ತುಮಕೂರು

ಕೆ.ವಿ. ರಾಜು ಆಂತರಿಕ ಭಯೋತ್ಪಾದಕ

Published On :

ತುಮಕೂರು: ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಕೆ.ವಿ. ರಾಜು ಆಂತರಿಕ ಭಯೋತ್ಪಾದಕ ಎಂದು ತುಮಕೂರು ಬಿಜೆಪಿ ಸಂಸದ ಹಾಗೂ ವಾಟರ್‌ಗ್ರಿಡ್ ಕೆನಾಲ್ ಯೋಜನೆಗೆ ಹೋರಾಟ ರೂಪಿಸಿರುವ ಜಿ.ಎಸ್. ಬಸವರಾಜು ಆರೋಪಿಸಿದ್ದಾರೆ. ಈ ಬಾರಿಯ ಬಜೆಟ್‌ನಲ್ಲಿ ಪರಮಶಿವಯ್ಯ ವರದಿ ಜಾರಿ ಪ್ಯಾರ ಹಾಗೂ ವಾಟರ್ ಗ್ರಿಡ್ ಕೆನಾಲ್ ಯೋಜನೆ ಬಿಟ್ಟು ಹೋಗಲು ರಾಜು ನೇರ ಹೊಣೆ ಎಂದು ಬಸವರಾಜು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈತ ಬರಪೀಡಿತ ಕೋಲಾರ ಜಿಲ್ಲೆಯವನಾಗಿದ್ದರೂ ಪೈಪ್ ಲಾಬಿಗೆ ಮಣಿದು, ವಾಟರ್‌ಗ್ರಿಡ್ ಕೆನಾಲ್ ಯೋಜನೆಗೆ ಅಡ್ಡಿಪಡಿಸಿದ. ಮೋಸ ಮಾಡಿದ ಎಂದು ದೂರಿದರು. ಯಡಿಯೂರಪ್ಪ, ಸದಾನಂದಗೌಡ,  ಜಗದೀಶ್ ಶೆಟ್ಟರ್ ಅವರ ಅವಧಿಯಲ್ಲೂ ಈತ ಮುಂದುವರೆದಿದ್ದಾನೆ. ಈತನ ಕುತಂತ್ರದಿಂದಾಗಿ ಬಯಲು ಸೀಮೆ ಪ್ರದೇಶಗಳ ಕುಡಿಯುವ ನೀರಿಗೆ  ತೊಂದರೆಯಾಗುತ್ತಲೇ ಬಂದಿತ್ತು. ವಾಟರ್‌ಗ್ರಿಡ್ ಕೆನಾಲ್ ಹೋರಾಟ ರೂಪಿಸಬೇಕಾಗಿ ಬಂತು ಎಂದು ಸಂಸದರು ವಿವರಿಸಿದರು. ಮೊದಲು ಈತನನ್ನು ವಜಾ ಮಾಡಬೇಕು ಎಂದು ಜಿಎಸ್‌ಬಿ  ಆಗ್ರಹಿಸಿದ್ದಾರೆ.
30 ವರ್ಷಗಳ ಹೋರಾಟದ ಫಲ: ಕಳೆದ 30 ವರ್ಷಗಳ ಸತತ ಹೋರಾಟದ ಫಲವಾಗಿ ಹಾಗೂ 9 ಜಿಲ್ಲೆಗಳ ಜನತೆಯ ಬೆಂಬಲದಿಂದಾಗಿ ವಾಟರ್‌ಗ್ರಿಡ್ ಕೆನಾಲ್ ಯೋಜನೆಗೆ ರಾಜ್ಯ ಸರ್ಕಾರ ಅನುಮತಿ ನೀಡಿದೆ. ಹೋರಾಟಕ್ಕೆ ಬೆಂಬಲ ನೀಡಿದ 9  ಜಿಲ್ಲೆಗಳ ಜನತೆ, ಮುಖಂಡರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಜಿಎಸ್‌ಬಿ ತಿಳಿಸಿದರು. ಯೋಜನೆ ಜಾರಿಗೆ ಈಗ ಕೇಂದ್ರ ಸರ್ಕಾರದ ಒಪ್ಪಿಗೆ ಪಡೆಯಲು ಮತ್ತೆ ಹೋರಾಟ ಅತ್ಯಗತ್ಯವಾಗಿದೆ. 9 ಜಿಲ್ಲೆಗಳ ಜನತೆ ಬೆಂಬಲ ನೀಡುವಂತೆ ಜಿಎಸ್‌ಬಿ ಕೋರಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.