ತುಮಕೂರು

ಆತ್ಮವಿಶ್ವಾಸ ಹೆಚ್ಚಿಸುವ ಶಿಕ್ಷಣ ಅಗತ್ಯ: ವೀರೇಶಾನಂದಶ್ರೀ

Published On :

ತುಮಕೂರು: ಚಾರಿತ್ರ್ಯದ ನಿರ್ಮಾಣ ಮಾಡುವುದರ ಜತೆಗೆ, ಆತ್ಮವಿಶ್ವಾಸ ಹೆಚ್ಚಿಸುವ ಶಿಕ್ಷಣ ನೀಡಬೇಕು ಎಂದು ತುಮಕೂರು ರಾಮಕೃಷ್ಣ-ವಿವೇಕಾನಂದಾಶ್ರಮದ ಮುಖ್ಯಸ್ಥ ಡಾ.ವೀರೇಶಾನಂದ ಸರಸ್ವತಿ ಸ್ವಾಮೀಜಿ ಪ್ರತಿಪಾದಿಸಿದರು.
ತುಮಕೂರಿನ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗಾಗಿ ಎಸ್‌ಐಟಿಯಲ್ಲಿ ಏರ್ಪಡಿಸಿದ್ದ ಪ್ರೇರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಿಕ್ಷಣದ ಬಗ್ಗೆ ಸ್ವಾಮಿ ವಿವೇಕಾನಂದರ ದೃಷ್ಟಿಯನ್ನು ಉಲ್ಲೇಖಿಸಿದ ವೀರೇಶಾನಂದರು, ನಮಗೆ ಬೇಕಾಗಿರುವುದು ಚಾರಿತ್ರ್ಯ ನಿರ್ಮಾಣ ಮಾಡುವ, ಮನಸ್ಸಿನ ಶಕ್ತಿಯನ್ನು ಹೆಚ್ಚಿಸುವ, ಚತುರತೆ, ಸ್ವಾಭಿಮಾನ ಬೆಳೆಸುವ, ಸ್ವ ಸಾಮರ್ಥ್ಯದಿಂದ ಜೀವಿಸುವ ಶಿಕ್ಷಣ. ಚಾರಿತ್ರ್ಯ ಹವ್ಯಾಸವನ್ನು ಅವಲಂಬಿಸುರುತ್ತದೆ ಎಂದು ಪ್ರತಿಪಾದಿಸಿದರು.  ಹವ್ಯಾಸ ನಮ್ಮ ನಿತ್ಯದ ಚಟುವಟಿಕೆಗಳನ್ನು ಅವಲಂಬಿಸಿರುತ್ತದೆ. ಕೆಲಸ ಹಾಗೂ ಹವ್ಯಾಸಗಳು ಯೋಚನೆಯನ್ನು ಪ್ರಭಾವಗೊಳಿಸುತ್ತವೆ. ಯೋಚನೆ ಭವಿಷ್ಯವನ್ನು ರೂಪಿಸುತ್ತದೆ.  ಆದ್ದರಿಂದ ಚಾರಿತ್ರ್ಯವೇ ಜೀವನದ ಜೀವಾಳ. ಗುರಿಯೆಡೆಗೆ ಸಾಗಲು ಸುಲಭ ದಾರಿ. ಶಿಕ್ಷಣ ಮನಸ್ಸಿನ ಶಕ್ತಿಯನ್ನು ಹೆಚ್ಚಿಸುವಂತಿರಬೇಕು. ತನ್ನಲ್ಲಿ ತನಗೆ ನಂಬಿಕೆ ಭರಿಸುವ ಶಕ್ತಿಯನ್ನು, ಆತ್ಮವಿಶ್ವಾಸ ಹೆಚ್ಚಿಸುವ ಶಿಕ್ಷಣ ನೀಡಬೇಕಾಗಿದೆ ಎಂದರು.
ವಿವೇಕಾನಂದರು ಯುವಜನತೆಯ ಬಗ್ಗೆ ವಿಶ್ವಾಸ, ಶ್ರದ್ದೆ, ಇರಿಸಿದ್ದರು. ಉತ್ತಮ ಶಿಕ್ಷಣದ ಮೂಲಕ ದೇಶದ ಚಿತ್ರಣವನ್ನು ಬದಲಾಯಿಸಬಹುದೆಂದು ಪದೇ -ಪದೇ  ಹೇಳುತ್ತಿದ್ದರು. ಶಿಕ್ಷಣದ ಮೂಲಕ ಚಾರಿತ್ರ್ಯ, ಧಾರ್ಮಿಕತೆ ರೂಪುಗೊಳ್ಳುತ್ತದೆ. ಆದ್ದರಿಂದ ಯುವಜನತೆ ಧಾರ್ಮಿಕತೆಗೆ ಹೆಚ್ಚು ಒತ್ತು ನೀಡಬೇಕೆಂದು ಪ್ರತಿಪಾದಿಸಿದ್ದರು ಎಂದರು.
ಸಿದ್ದಗಂಗಾ ತಾಂತ್ರಿಕ ಕಾಲೇಜಿನ ನಿರ್ದೇಶಕ ಡಾ.ಎಚ್.ಎಂ. ಚನ್ನಬಸಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ಎಬಿವಿಪಿ ಮಾಜಿ ರಾಜ್ಯಾಧ್ಯಕ್ಷ ಡಾ. ಶ್ರೀನಿವಾಸ ಬಳ್ಳಿ ಅಧ್ಯಕ್ಷತೆ ವಹಿಸಿದ್ದರು.
 ರಾಜ್ಯ ಕಾರ್ಯಕಾರಿಣಿ ಸದಸ್ಯ ಅಮರೇಶ್ ಸ್ವಾಗತಿಸಿ, ನಗರಾಧ್ಯಕ್ಷ ಜಿ. ಹನುಮಂತಯ್ಯ ವಂದಿಸಿದರು. ನಗರ ಕಾರ್ಯದರ್ಶಿ ರವಿಕುಮಾರ್ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.