ತುಮಕೂರು

ವಿವಿ ಸಿಂಡಿಕೇಟ್‌ಗೆ ಜನಪ್ರತಿನಿಧಿಗಳ ನಾಮನಿರ್ದೇಶನ ಬೇಡ: ಎಬಿವಿಪಿ ಮನವಿ

Published On :

ಹುಳಿಯಾರು: ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳ ಸಿಂಡಿಕೇಟ್‌ಗೆ ಕಡ್ಡಾಯವಾಗಿ ಇಬ್ಬರು ವಿಧಾನಸಭೆ ಹಾಗೂ ವಿಧಾನಪರಿಷತ್ ಸದಸ್ಯರ ನಾಮನಿರ್ದೇಶನ  ಮಾಡುವ ವಿಧೇಯಕಕ್ಕೆ ರಾಜ್ಯಪಾಲರು ಅಂಕಿತ ಹಾಕಬಾರದೆಂದು ಒತ್ತಾಯಿಸಿ ಹುಳಿಯಾರು ಹೋಬಳಿ ಅಖಿಲಭಾರತ ವಿದ್ಯಾರ್ಥಿ ಪರಿಷತ್ ಘಟಕದವರು ಮನವಿ ಮಾಡಿದ್ದಾರೆ. ಶನಿವಾರದಂದು ಪಟ್ಟಣದ ನಾಡಕಚೇರಿಗೆ ತೆರಳಿದ ಹುಳಿಯಾರು ಎಬಿವಿಪಿ ಕಾರ್ಯಕರ್ತರು  ರೆವಿನ್ಯೂ ಅಧಿಕಾರಿ ರಂಗನಾಥ್ ಅವರಿಗೆ ಮನವಿಪತ್ರ  ಸಲ್ಲಿಸಿದರು. ರಾಜ್ಯ ಸರ್ಕಾರದ ವಿಶ್ವವಿದ್ಯಾನಿಲಯಗಳ ಕಾಯ್ದೆ ತಿದ್ದುಪಡಿ ತಂದು ಡಾಕ್ಟರೇಟ್ ಪದವಿಯನ್ನು ಐದು ಜನರಿಗೆ ಸಿಮಿತಗೊಳಿಸಿರುವುದು ಹಾಗೂ ವಿಶ್ವವಿದ್ಯಾನಿಲಯಗಳ ಕುಲಪತಿಗಳ ವಿರುದ್ಧ ಆರೋಪ ಬಂದಾಗ ವಿಚಾರಣಾ ಸಮಿತಿ ರಚಿಸಿ ಮೂರು ತಿಂಗಳೊಳಗೆ ವರದಿ ಸಲ್ಲಿಸುವಂತೆ ಕೈಗೊಂಡಿರುವ ನಿರ್ಧಾರಗಳು ಉತ್ತಮಾಗಿದೆ. ಆದರೆ ವಿಶ್ವವಿದ್ಯಾನಿಲಯಗಳ ಸಿಂಡಿಕೇಟ್‌ಗೆ ರಾಜಕೀಯ ವ್ಯಕ್ತಿಗಳನ್ನು ನೇಮಕ ಮಾಡುವುದರಿಂದ ವಿಶ್ವವಿದ್ಯಾನಿಲಯವನ್ನು ರಾಜಕೀಯಗೊಳಿಸಿ ಶೈಕ್ಷಣಿಕ ಹಿತದ ನಿರ್ಧಾಗಳನ್ನು ಕೈಗೊಳ್ಳಲು ಅಸಾಧ್ಯಕರ ವಾತಾವರಣ ನಿರ್ಮಾಣವಾಗುತ್ತದೆ ಹಾಗೂ ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣದ ಕೊರತೆಯುಂಟಾಗುತ್ತದೆ. ಸಿಂಡಿಕೇಟ್‌ಗೆ ಜನಪ್ರತಿನಿಧಿಗಳ ಬದಲಾಗಿ ಶಿಕ್ಷಣತಜ್ಞರ ನೇಮಕ ಮಾಡುವುದು ಉಚಿತವೆಂದು ಎಬಿವಿಪಿ ಅಭಿಪ್ರಾಯಪಟ್ಟು ತಮ್ಮ ಮನವಿ ಪತ್ರದಲ್ಲಿ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.