ಮರಳಿ ಮಣ್ಣಿಗೆ ಹೋಗೋ ಮುನ್ನ ಸಾಧಿಸಿ
ತುರುವೇಕೆರೆ: ಯಾರೇ ಆಗಲಿ ಮರಳಿ ಮಣ್ಣಿಗೆ ಹೋಗುವ ಮೊದಲು ತಾವು ಹುಟ್ಟಿ ಬೆಳೆದ ನಾಡಿಗೆ ಗುರುತರವಾದ ಕಾಣಿಕೆ ನೀಡುವುದು ಮಾನವನಾಗಿ ಹುಟ್ಟಿದ ನಮಗೆ ಮುಖ್ಯವಾದುದು ಎಂದು ಆದಿ ಚುಂಚನಗಿರಿ ಮಠದ ನಿರ್ಮಲಾನಂದ ನಾಥ ಶ್ರೀಗಳು ಅಭಿಪ್ರಾಯ ಪಟ್ಟರು.
ಕಾಲಭೈರವೇಶ್ವರ ಕಲ್ಪತರು ಆಶ್ರಮದ ಸ್ವಾಮಿಗಳಾಗಿದ್ದ ಶಿವಕುಮಾರನಾಥ ಸ್ವಾಮೀಜಿಗಳ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡುತ್ತಿದ್ದರು. ಚುಂಚನಗಿರಿ ಮಠಾಧೀಶರಾಗಿದ್ದ ಡಾ.
ಬಾಲಗಂಗಾಧರ ನಾಥ ಸ್ವಾಮಿಗಳ ಪರಮ ಶಿಷ್ಯರಾಗಿದ್ದ ಶಿವಕುಮಾರನಾಥ ಸ್ವಾಮೀಜಿಯವರು ಜಿಲ್ಲೆಯಲ್ಲೇ ಶ್ರೀ ಮಠದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ಶೈಕ್ಷಣಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ತಾಲೂಕಿನಲ್ಲಿ ಕಲ್ಪತರು ಆಶ್ರಮ ನಿರ್ಮಾಣದ ವೇಳೆ ತಾಲೂಕಿನ ರೈತರು ಹಾಗೂ ಭಕ್ತಾದಿಗಳ ನೆರವಿನಿಂದ ನಿರ್ಮಿಸಿದ ಕಲ್ಪತರು ಆಶ್ರಮವನ್ನು ಎಲ್ಲರೂ ಮೆಚ್ಚುವಂತಹುದಾಗಿದೆ ಎಂದರು. ರಾಮಕೃಷ್ಣ ಆಶ್ರಮದ ಶ್ರೀಗಳಾದ ವೀರೇಶಾನಂದ ಸ್ವಾಮಿಗಳು ಮಾತನಾಡಿ ಶಿವಕುಮಾರನಾಥ ಸ್ವಾಮೀಜಿ ಗ್ರಾಮೀಣಾಭಿವೃದ್ಧಿಯ ಕನಸು ಕಂಡಿದ್ದ ಅಪರೂಪದ ವ್ಯಕ್ತಿಗಳಾಗಿದ್ದರು. ಅವರು ಆಧ್ಯಾತ್ಮಿಕ ಪರಿಚಾರಕರಾಗಿಯೂ ಸೇವೆ ಸಲ್ಲಿಸಿದ್ದರು. ಗ್ರಾಮಾಂತರ ಪ್ರದೇಶದಲ್ಲಿದ್ದ ಹಲವಾರು ಪ್ರಕರಣಗಳನ್ನು ನ್ಯಾಯಾಧೀಶರಂತೆ ವರ್ತಿಸಿ ನ್ಯಾಯ ನೀಡಿ ಎಲ್ಲರನ್ನೂ ಪ್ರೀತಿ ವಿಶ್ವಾಸದಿಂದ ನೋಡಿದ ಉದಾಹರಣೆಗಳೂ ಇದೆ ಎಂದರು.
ದುರಂತವೇ ಸರಿ: ಸಚಿವ ಜಯಚಂದ್ರ ಮಾತನಾಡಿ ಜಿಲ್ಲಾ ಮಟ್ಟದಲ್ಲಿ ಸಮುದಾಯದ ಮಠವನ್ನು ನಿರ್ಮಾಣ ಮಾಡಬೇಕೆಂಬ ಉದ್ದೇಶ ಈಡೇರದೇ ಹೋದದು ದುರಂತವೇ ಸರಿ ಎಂದರು. ಎಲ್ಲಾ ಜನಾಂಗದವರ ಆಶಾಕಿರಣವಾಗಿದ್ದ ಶ್ರೀಗಳ ನಿಧನ ಜಿಲ್ಲೆಗೇ ನಷ್ಟ ಉಂಟಾಗಿದೆ ಎಂದರು.
ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ ತಾಲೂಕಿಗೆ ಪ್ರಥಮ ಗುರುವಾಗಿದ್ದ ಶಿವಕುಮಾರ ನಾಥ ಸ್ವಾಮಿಗಳ ಪುತ್ಥಳಿಯನ್ನು ಕಲ್ಪತರು ಆಶ್ರಮದ ಮುಂಭಾಗ ನಿರ್ಮಿಸಲು ತಾವು ಆಸಕ್ತರಾಗಿದ್ದು ಅದಕ್ಕೆ ಶ್ರೀ ಮಠ ಅವಕಾಶ ಕಲ್ಪಿಸಬೇಕು ಎಂದರು.
ಸಮಾರಂಭದಲ್ಲಿ ಶ್ರೀ ಮಠದ ಕಾರ್ಯದರ್ಶಿಗಳಾದ ಪುರುಷೋತ್ತಮಾನಂದ ನಾಥ ಸ್ವಾಮೀಜಿ, ಬದರಿಕಾಶ್ರಮದ ಓಂಕಾರನಂದ ಸ್ವಾಮಿ ಹಾಗೂ ಮಠದ ಇತರೆ ಶಾಖಾ ಮಠದ ಹಲವಾರು ಶ್ರೀಗಳು ಉಪಸ್ಥಿತರಿದ್ದರು. ಸಂಸದ ಜಿ.ಎಸ್. ಬಸವರಾಜು, ವಿಧಾನ ಪರಿಷತ್ ಸದಸ್ಯ ಎಂ.ಡಿ.ಲಕ್ಷ್ಮೀನಾರಾಯಣ್, ಡಾ.ಹುಲಿನಾಯ್ಕರ್, ಮಾಜಿ ಶಾಸಕರಾದ ಎಚ್.ಬಿ.ನಂಜೇಗೌಡ, ಮುದ್ದಹನುಮೇಗೌಡ, ಕೆಜೆಪಿ ಮುಖಂಡ ಮಸಾಲಾ ಜಯರಾಂ, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಕಡೇಹಳ್ಳಿ ಸಿದ್ದೇಗೌಡ, ಎಪಿಎಂಸಿ ಅಧ್ಯಕ್ಷ ಕೊಂಡಜ್ಜಿ ವಿಶ್ವನಾಥ್, ಸ್ವಾತಂತ್ರ್ಯ ಹೋರಾಟಗಾರ ಎಂ.ಎಚ್. ನರಸಿಂಹಯ್ಯ, ಚಲನಚಿತ್ರ ನಿರ್ಮಾಪಕ ಗಂಡುಗಲಿ ಕೆ.ಮಂಜು ಭಾಗವಹಿಸಿದ್ದರು. ಮಂಗಿಕುಪ್ಪೆಯ ಗಂಗಣ್ಣನವರು ಪ್ರಕಟಿಸಿದ ಶಿವಕುಮಾರನಾಥ ಸ್ವಾಮೀಜಿಯವರ ಕ್ಯಾಲೆಂಡರ್ನ್ನು ನಿರ್ಮಲಾನಂದನಾಥ ಸ್ವಾಮೀಜಿ ಬಿಡುಗಡೆ ಮಾಡಿದರು.
ಪ್ರಾಂಶುಪಾಲ ಆನಂದರಾಜು ಸ್ವಾಗತಿಸಿದರು. ಸಿ.ಎನ್. ನಂಜುಂಡಪ್ಪ ನಿರೂಪಿಸಿದರು. ಪ್ರಾಚಾರ್ಯ ಸಿ.ನಂಜುಂಡಯ್ಯ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

