಿ ದೀಪ, ಚರಂಡಿ, ಕುಡಿಯುವ ನೀರು, ಶಾಲೆ, ದೇವಸ್ಥಾನ, ಸಮುದಾಯ ಭವನ ಮುಖ್ಯವಾಗಿದ್ದು, ಇದರ ಜೊತೆಗೆ ಗ್ರಾಮನೈರ್ಮಲ್ಯೀಕರಣಕ್ಕೆ ಹೆಚ್ಚು ಆದ್ಯತೆ ನೀಡಬೇಕೆಂದು ಶಾಸಕ ಕೆ.ಷಡಕ್ಷರಿ ತಿಳಿಸಿದರು.
ತಾಲೂಕಿನ ಮೇಗಲಕೊಪ್ಪಲು ಗ್ರಾಮದಲ್ಲಿ ತಂಗುದಾಣ ಮತ್ತು ಪಿ.ಎಂ.ಜೆ.ಎಸ್.ವೈ. ಗ್ರಾಮೀಣ ರಸ್ತೆ ಉದ್ಘಾಟಿಸಿ ಮಾತನಾಡಿದ ಅವರು ಈ ಭಾಗದಲ್ಲಿರುವ ಕೆಂಪಣ್ಣನಕಟ್ಟೆ ಮತ್ತು ಗುಂಗುರಮಳೆ ಕೆರೆಗಳಿಗೆ ನೀರು ಹರಿಸಲಾಗುವುದು. ಇಲ್ಲಿನ ಜನರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸಲಿದ್ದು, ಶಕ್ತಿಮೀರಿ ಕಾರ್ಯಚಟುವಟಿಕೆಗಳಿಗೆ ಒತ್ತು ನೀಡುವುದಾಗಿ ಭರವಸೆ ನೀಡಿದರು.
ತಾ.ಪಂ. ಸದಸ್ಯೆ ನಾಗರೂಪ ಮಂಜೇಗೌಡ ಮಾತನಾಡಿ ರಾಜ್ಯ ಸರ್ಕಾರವು ನೀಡುತ್ತಿರುವ 1ರು. ಅಕ್ಕಿ ಬಡವರ ಹಸಿವು ಹಿಂಗಿಸುತ್ತಿದ್ದು, ವೃದ್ಧಾಪ್ಯ ವೇತನ, ಹಸಿರು ಕಾರ್ಡ್ ದೊರಕಿಸಿಕೊಡುವಂತೆ ಶಾಸಕರಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿ.ಪಂ.ಸದಸ್ಯೆ ರಾಧಾ ನಾರಾಯಣಗೌಡ, ಜಿ.ಪಂ. ಕಾರ್ಯಪಾಲಕ ಎಂಜಿನಿಯರ್ ನರೇಂದ್ರಪ್ಪ, ತಾ.ಪಂ. ಜಯಪ್ಪ, ಮೋಹನ್‌ಕುಮಾರ್ ಜಿಪಂ ಎಂಜಿನಿಯರ್, ಕಾರ್ಯಕ್ರಮ ಆಯೋಜಕ ಚಂದ್ರೇಗೌಡ, ಗ್ರಾ.ಪಂ.ಸದಸ್ಯ ರೇವಣ್ಣ, ಮಾಜಿ ಅಧ್ಯಕ್ಷ ಮಲ್ಲೇಶಪ್ಪ, ನಂಜುಂಡಪ್ಪ, ತಾ.ಪಂ.ಮಾಜಿ ಸದಸ್ಯ ಎಂ.ಡಿ.ಮಹಾಲಿಂಗಪ್ಪ ಮತ್ತಿತರರಿದ್ದರು. ಸಿಆರ್.ಪಿ. ಸೋಮಶೇಖರ್ ನಿರೂಪಿಸಿ, ಶಿಕ್ಷಕರಾದ ಮೋಹನ್ ಕುಮಾರ್ ಸ್ವಾಗತಿಸಿ, ಎಸ್.ಕೆ. ರವೀಶ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.