ಬಡವರಿಗೆ ಎಪಿಎಲ್, ಉಳ್ಳವರಿಗೆ ಬಿಪಿಎಲ್
ತಿಪಟೂರು: ಕಂದಾಯ, ಗ್ರಾಮ ಪಂಚಾಯಿತಿ, ಆಹಾರ ಇಲಾಖೆಗಳ ಅಧಿಕಾರಿಗಳ ಬೇಜವಾಬ್ದಾರಿ ಮತ್ತು ಭ್ರಷ್ಟಾಚಾರವನ್ನೇ ಮೈಗಂಟಿಪಡಿತರ ಚೀಟಿ ಫಲಾನುಭವಿಗಳ ಆಯ್ಕೆಯ (ಸರ್ವೆ)ಸಮೀಕ್ಷೆಯಿಂದ ತಾಲೂಕಿನ ಬಹುತೇಕ ಬಡವರಿಗೆ ಮತ್ತು ಅರ್ಹರಿಗೆ ಬಿಪಿಎಲ್ ಕಾರ್ಡ್ಗಳು ಸಿಗದೆ ವಂಚಿತರಾಗಿದ್ದಾರೆ.
ಆದರೆ ಉಳ್ಳವರಿಗೆ, ಬಡತನ ರೇಖೆಗಿಂತ ಮೇಲಿನ ಜನರಿಗೆ ಬಿಪಿಎಲ್ ಕಾರ್ಡ್ಗಳನ್ನು ನೀಡಲಾಗಿದ್ದು ಇದು ತಾಲೂಕಿನ ಅಧಿಕಾರಿಗಳ ಆಟಾಟೋಪಕ್ಕೆ ಸಾಕ್ಷಿಯಾಗಿದೆ ಎಂದು ಸದಸ್ಯೆ ನೇತ್ರಾವತಿ ಸೇರಿದಂತೆ ಇತರೆ ಸದಸ್ಯರು ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳ ವಿರುದ್ಧ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ತಾ.ಪಂ. ಅಧ್ಯಕ್ಷ ಎನ್.ಭಾನುಪ್ರಕಾಶ್ ಅಧ್ಯಕ್ಷತೆಯಲ್ಲಿ ತಾ.ಪಂ. ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿದ್ದ ಸದಸ್ಯರು ತಾಲೂಕಿನ ಹಾಲ್ಕುರಿಕೆ ಗ್ರಾಪಂ ವ್ಯಾಪ್ತಿಯ ಚೆಂಡು ಹೂವಿನ ಕಾರ್ಖಾನೆಯಿಂದ ಹತ್ತಾರು ವರ್ಷಗಳಿಂದ ನಿರಂತರ ಪರಿಸರ ಮಾಲಿನ್ಯವಾಗುತ್ತಿರುವುದರ ಹಿನ್ನೆಲೆ ನಡೆಸಿದ ಚರ್ಚೆಯಲ್ಲಿ ಕಾರ್ಖಾನೆ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲು ಸದಸ್ಯರು ನಿರ್ಣಯ ಕೈಗೊಳ್ಳಲಾಯಿತು.
ನೆಮ್ಮದಿ ಇಲ್ಲ: ಸಭೆಯಲ್ಲಿ ಮಾತನಾಡಿದ ಸದಸ್ಯರು ತಾಲೂಕಿನ ನೆಮ್ಮದಿ ಕೇಂದ್ರಗಳಲ್ಲಿ ಸಾರ್ವಜನಿಕರಿಗೆ ಯಾವತ್ತೂ ನೆಮ್ಮದಿ ಇಲ್ಲದಂತಾಗಿದೆ. ಕೇಂದ್ರಗಳಲ್ಲಿ ವಿದ್ಯುತ್ ನಿರಂತರವಾಗಿ ಕೈಕೊಡುತ್ತಿರುವುದರಿಂದ ಜನಸಾಮಾನ್ಯರ ಕೆಲಸ ಕಾರ್ಯಗಳು ಸಮಯಕ್ಕೆ ಸರಿಯಾಗಿ ಆಗದೆ ಪರದಾಡುವಂತಾಗಿದೆ. ತಾಲೂಕಿನಲ್ಲಿ ಸಾಕಷ್ಟು ಸಾರ್ವಜನಿಕ ಇಲಾಖೆಗಳಲ್ಲಿ ಕೆಲಸ ಕಾರ್ಯಗಳು ಆಗದೇ ಪದೇ ಪದೇ ಅಧಿಕಾರಿಗಳ ಬಳಿ ತಿರುಗುವಂತಾಗಿದೆ. ಇನ್ನು ತಾಲೂಕು ಕಚೇರಿಯಲ್ಲಿ ಮಾಸಾಶನಗಳನ್ನು ಸರಿಯಾದ ಕಾರಣಗಳಿಲ್ಲದೆ ವಜಾ ಮಾಡಲಾಗುತ್ತಿದ್ದು, ಮಾಸಾಶನಗಳನ್ನೇ ಆಶ್ರಯಿಸಿ ಬದುಕು ನಡೆಸುತ್ತಿದ್ದ ಬಡವರ ಬದುಕು ಬರ್ಬರವಾಗಿದ್ದು ಈ ನಿಟ್ಟಿನಲ್ಲಿ ಕಂದಾಯ ಇಲಾಖೆ ತನ್ನ ಕಾರ್ಯವೈಖರಿಯನ್ನು ಬದಲಾಯಿಸಿಕೊಂಡು ಜನಪರವಾಗಿ ಕೆಲಸ ಮಾಡಬೇಕೆಂದು ಸದಸ್ಯ ರವಿ ಮತ್ತಿರರು ಆಗ್ರಹಿಸಿದರು.
ಗ್ರಾ.ಪಂ.ಅಧಿಕಾರಿಗಳು ಕುಡಿಯುವ ನೀರಿನ ಸಮಸ್ಯೆಗಳಿಗೆ ಸ್ಪಂದಿಸದೆ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದು, ಅಂತಹವರ ವಿರುದ್ಧ ಇಓ ಅವರು ನಿರ್ಧಾಕ್ಷಿಣ್ಯ ಕ್ರಮ ಜರುಗಿಸಬೇಕೆಂದು ಸದಸ್ಯರು ತಿಳಿಸಿದರು. ಬೇಸಿಗೆಯ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ತಾ.ಪಂ.ವತಿಯಿಂದ 1.5ಲಕ್ಷ ರು.ಗಳನ್ನು ಕಿರುನೀರು, ಕೈ ಪಂಪ್ದ್ದುರಸ್ತಿಗೆ ಮೀಸಲಿಡಲಾಗಿದೆ ಎಂದು ಇಓ ಷಡಕ್ಷರಮೂರ್ತಿ ಮಾಹಿತಿ ನೀಡಿದರು. ಉಪಾಧ್ಯಕ್ಷ ರಾಜು, ಜಯಣ್ಣ ಮತ್ತಿತರರಿದ್ದರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

