ಓಟು ಹಾಕೋದು ಕಲೀರಿ: ಜಿಎಸ್ಬಿ
ತುಮಕೂರು: ಹಬ್ಬ-ಹರಿದಿನ ಆಚರಿಸೋದಷ್ಟೇ ಮುಖ್ಯವಲ್ಲ. ಸಮಾಜ ಮುಖಿಯಾಗಿ ಚಿಂತಿಸಬೇಕು. ಇದನ್ನು ಮೈತ್ರಿ ಸಂಘವಷ್ಟೇ ಅಲ್ಲ ಎಲ್ಲ ಮಹಿಳಾ ಸಂಘಟನೆಗಳು ಅರಿಯಬೇಕು ಎಂದು ಸಂಸದ ಜಿ.ಎಸ್. ಬಸವರಾಜು ಮಾರ್ಮಿಕವಾಗಿ ನುಡಿದರು. ತುಮಕೂರಿನ ಗಾಂಧಿನಗರದಲ್ಲಿ 816 ಓಟುಗಳಿವೆ. ಅದರಲ್ಲಿ ಶೇ.49 ರಷ್ಟು ಮಹಿಳೆಯರಿದ್ದಾರೆ. ಆದರೆ ಮತ ಹಾಕಿರೋರ ಸಂಖ್ಯೆ ಕೇವಲ 110 ಮಾತ್ರ. ಹೀಗಾದ್ರೆ ಪ್ರಜಾಪ್ರಭುತ್ವ ಯಶಸ್ವಿಯಾಗಲು ಸಾಧ್ಯವೇ ವಿದ್ಯಾವಂತ ಮಹಿಳೆಯರು ಮೊದಲು ಮತದಾನ ಮಾಡೋದನ್ನು ಕಲಿಯಬೇಕು. ಸಂಸದರ ನಿಧಿ ಬಳಕೆ ಮಾಡಿಕೊಳ್ಳೊದನ್ನ ಅರಿಯಬೇಕು. ಬರೀ ಗಂಡನ ಸಂಬಳ ನೆಚ್ಚಿಕೊಳ್ಳದೆ ಗೌರವಾನ್ವಿತಸ್ವಾವಲಂಬಿ ಬದುಕು ಸಾಗಿಸೋ ಬಗೆಯನ್ನು ಅರಿಯಬೇಕು ಎಂದು ಕರೆ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

