ತುಮಕೂರು

25 ಕೋಟಿ ವೆಚ್ಚದ ಕಾಮಗಾರಿಗೆ ಕ್ರಮ: ರಾಮಸ್ವಾಮಿಗೌಡ

Published On :



ಕುಣಿಗಲ್: ತಾಲೂಕಿನಲ್ಲಿ ಕಳೆದ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಸಣ್ಣ ನೀರಾವರಿ ಇಲಾಖೆಯಡಿಯಲ್ಲಿ ಬರುವ ಹಲವು ಬ್ಯಾರೇಜ್ ನಿರ್ಮಾಣ ಸೇರಿದಂತೆ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಒಟ್ಟಾರೆ ಇಪ್ಪತ್ತೈದು ಕೋಟಿ ರು.ಗಳ ವೆಚ್ಚದಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ಶಾಸಕ ಬಿ.ಬಿ. ರಾಮಸ್ವಾಮಿಗೌಡ ತಿಳಿಸಿದರು.
ಭಾನುವಾರ, ಕಾಂಗ್ರೆಸ್ ಕಾರ್ಯಾಲಯ ನಮ್ಮಮನೆಯಲ್ಲಿ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿ, ತಾಲೂಕಿನ ಹುಲಿಯೂರುದುರ್ಗ ಹೋಬಳಿಯಲ್ಲಿ 1989ರಲ್ಲಿ ಅಂದಿನ ಲೋಕೋಪಯೋಗಿ ಇಲಾಖೆ ಸಚಿವ ದೇವೇಗೌಡರು, ಶಾಸಕ ಡಿ.ನಾಗರಾಜಯ್ಯ ಅಧ್ಯಕ್ಷತೆಯಲ್ಲಿ ಶಂಕುಸ್ಥಾಪನೆ ನೆರವೇರಿಸಿದರು. ಕೆರೆಕಾಮಗಾರಿ ನೆನೆಗುದಿಗೆ ಬಿದಿದ್ದು, 23 ವರ್ಷಗಳ ಅವಧಿಯಲ್ಲಿ ಆನಂತರ ಬಂದಂತಹ ಯಾವುದೇ ಶಾಸಕರು ಕಾಮಗಾರಿ ಪ್ರಗತಿಗೆ ಚಾಲನೆ ನೀಡದೆ ನಿರ್ಲಕ್ಷ್ಯವಹಿಸಿದ್ದರು. ಆದರೆ ತಾವು ಕಾಮಗಾರಿಗೆ ಸತತ ಒತ್ತಡ ಹೇರಿ ಈಗ 75 ಲಕ್ಷ ರು.ವೆಚ್ಚದಲ್ಲಿ ಬಂಡಿಗೌಡನದೊಡ್ಡಿ ಕೆರೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದರು.
ಸಣ್ಣನೀರಾವರಿ ಇಲಾಖೆಯ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಅನುದಾನದಿಂದ ಒಟ್ಟಾರೆ ಆರುಕೋಟಿ ರು.ವೆಚ್ಚದಲ್ಲಿ, ಯಡೆಯೂರು ಹೋಬಳಿಯ ನಾಗಿನಿ ನದಿಗೆ ಕಗ್ಗೆರೆ ಕ್ಷೇತ್ರದ ಸಮೀಪ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ (155 ಲಕ್ಷ), ಹುಲಿಯೂರುದುರ್ಗ ಹೋಬಳಿಯ ತೊರೆಬೊಮ್ಮನಹಳ್ಳಿ ಬಳಿ ಶಿಂಷಾ ನದಿಗೆ ಬ್ಯಾರೇಜ್ ನಿರ್ಮಾಣ (200 ಲಕ್ಷ), ಇದರಿಂದ ನದಿಯಲ್ಲಿ ಸುಮಾರು ಮೂರು ಕಿಮಿವರೆಗೂ ನೀರು ಸಂಗ್ರಹವಾಗಿ, ಅಂತರ್ಜಲವೃದ್ಧಿ ಸೇರಿದಂತೆ ಈ ಭಾಗದ ಸುತ್ತಮುತ್ತಲ  ರೈತರಿಗೆ ಅನುಕೂಲವಾಗಲಿದೆ ಎಂದರು.
ಟೆಂಡರ್: ಸಿಎಂಜಿಎಸ್‌ಆರ್‌ವೈ ಯೋಜನೆಯಡಿಯಲ್ಲಿ ತಾಲೂಕಿನಾದ್ಯಂತ ಆಯ್ದೆ ಗ್ರಾಮಗಳ ಸಂಪರ್ಕ ರಸ್ತೆ, ಒಟ್ಟಾರೆ 33ಕಿಮಿ ರಸ್ತೆ ಅಭಿವೃದ್ಧಿಗೆ 12.35 ಕೋಟಿ ವೆಚ್ಚದಲ್ಲಿ ಕ್ರಮ ಕೈಗೊಳ್ಳಲಾಗಿದೆ. ಕೊತ್ತಗೆರೆ ಗ್ರಾಮದಲ್ಲಿ 1 ಕೋಟಿ ವೆಚ್ಚದಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಸೇರಿ ತಾಲೂಕಿನ ಆಯ್ದ 19 ಗ್ರಾಮಗಳಲ್ಲಿ ತಲಾ ಹತ್ತು ಲಕ್ಷ ರು.ವೆಚ್ಚದಲ್ಲಿ ಅಂಬೇಡ್ಕರ್ ಭವ ನಿರ್ಮಾಣ ಸೇರಿದಂತೆ, ವಿವಿಧ ಗ್ರಾಮಗಳ ವ್ಯಾಪ್ತಿಯಲ್ಲಿ 6 ಕೋಟಿ ವೆಚ್ಚದಲ್ಲಿ ಸುವರ್ಣ ಗ್ರಾಮ ಯೋಜನೆ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದರು.
. ನೀರಾವರಿ, ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಈಗಾಗಲೆ ಟೆಂಡರ್ ಕರೆಯಲಾಗಿದ್ದರೆ, ಸುವರ್ಣ ಗ್ರಾಮ ಯೋಜನೆಯ ಕಾಮಗಾರಿಗಳ ಪೈಕಿ ಹಲವು ಪ್ರಗತಿಯಲ್ಲಿವೆ ಎಂದರು.
ತಾಲೂಕು ಕಾಂಗ್ರೆಸ್ ವಕ್ತಾರ ಹೇರೂರು ಶಂಕರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ, ಲಕ್ಷ್ಮಣಗೌಡ, ಪ್ರದೀಪ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.