ಹಳ್ಳಿ ನಿರ್ಮಾಣದಲ್ಲಿ ಯುವ ಸಂಘ ಪಾತ್ರ ಮಹತ್ವದ್ದು
ತುಮಕೂರು: ಕೃಷಿಯಲ್ಲಿ ಹಿಮ್ಮುಖ, ನಗರ ವಲಸೆ, ದುಶ್ಚಟಗಳಿಗೆ ದಾಸರಾಗುತ್ತ ಕಲಹ ಇನ್ನಿತರೆ ವಿಷಯಗಳಿಂದ ಹಳ್ಳಿಗಳು ಇಂದು ಅನಾರೋಗ್ಯಕ್ಕೆ ಒಳಗಾಗುತ್ತಿವೆ. ಇಂತಹ ಪರಿಸ್ಥಿಯನ್ನು ದೂರಮಾಡಿ ಹಳ್ಳಿಗಳಲ್ಲಿ ಅರೋಗ್ಯಕರ
ವಾತಾವರಣ ನಿರ್ಮಾಣ ಮಾಡುವಲ್ಲಿ ಯುವ ಸಂಘಗಳ ಪಾತ್ರ ಮಹತ್ವದ್ದು ಎಂದು ಗುಬ್ಬಿ ತಾಲೂಕು ಅಂಕಸಂದ್ರ ಗ್ರಾಮ ಪಂಚಾಯ್ತಿ ಸದಸ್ಯ ಭೀಮಯ್ಯ ಹೇಳಿದರು.
ಅವರು ಸಿ.ಎಂ.ಸಿ.ಎ ಮತ್ತು ಬೆಳಕು ಯುವ ಸಂಘ ರಂಗನಹಳ್ಳಿ ಇವರ ಸಂಯುಕ್ತಾಶ್ರಯದಲ್ಲಿ ರಂಗನಹಳ್ಳಿಯಲ್ಲಿ ಏರ್ಪಡಿಸಿದ್ದ ಸಕ್ರಿಯ ನಾಗರಿಕತ್ವ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಿ.ಎಂ.ಸಿ.ಎ ಕಾರ್ಯಕ್ರಮ ಸಮಾಲೋಚಕ ಕೆ.ಟಿ. ತಿಪ್ಪೇಸ್ವಾಮಿಯವರು ಯಾವುದೆ ಕ್ಷೇತ್ರದಲ್ಲಿ ಬದಲಾವಣೆ ತರುವಲ್ಲಿ ಯುವಜನರು ಮುಂಚೂಣಿಯಲ್ಲಿದ್ದು ಅವರನ್ನು ಪ್ರೇರೇಪಿಸುವ ಕಾರ್ಯವಾಗಬೇಕಿದೆ ಎಂದರು.
ಸಂಪನ್ಮೂಲ ವ್ಯಕ್ತಿ ಜನಾರ್ದನ್ ಕೆಸರುಗದ್ದೆ, ಯುವ ಸಂಘದ ಅಧ್ಯಕ್ಷ ಅರುಣ್ ಕಾರ್ಯದರ್ಶಿ ಉಮೇಶ್ ಹಾಗೂ ಸಂಘದ ಸಲಹಾ ಸಮಿತಿ ಸದಸ್ಯ ನಾಗಣ್ಣ ಹಾಗೂ ಯುವ ಸಂಘದ ಎಲ್ಲಾ ಸದಸ್ಯರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

