ಒತ್ತುವರಿಗೆ ಅಂಕುಶ
ತುಮಕೂರು: ತುಮಕೂರು ನಗರಸಭೆಯ ಎಲ್ಲಾ 35 ವಾರ್ಡ್ಗಳಲ್ಲಿ ಅನಧಿಕೃತ ಕಟ್ಟಡ ನಿರ್ಮಾಣ, ಕೊಳಾಯಿ ಸಂಪರ್ಕ, ಯುಜಿಡಿ, ರಸ್ತೆ ಒತ್ತುವರಿ ಮಾಡಿರುವುದು ಗಮನಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ವಿಚಕ್ಷಣ ದಳ ರಚಿಸಲಾಗಿದೆ.
ಅನಧಿಕೃತವಾಗಿ ಕೊಳಾಯಿ ಸಂಪರ್ಕ, ರೈಸಿಂಗ್ ಮತ್ತು ಬೋರ್ವೆಲ್ಗಳ ಮೂಲಕ ಸಂಪರ್ಕ ಪಡೆದಿರುವುದು, ಯುಜಿಡಿ ಸಂಪರ್ಕ ಪಡೆದಿರುವುದು, ನಿಯಮ ಉಲ್ಲಂಘಿಸಿ ಸಾರ್ವಜನಿಕ ಕೊಳಾಯಿಗಳ ಸಂಪರ್ಕ ಮತ್ತು ಪೈಪ್ ಅಳವಡಿಸಿಕೊಂಡು ನೀರು ಬಿಟ್ಟುಕೊಂಡಿರುವುದು ನಗರಸಭೆ ಗಮನಕ್ಕೆ ಬಂದಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎನ್ನುತ್ತಾರೆ ನಗರಸಭಾ ಅಧ್ಯಕ್ಷೆ ಗೀತಾ.
ತಾವು ಸೇರಿದಂತೆ ನಗರಸಭೆ ಸದಸ್ಯರು ನಗರ ಸಂಚಾರ ಸಮಯದಲ್ಲಿ ಈ ಅಕ್ರಮಗಳು ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಅನಧಿಕೃತ ಕಟ್ಟಡ ನಿರ್ಮಾಣ, ಕೊಳಾಯಿ ಸಂಪರ್ಕ, ಯುಜಿಡಿ ಸಂಪರ್ಕ, ರಸ್ತೆ ಒತ್ತುವರಿ, ಪಾರ್ಕ್, ಸಾರ್ವಜನಿಕ ಸ್ಥಳ, ನಗರಸಭೆ ಸ್ವತ್ತುಗಳನ್ನು ಒತ್ತುವರಿ ಮಾಡಲಾಗಿದೆ. ಅಲ್ಲದೇ ಮಂಜೂರಾತಿ ನಕ್ಷೆ ಉಲ್ಲಂಘಿಸಿ ಕಟ್ಟಡ ನಿರ್ಮಿಸಲಾಗಿದೆ. ಈ ಹಿನ್ನೆಲೆಯಲ್ಲಿ ಈ ಅಕ್ರಮಗಳನ್ನು ಪತ್ತೆ ಹಚ್ಚಲು ವಿಚಕ್ಷಣ ದಳ ರಚಿಸಲಾಗಿದೆ.
ತಂಡ ರಚನೆ: ನಗರ ವ್ಯಾಪ್ತಿಯ 35 ವಾರ್ಡ್ನ ಕಿರಿಯ ಅಭಿಯಂತರರು, ಕಂದಾಯ ನಿರೀಕ್ಷಕರು, ಆರೋಗ್ಯ ನಿರೀಕ್ಷಕರು, ಕರವಸೂಲಿಗಾರರು ಹಾಗೂ ವಾಲ್ವ್ಮೆನ್ರನ್ನೊಳಗೊಂಡಂತೆ ತಂಡ ರಚಿಸಲಾಗಿದೆ.
ಈ ತಂಡ ತಮಗೆ ಸಂಬಂಧಪಟ್ಟ ವಾರ್ಡ್ನ ಪರಿವೀಕ್ಷಣೆಯನ್ನು ಪ್ರತಿ ದಿನ ಮಧ್ಯಾಹ್ನ 2 ರಿಂದ 5 ರವರೆಗೆ ನಡೆಸಿ ಎಲ್ಲಾ ವಾರ್ಡ್ಗಳಲ್ಲಿ ಅಕ್ರಮವಾಗಿ ನಿರ್ಮಿಸಿರುವ ಹಾಗೂ ನಿರ್ಮಿಸುತ್ತಿರುವ ಕಟ್ಟಡಗಳ ಪರವಾನಗಿ ಪಡೆದು ನಕ್ಷೆ ಉಲ್ಲಂಘಿಸಿ ನಿರ್ಮಿಸುತ್ತಿರುವ ಕಟ್ಟಡಗಳ ಬಗ್ಗೆ ವಿವರ ಪಡೆಯಲು ಸೂಚಿಸಲಾಗಿದೆ.
ಎಸ್ಎಸ್ಪುರಂ ನಲ್ಲಿ ನೀರಿನ ಸಮಸ್ಯೆ: ತುಮಕೂರಿನ 15 ನೇ ವಾರ್ಡ್ನ ಸೋಮೇಶ್ವರ ಪುರಂ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಇದ್ದು ಸಾರ್ವಜನಿಕರ ವ್ಯಾಪಕ ದೂರಿನ ಹಿನ್ನೆಲೆಯಲ್ಲಿ ಸಮರ್ಪಕ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗಿದೆ. ಆಪರೇಟರ್ ಶೆಟ್ಟಳಯ್ಯರನ್ನು ವಾರ್ಡ್ 15 ರ ಪ್ರದೇಶದಿಂದ ತಕ್ಷಣವೇ ವರ್ಗಾಯಿಸಲಾಗಿದೆ. ಹೊಸದಾಗಿ ವಾರ್ಡ್ 15 ರ ಪ್ರದೇಶಕ್ಕೆ ಸೀಮಿತವಾಗಿ ನುರಿತ ಆಪರೇಟರ್ ನೇಮಕ ಮಾಡಲಾಗುವುದು.
ಈಗಾಗಲೇ ತೆಗೆದಿರುವ ವಾಲ್ವ್ ರಾಡ್ ಅಳವಡಿಕೆಗೆ ಕ್ರಮ ಕೈಗೊಳ್ಳಲಾಗುವುದು. ಲೀಕೇಜ್ ಸರಿಪಡಿಸಲಾಗುವುದು. ವಾಲ್ವ್ ಪ್ಯಾಕಿಂಗ್ ಹಾಕುವುದು, ವಾಲ್ವ್ ಇರುವ ಸ್ಥಳದಲ್ಲಿ ತೆಗೆದಿರುವ ಗುಂಡಿಯನ್ನು ವಿವಿಸಿ ಪೈಪ್ ಹಾಕಿ ಮುಚ್ಚಲಾಗುವುದು ಎಂದು ನಗರಸಭಾ ಅಧ್ಯಕ್ಷೆ ಗೀತಾ ತಿಳಿಸಿದ್ದಾರೆ.
ಸೋಮೇಶ್ವರಪುರಂನ 14 ಅಥವಾ 15ನೇ ತಿರುವುಗಳ ಮಧ್ಯದ ಅಡ್ಡರಸ್ತೆಯಲ್ಲಿ ತುರ್ತಾಗಿ ಹೊಸ ಬೋರ್ವೆಲ್ ಕೊರೆಸಿ ಅಗತ್ಯ ಸಲಕರಣೆ ಅಳವಡಿಸಿ ಮುಖ್ಯವಾಹಿನಿಗೆ ಸಂಪರ್ಕ ಕಲ್ಪಿಸಲಾಗುವುದು ಎಂದಿದ್ದಾರೆ ನಗರಸಭೆ ಅಧ್ಯಕ್ಷೆ ಗೀತಾ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

