ತುಮಕೂರು

ರೈತರ ಸಮಾಧಿ ಮೇಲೆ ರೇಲ್ವೆ ಯೋಜನೆ ಬೇಡ

Published On :

ತುಮಕೂರು: ರೇಲ್ವೆ ಯೋಜನೆಗೆ ತಾಯಿ-ಮಗುವಿನಂತ ಸಂಬಂಧದ ಭೂಮಿಯನ್ನು ಹಾಗೂ ಬದುಕನ್ನು ತ್ಯಾಗಮಾಡುತ್ತಿರುವ ರೈತರಿಗೆ ವೈಜ್ಞಾನಿಕ ಭೂ ಪರಿಹಾರ ಮಾತ್ರವಲ್ಲದೆ ರೇಲ್ವೆ ಯೋಜನೆಯಿಂದ ಬರುವ ಲಾಭಾಂಶದಲ್ಲಿ ಪಾಲು ನೀಡಬೇಕೆಂಬ ನಿರ್ಣಯ ಕೈಗೊಳ್ಳಲಾಯಿತು.
ತುಮಕೂರು ಸಮೀಪದ ರಂಗಾಪುರದ ಗಣೇಶ ದೇವಸ್ಥಾನ ಬಳಿ ತುಮಕೂರು-ರಾಯದುರ್ಗ-ದಾವಣಗೆರೆ ರೇಲ್ವೆ ಯೋಜನೆ ಭೂ ಸ್ವಾಧೀನ ರೈತರ ಹೋರಾಟ ಸಮಿತಿ ವತಿಯಿಂದ  ಕರ್ನಾಟಕ ಪ್ರಾಂತ ರೈತ ಸಂಘದ ಜಿ.ಸಿ.ಭೈಯ್ಯಾರೆಡ್ಡಿ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ರೈತರ ಜಿಲ್ಲಾ ಮಟ್ಟದ ಸಮಾವೇಶದಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.
ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಭೈಯ್ಯಾರೆಡ್ಡಿ ಅವರು ಕಚೇರಿಗಳಲ್ಲಿ ಕುಳಿತು ಬಾಯಿಗೆ ಬಂದ ಕಾಯಿದೆಗಳನ್ನು ರೂಪಿಸಿ ರೈತರನ್ನು ಬೀದಿಗೆ ತಳ್ಳುವುದು ಯಾವ ನ್ಯಾಯ. ಸರ್ಕಾರಗಳು ಅಸ್ತಿತ್ವಕ್ಕೆ ಬರುವ ಮೊದಲೆ ಭೂಮಿ ರೈತರ ಕೈಯಲ್ಲಿತ್ತು. ಇತ್ತೀಚಿನ ಸರ್ಕಾರಗಳು ಅಭಿವೃದ್ಧಿಗೆ ಭೂಸ್ವಾದೀನ ಮಾಡುವಾಗ ರೈತರ ಒಪ್ಪಿಗೆ ಪಡೆಯುವುದು. ಅವರ ಜಾವಾಬ್ದಾರಿಯಾಗಿರುತ್ತದೆ ಎಂದರು.
ಆದರೆ ಎಲ್ಲಾ ಕಾನೂನುಗಳನ್ನು ಗಾಳಿಗೆ ತೂರಿ ಏಕ ಪಕ್ಷೀಯವಾಗಿ ರೈತರ ಸಮಾದಿಯ ಮೇಲೆ ರೇಲ್ವೆ ಯೋಜನೆ ರೂಪಿಸುವುದು ಅತ್ಯಂತ ಅಮಾನವೀಯವಾಗಿದೆ. ರೈತರ ಬದುಕನ್ನು ನಾಶಮಾಡುವ ಸರ್ಕಾರ ಆಡಳಿತದಲ್ಲಿ ಉಳಿದಿಲ್ಲ ಇದರಿಂದ ಸಿದ್ದರಾಮಯ್ಯ ಸರ್ಕಾರ ಪಾಠ ಕಲಿಯದಿದ್ದರೆ ದುರಂತಕ್ಕೆ ಬಲಿಯಾಗುತ್ತಿದೆ ಎಂದರು.
ರೈತರು ಭಯಪಡುವ ಅಗತ್ಯವಿಲ್ಲ. ಜಾತಿ, ಪಕ್ಷಾತೀತ, ಧರ್ಮಾತೀತವಾಗಿ ಸಂಘಟನೆಗೊಂಡು ಪರಿಹಾರ ಪಡೆಯಬೇಕೆಂದರು. ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಪ್ರಗತಿಪರ ಚಿಂತಕ ಸಿ.ಯತಿರಾಜು ಅತೀ ಕಡಿಮೆ ಬೆಲೆಗೆ ರೈತರ ಭೂಮಿಯನ್ನು ಸ್ವಾದೀನಕ್ಕೆ ಪಡೆದು ಕಾರ್ಪೋರೆಟ್ ಕಂಪನಿ ಹಾಗೂ ಶ್ರೀಮಂತರಿಗೆ ಲಾಭತರುವ ಕುತಂತ್ರ ಇತ್ತೀಚಿಗೆ ಎಲ್ಲಕಡೆ ಕಂಡು ಬರುತ್ತಿದೆ. ರೈತರು ಅವರಿಗೆ ವೈಜ್ಞಾನಿಕ ಬೆಲೆ ಬರುವವರೆಗೂ ಯೋಜನೆಗಳಿಗೆ ಭೂಮಿ ನೀಡದಿರುವಂತೆ ಐಕ್ಯತೆ ಸಾಧಿಸಬೇಕೆಂದರು.
ಸಮಾವೇಶದಲ್ಲಿ ಭೂ ಸ್ವಾದೀನ ರೈತರ ಒಪ್ಪಿಗೆ ಪಡೆದು ಅವರ ಜೊತೆ ಮಾತುಕತೆ ನಡೆಸಿ ರೈತರ ಒಪ್ಪಂದ ಐ ತೀರ್ಪಿನಂತೆ ಲ್ಯಾಂಡ್ ಅಕ್ವಿಜೇಷನ್ ಅಂಡ್ ರಿಹ್ಯಾಬಿಲಿಟೇಷನ್ ಅಂಡ್ ರೀ ಸೆಟ್ಟಲ್ಮೆಂಟ್ 2014ರ ಹೊಸ ಕಾಯ್ದೆಯನ್ನು ಅಳವಡಿಸಿ ಭೂ ಪರಿಹಾರ ನೀಡಬೇಕು ಅಲ್ಲಿಯವರೆಗೆ ಭೂಮಿ ನೀಡದಿರಲು ತೀರ್ಮಾನಿಸಲಾಯಿತು.
ಸಚಿವರ ಮನೆ ಮುಂದೆ ಧರಣಿ: ಇದಕ್ಕೆ ಉಸ್ತುವಾರಿ ಸಚಿವರು ಈ ತಕ್ಷಣದಲ್ಲಿ ಸ್ಪಂದಿಸಿದ್ದರೆ ಬೆಂಗಳೂರಿನ ಅವರ ಮನೆ ಮುಂದೆ ಪ್ರತಿಭಟನಾ ಧರಣಿ ನಡೆಸಲು ನಿರ್ಧರಿಸಲಾಯಿತು ಮಾತ್ರವಲ್ಲದೆ ನಿರಂತರ ಹೋರಾಟ ರೂಪಿಸಲು ಎಲ್ಲಾ ತಾಲೂಕುಗಳ ರೈತ ಮುಖಂಡರುಗಳನ್ನೊಳಗೊಂಡಂತೆ ಹೋರಾಟ ಸಮಿತಿಯನ್ನು ರಚಿಸಲಾಯಿತು.
ರೇಲ್ವೆ ಕಾಮಗಾರಿಯ ಉದ್ಘಾಟನೆಯನ್ನು ಎಲ್ಲೇ ಪ್ರಾರಂಭಿಸಿದರು ಎಲ್ಲಾ ರೈತರು ಒಟ್ಟಾಗಿ ತಡೆಯಬೇಕೆಂದು ನಿರ್ಣಯ ಕೈಗೊಳ್ಳಲಾಯಿತು.
ವೇದಿಕೆಯಲ್ಲಿ ಪ್ರಾಂತ ರೈತ ಸಂಘದ ಮುಖಂಡ ಬಿ. ಉಮೇಶ್, ಹೋರಾಟ ಸಮಿತಿಯ ಮುಖಂಡರಾದ, ಚಿಕ್ಕರೇವಣ್ಣ ಟಿ.ಆರ್. ಯಲ್ಲಪ್ಪ, ಚಿದಾನಂದ್, ಸೀಬಯ್ಯ, ಕೇಶವಮೂರ್ತಿ, ತಿರುಮಲಯ್ಯ, ಶಿವಕುಮಾರ್, ಉಮಾಮಹೇಶ್, ಮಹಂತೇಶ್, ರಂಗಪ್ಪ, ಮುಂತಾದವರು ವೇದಿಕೆಯಲ್ಲಿದ್ದರು. ರೈತರ ಹೋರಾಟವನ್ನು ಬೆಂಬಲಿಸಿ ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್, ಎ.ಐ.ಟಿ.ಯು.ಸಿ ಕಾರ್ಯದರ್ಶಿ ಗಿರೀಶ್ ಮಾತನಾಡಿದರು.  ಪ್ರಾಂತರೈತ ಸಂಘದ ಸಂಚಾಲಕ ಅಜ್ಜಪ್ಪ ಸ್ವಾಗತಿಸಿ ನಿರೂಪಿಸಿದರು. ಹೋರಾಟ ಸಮಿತಿಯ ಮುಖಂಡ ಶಿವಬಸಪ್ಪ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.