ತುಮಕೂರು

ಚುನಾವಣೆಯಲ್ಲಿ ರಾಜ್ಯದ ಭ್ರಷ್ಟಾಚಾರ ಮುಖ್ಯ ವಿಷಯ

Published On :

ಚಿಕ್ಕನಾಯಕನಹಳ್ಳಿ: ಮುಂಬರುವ ಚುನಾವಣೆಯಲ್ಲಿ ರಾಜ್ಯದಲ್ಲಿ ನಡೆದಿರುವ ಭ್ರಷ್ಟಾಚಾರ ಪ್ರಮುಖ ವಿಷಯವಾಗಲಿದೆ ಎಂದು ಶಾಸಕ ಟಿ.ಬಿ.ಜಯಚಂದ್ರ ನುಡಿದರು.
ಫೆ.3ರಂದು ಅವರು ಪಟ್ಟಣದ ಕನಕ ಭವನದ ಬಳಿ ಯುವಕಾಂಗ್ರೆಸ್ ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡುತ್ತಿದ್ದರು. ಕೃಷಿ ರಂಗದಲ್ಲಿ ಮಹತ್ತರ ಬದಲಾವಣೆ ತರುವ ಉದ್ದೇಶದಿಂದ ಯುಪಿಎ-2 ಸರ್ಕಾರ ಎಫ್‌ಡಿಐ ಜಾರಿಗೆ  ವಿರೋಧ ಪಕ್ಷಗಳ ಅಡ್ಡಿಯಿಂದಾಗಿ ತೊಡಕಾಗಿದೆ. ಇದರಿಂದ ಕೃಷಿಯಲ್ಲಿ ನಿರಂತರ ನಷ್ಟಹೊಂದಿ ಕೃಷಿಯನ್ನು ತ್ಯಜಿಸಿ ನಗರಕ್ಕೆ ವಲಸೆ ಹೋಗುತ್ತಿರುವ ರೈತರನ್ನು ಗ್ರಾಮೀಣ ಪ್ರದೇಶಗಳಲ್ಲಿ ನೆಲೆ ನಿಲ್ಲುವಂತೆ ಮಾಡುವ ಶಕ್ತಿ ಎಫ್‌ಡಿಐನಲ್ಲಿದೆ. ಅಂತರ್ಜಲ ದುರ್ಬಳಕೆ ತಡೆಗಟ್ಟುವ ನೆಪದಲ್ಲಿ ಸರ್ಕಾರ ರಾಜ್ಯದ 35 ತಾಲೂಕುಗಳಲ್ಲಿ ಕೊಳವೆ ಬಾವಿ ಕೊರೆಯಲು ನಿರ್ಬಂಧ ಹೇರಿದೆ. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಪ್ರಾಧಿಕಾರ ರಚಿಸಿ ರೈತ ತನ್ನ ಜಮೀನಿನಲ್ಲಿ ಕೊಳವೆ ಬಾವಿ ಕೊರೆಸಲು ಸರ್ಕಾರದ ಅನುಮತಿ ಪಡೆಯ
ಬೇಕಾಗುತ್ತದೆ. ಇದರಿಂದ ಕೃಷಿರಂಗ ಸಂಕಷ್ಟಕ್ಕೀಡಾಗುವ ಕಾಲ ಸನ್ನಿಹಿತವಾಗಿದೆ ಎಂದರು.
 ಶಾಸನ ಸಭೆಯ ಇತಿಹಾಸದಲ್ಲಿ ನಡೆದಿರದ ಸ್ಪೀಕರ್ ಹುದ್ದೆಯ ದುರುಪಯೋಗ ಈ ಸರ್ಕಾರದಲ್ಲಾಗಿದೆ.ಅವರು ಮುಖ್ಯಮಂತ್ರಿ  ಕೈಗೊಂಬೆಯಂತಾಗಿದ್ದಾರೆ. ರೇಷನ್ ಕಾರ್ಡ್, ವೃದ್ಧಾಪ್ಯವೇತನ ಮುಂತಾದ ಸೌಲಭ್ಯಗಳು ಬರೀ ಲಂಚ ನೀಡಿದರೆ ಮಾತ್ರ ದೊರೆಯುತ್ತವೆ. ಇದಕ್ಕೊಂದು ಅಂತ್ಯ ಹಾಡಬೇಕೆಂದರೆ ಕಾಂಗ್ರೆಸ್ ಪಕ್ಷವನ್ನು ಮರಳಿ ಅಧಿಕಾರಕ್ಕೆ ತನ್ನಿ ಎಂದರು.      
ಈ ಸಂದರ್ಭದಲ್ಲಿ ತಾಲೂಕು ಉಸ್ತುವಾರಿ ಕ್ಯಾಪ್ಟನ್ ಸೋಮಶೇಖರ್, ಮಾಜಿ ಶಾಸಕ ಬಿ. ಲಕ್ಕಪ್ಪ, ಸೀಮೆ ಎಣ್ಣೆ ಕೃಷ್ಣಯ್ಯ, ಕುರುಬರಹಳ್ಳಿ ಶಿವಣ್ಣ, ಗುರುಸಿದ್ದಯ್ಯ, ಎಚ್.ಬಿ.ಎಸ್. ನಾರಾಯಣಗೌಡ, ಪ್ರಧಾನಕಾರ್ಯದರ್ಶಿ ಕೆ.ಜಿ. ಕೃಷ್ಣೇಗೌಡ, ವಾಸು ಮುಂತಾದವರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.