ಚುನಾವಣೆ ನೀತಿ ಸಂಹಿತೆ: ಪರಿಶೀಲಿಸಲು ಸಮಿತಿ ರಚನೆ
ಶಿರಾ: ಪಟ್ಟಣದ ನಗರ ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆ ಸಂಬಂಧ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆಯಾದಲ್ಲಿ ಪರಿಶೀಲಿಸಲು ಅಧಿಕಾರಿಗಳ ಮಟ್ಟದ ನಗರ ಸ್ಥಳೀಯ ಸಂಸ್ಥೆವಾರು ಸಮಿತಿ ರಚಿಸಲಾಗಿದೆ.
ವಾರ್ಡ್ ಸಂಖ್ಯೆ 1 ರಿಂದ 31 ರ ವ್ಯಾಪ್ತಿಗೆ ಮಧುಗಿರಿ ಉಪವಿಭಾಗಾಧಿಕಾರಿಗಳು, ಶಿರಾ ತಹಸೀಲ್ದಾರ್, ಶಿರಾ ತಾಲೂಕು ವೃತ್ತ ಆರಕ್ಷಕ ನಿರೀಕ್ಷಕರು, ಉಪ ಅಬಕಾರಿ ಉಪ ನಿರೀಕ್ಷಕರು ಶಿರಾ, ಮೋಟಾರು ವಾಹನ ನಿರೀಕ್ಷಕರು ತುಮಕೂರು ನೇಮಿಸಲಾಗಿದೆ. ಈ ಸಮಿತಿಗಳು ಪ್ರತಿನಿತ್ಯ ಸ್ಥಳೀಯ ಸಂಸ್ಥೆ ವ್ಯಾಪ್ತಿಯ ಪ್ರದೇಶದಲ್ಲಿ ಯಾವುದೇ ಚುನಾವಣಾ ನೀತಿ ಸಂಹಿತಿ ಉಲ್ಲಂಘನೆಯಾದಲ್ಲಿ ಕಾನೂನು ಕ್ರಮ ಜರುಗಿಸುವಂತೆ ಆದೇಶಿಸಲಾಗಿದೆ. ಈ ಕೆಳಕಂಡ ಕಚೇರಿಗಳಲ್ಲಿ ಅಬಕಾರಿ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಲಾಗಿದ್ದು, ಅಕ್ರಮಗಳು ಕಂಡು ಬಂದಲ್ಲಿ ಸಾರ್ವಜನಿಕರು ಶಿರಾ ಅಬಕಾರಿ ನಿರೀಕ್ಷಕರ ಕಚೇರಿ ದೂ- 08135-277198 ಇಲ್ಲಿಗೆ ಮಾಹಿತಿ ನೀಡಬಹುದಾಗಿದೆ.
ಜಿಲ್ಲಾ ಕಾಂಗ್ರೆಸ್ನಲ್ಲಿ ಜಟಾಪಟಿ
ತುಮಕೂರು: ನಗರಸಭೆ ಚುನಾವಣೆ ಸಂಬಂಧ ತಮಗೆ ತುಮಕೂರು ನಗರದ ಕಾಂಗ್ರೆಸ್ ಬಿ ಫಾರಂ ನೀಡದಿದ್ದಕ್ಕೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಷಫಿ ಅಹಮದ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತುಮಕೂರಿನಲ್ಲಿ ಬುಧವಾರ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ನೇತೃತ್ವದಲ್ಲಿ ಸಭೆ ನಡೆಯಿತು. ಆಗ ತುಮಕೂರು ಜಿಲ್ಲೆಯ ಎಲ್ಲಾ 9 ತಾಲೂಕುಗಳ ಅಭ್ಯರ್ಥಿಗಳ ಬಿ ಫಾರಂ ಅನ್ನು ಆಯಾ ತಾಲೂಕು ಕಾಂಗ್ರೆಸ್ ಮುಖಂಡರಿಗೆ ನೀಡಲಾಯಿತು.
ಆದರೆ ತುಮಕೂರು ನಗರ ನಗರಸಭೆ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಯ ಬಿ ಫಾರಂ ಅನ್ನು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರು ತಮ್ಮ ಬೆಂಬಲಿಗ ವೇಣುಗೋಪಾಲ್ ಎಂಬುವರಿಗೆ ನೀಡಿದ್ದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರನ್ನು ಕೆರಳಿಸಿದೆ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿರುವ ತಮ್ಮ ಕೈಯಲ್ಲಿ 35 ವಾರ್ಡ್ನ ಬಿ ಫಾರಂ ಕೊಡದಿದ್ದರೆ ಹೇಗೆ ಎಂದು ಕೆಪಿಸಿಸಿ ಅಧ್ಯಕ್ಷರ ಬಳಿ ಅಸಮಾಧಾನ ತೋಡಿಕೊಂಡಿದ್ದಾರೆ. ಅಲ್ಲದೇ ತಾವು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೆ ರಾಜಿನಾಮೆ ನೀಡುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ.
ಶಿರಾ ನಗರಸಭೆಯ ಬಿ ಫಾರಂ ಅನ್ನು ಜಯಚಂದ್ರ ಅವರಿಗೂ, ಮಧುಗಿರಿ ರಾಜಣ್ಣ, ಪಾವಗಡ ವೆಂಕಟರಮಣಪ್ಪ ಅವರಿಗೆ ಹೀಗೆ ಆಯಾ ತಾಲೂಕು ಮುಖಂಡರಿಗೆ ನೀಡಲಾಗಿದೆ. ಆದರೆ ತುಮಕೂರು ನಗರದ್ದು ಮಾತ್ರ ವೇಣುಗೋಪಾಲ್ ಎಂಬುವರಿಗೆ ನೀಡಿದ್ದು ಅಸಮಾಧಾನಕ್ಕೆ ಕಾರಣವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

