'ಸೇವಾ ಮನೋಭಾವನೆ ಬೆಳೆಸಿಕೊಳ್ಳಿ'
ತಿಪಟೂರು: ರಾಷ್ಟ್ರೀಯ ಸೇವಾ ಯೋಜನೆಯು ಗಾಂಧೀಜಿಯವರ ಕನಸಿನ ಕೂಸು. ಈ ಯೋಜನೆಯ ಮೂಲಕ ವಿದ್ಯಾರ್ಥಿಗಳು ಸೇವಾ ಮನೋಭಾವನೆಯನ್ನು ಬೆಳಸಿಕೊಳ್ಳಬೇಕೆಂದು ಪ್ರೊ.ಎನ್. ಪರಮೇಶ್ವರಪ್ಪ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ನಗರದ ಕಲ್ಪತರು ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ತಾಲ್ಲೂಕಿನ ಬಾಗುವಾಳ ಮುನಿಯಪ್ಪ ದೇವಾಲಯದಲ್ಲಿ ಶ್ರೀ ಗುರುಪರದೇಶಿಕೇಂದ್ರ ಸ್ವಾಮೀಜಿಯವರ ಕೃಪಾಶೀರ್ವಾದದೊಂದಿಗೆ ನಡೆದ 2012-13ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಮಹಾಪುರುಷರುಗಳ ತತ್ವಾದರ್ಶಗಳನ್ನು ಅಳವಡಿಸಿಕೊಂಡು ಗ್ರಾಮೀಣ ಪ್ರದೇಶದಲ್ಲಿನ ಜನರಲ್ಲಿ ಇದರ ಬಗ್ಗೆ ಜಾಗೃತಿ ಮೂಡಿಸುತ್ತಾ ಮಾನವೀಯತೆಯೆಂಬ ತಳಹದಿಯ ಮೇಲೆ ಮೌಲ್ಯಗಳೆಂಬ ರತ್ನಗಳನ್ನು ಧರಿಸಿಕೊಂಡು ಸತ್ಪ್ರಜೆಗಳಾಗಬೇಕೆಂದರಲ್ಲದೆ ಶಿಬಿರದ ಯಶಸ್ವಿಗೆ ಕಾರಣಕರ್ತರನ್ನು ಅಭಿನಂದಿಸಿದರು.
ಅಧ್ಯಕ್ಷತೆ ವಹಿಸಿದ್ದ ಡಾ.ಎ.ಎಸ್. ಪಂಚಾಕ್ಷರಯ್ಯ ಎನ್.ಎಸ್.ಎಸ್. ಎಂಬ ಘಟಕ ಇಂದು ರಾಜ್ಯದಾದ್ಯಂತ ಎಲ್ಲಾ ಕಾಲೇಜುಗಳಲ್ಲಿ ಇದ್ದು ಅದರ ಮೂಲಕ ಗ್ರಾಮೀಣ ಆರೋಗ್ಯ, ಕೃಷಿ ಕಾನೂನಿನ ಅರಿವು ಮೊದಲಾದ ಕಾರ್ಯಕ್ರಮಗಳ ಬಗ್ಗೆ ತಿಳಿವಳಿಕೆ ಮೂಡಿಸುತ್ತಿದ್ದು, ಇದರ ಪ್ರಯೋಜವನ್ನು ಶಿಬಿರಾರ್ಥಿಗಳು ಪಡೆದುಕೊಳ್ಳಬೇಕೆಂದು ಕರೆ ನೀಡಿದರು.
ಎನ್ಎಸ್ಎಸ್ ಅಧಿಕಾರಿಗಳಾದ ಪ್ರೊ.ಕೆ.ಪಿ. ವೀರಣ್ಣ, ಪ್ರೊ. ಜಯಾನಂದಯ್ಯ, ಶಿಬಿರಾಧಿಕಾರಿ ಪ್ರೊ. ಬಿ.ಎಂ.ಚಿದಾನಂದಸ್ವಾಮಿ, ಸಹ ಶಿಬಿರಾಧಿಕಾರಿಗಳಾದ ಪ್ರೊ.ಕೆ. ಶ್ರೀನಿವಾಸಮೂರ್ತಿ, ಪ್ರೊ. ಸೋಮಶೇಖರ್, ಪ್ರೊ. ತಿಪ್ಪೇಶ್, ಪ್ರೊ. ಬಿ.ಸಿ.ವಿನುತ, ಮುಖ್ಯೋಪಾಧ್ಯಾಯ ಶಂಕರಲಿಂಗಪ್ಪ, ಸಹ ಶಿಕ್ಷಕಿ ಹೊನ್ನಮ್ಮ, ಗ್ರಾಮಸ್ಥರಾದ ಬಿ.ಟಿ. ರುದ್ರೇಗೌಡ, ಬೋರೇಗೌಡ, ನಾಗರಾಜು ಮತ್ತಿತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

