ತುಮಕೂರು

ಹುಳಿಯಾರಿನ ವಿವಿಧೆಡೆ ಗಣರಾಜ್ಯೋತ್ಸವ ಆಚರಣೆ

Published On :

ಹುಳಿಯಾರು: ಹೋಬಳಿಯಾದ್ಯಂತ ಧ್ವಜಾರೋಹಣ ನೆರವೇರಿಸಿ, ಸಿಹಿ ಹಂಚುವ ಮೂಲಕ 64ನೇ ಗಣರಾಜ್ಯೋತ್ಸವವನ್ನು  ಸಂಭ್ರಮದಿಂದ ಆಚರಿಸಲಾಯಿತು.
ಹುಳಿಯಾರು-ಕೆಂಕೆರೆ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಚಾರ್ಯ ಎಂ.ಎನ್.ನಾಗರಾಜು ಧ್ವಜಾರೋಹಣ ನೆರವೇರಿಸಿದರು. ಸಿಡಿಸಿ ಉಪಾಧ್ಯಕ್ಷ ನಂದಿಹಳ್ಳಿ ಶಿವಣ್ಣ, ಹಿರಿಯ ಉಪನ್ಯಾಸಕ ಮೂಗೇಶಪ್ಪ, ಉಪನ್ಯಾಸಕರಾದ ಹನುಮಂತಪ್ಪ, ಶಿವಯ್ಯ ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.
ಹುಳಿಯಾರು ಎಪಿಎಂಸಿಯಲ್ಲಿ ನಡೆದ ಗಣರಾಜ್ಯೋತ್ಸವದ ಧ್ವಜಾರೋಹಣವನ್ನು ಉಪಾಧ್ಯಕ್ಷ ವೈ.ಸಿ.ಸಿದ್ರಾಮಯ್ಯ ನೆರವೇರಿಸಿದ್ದು, ಅಧ್ಯಕ್ಷ ಕಂದಿಕೆರೆ ಸಣ್ಣಯ್ಯ ಅಧ್ಯಕ್ಷತೆವಹಿಸಿದ್ದರು. ಶೆಟ್ಟಿಕೆರೆ ಈಶಣ್ಣ, ಕಾರ್ಯದರ್ಶಿ ಜಯರಾಂ ಸೇರಿದಂತೆ ವರ್ತಕರು ಪಾಲ್ಗೊಂಡಿದ್ದರು.
ಹುಳಿಯಾರು-ಕೆಂಕೆರೆ ಪ್ರೌಢಶಾಲಾ ವಿಭಾಗದಲ್ಲಿ ಪ್ರಾಚಾರ್ಯ ನಟರಾಜು ಧ್ವಜಾರೋಹಣ ನೆರವೇರಿಸಿದ್ದು, ಉಪಪ್ರಾಂಶುಪಾಲರಾದ ಇಂದಿರಾ, ಉಪನ್ಯಾಸಕರಾದ ಶಶಿಭೂಷಣ್, ಜಯಣ್ಣ, ನಿರಂಜನ್ ಮೂರ್ತಿ, ಶಿವರುದ್ರಯ್ಯ, ಡಾ.ಹಾಲಪ್ಪ, ಎಸ್.ಡಿ.ಎಂ.ಸಿಯ ಜಲಾಲ್‌ಸಾಬ್, ಜಾಫರ್, ಹುಳಿಯಾರು ಗ್ರಾ.ಪಂ.ಅಧ್ಯಕ್ಷೆ ಪುಟ್ಟಮ್ಮ, ಪ್ರೌಢಶಾಲಾ ಶಿಕ್ಷಕರಾದ ರಾಜಣ್ಣ, ಮನ್ಸೂರ್ ಅಹಮದ್, ವಿದ್ಯಾಕುಂಚನೂರು, ಲೋಕೇಶ್, ಸಂಗೀತ ಶಿಕ್ಷಕರು ಸೇರಿದಂತೆ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು. ಆಟೋಟಗಳಲ್ಲಿ ವಿಜೇತರ ಮಕ್ಕಳಿಗೆ ಈ ಸಂದರ್ಭದಲ್ಲಿ ಬಹುಮಾನವನ್ನು ವಿತರಿಸಲಾಯಿತು. ಅಲ್ಲದೆ ಹುಳಿಯಾರಿನ ಬ್ಯಾಂಕ್, ಅಂಚೆ ಕಚೇರಿ ಸೇರಿದಂತೆ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಧ್ವಜಾರೋಹಣ ನೆರವೇರಿಸುವ ಮೂಲಕ ಗಣರಾಜ್ಯೋತ್ಸವವನ್ನು ಆಚರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.