'ನವಸಮಾಜದ ನವಚೇತನ ಸ್ವಾಮಿ ವಿವೇಕಾನಂದ'
ತುಮಕೂರು: ಭಾರತೀಯ ಪರಂಪರೆ ಮೇಲೆ ಕವಿದಿರುವ ಅಂಧಕಾರವನ್ನು ಹೋಗಲಾಡಿಸಿ ಆಧುನಿಕ ಸಮಾಜದ ಕಣ್ಣು ತೆರೆಸಿದವರು ಸ್ವಾಮಿ ವಿವೇಕಾನಂದರು ಎಂದು ತುಮಕೂರು ವಿವಿ ಕಲಾಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಟಿ.ಎನ್. ಹರಿಪ್ರಸಾದ್ ಅಭಿಪ್ರಾಯಪಟ್ಟರು.
ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ ಸ್ವಾಮಿ ವಿವೇಕಾನಂದರ 150 ನೇ ಜನ್ಮದಿನದ ಅಂಗವಾಗಿ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಮತ್ತು ಭಾಷಣ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು. ವೇದ, ಉಪನಿಷತ್ತುಗಳಿಗೆ ವೈಚಾರಿಕ ನಿರ್ವಚನ ನೀಡಿದಲ್ಲದೆ ಪಾಪಿ ದೇವೋಭವ, ಮೂರ್ಖ ದೇವೋಭವ, ನೀಚ ದೇವೋಭವ, ದಲಿತ ದೇವೋಭವ ಎಂದು ಹೇಳುವ ಮೂಲಕ ಸಮಾಜದಲ್ಲಿ ಕನಿಷ್ಠರೆಂದು ಕಡೆಗಣಿಸಲ್ಪಟ್ಟವರ ಎದೆಯಲ್ಲೂ ಮಿಂಚಿನ ಕಿಡಿ ಹೊತ್ತಿಸಿದವರು ಸ್ವಾಮಿ ವಿವೇಕಾನಂದರು ಎಂದರು.
ಹಸಿದವರಿಗೆ ಅನ್ನ ಕೊಡಲಾಗದ, ವಿಧವೆಯರ ಕಣ್ಣೀರನ್ನು ಒರೆಸಲಾಗದ ದೇವರು ಧರ್ಮದಲ್ಲಿ ನಂಬಿಕೆಯಿಲ್ಲ, ಹಸಿದಿರುವ ಕರುಳುಗಳಿಗೆ ಒಣತತ್ವ ಬೋಧನೆ ಸಲ್ಲದು ಎಂಬ ಚಿಂತನೆಗಳ ಮೂಲಕ ಜೀವಸೇವೆಯೆ ಧರ್ಮವೆಂದು ಸಾರಿ ಅದರ ಸವಿಯನ್ನು ಸಮಾಜಕ್ಕೆ ಉದಾರವಾಗಿ ಅವರು ಹಂಚಿದರು.
ಜಾತಿ, ಧರ್ಮ, ದೇಶ, ಶಿಕ್ಷಣ, ರಾಷ್ಟ್ರೀಯತೆ, ಕುರಿತ ಸ್ವಾಮಿ ವಿವೇಕಾನಂದರ ಸಾರ್ವಕಾಲಿಕ ಚಿಂತನೆಗಳು ನಮ್ಮ ನಡುವೆ ಇನ್ನೂ ಅವರನ್ನು ಜೀವಂತವಾಗಿಸಿದೆ ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಕೆ.ವಿ ಪದ್ಮನಾಭ ಅವರು ಸ್ವಾಮಿ ವಿವೇಕಾನಂದರು ಇಂದಿಗೂ ಪ್ರಸ್ತುತರಾಗಿರುವುದು ಅವರು ಯುವಜನರಿಗೆ ನೀಡಿದ ಉನ್ನತ ಆದರ್ಶ, ಸಂದೇಶಗಳಿಂದ ಹಾಗೂ ಯುವ ಸಮುದಾಯ ನೈತಿಕ ಚೌಕಟ್ಟು ಮೀರದಂತೆ ನೀಡಿದ ಪ್ರೇರಣೆಗಳಿಂದ ಎಂದು ಅಭಿಪ್ರಾಯಪಟ್ಟರು.
ಎನ್ಎಸ್ಎಸ್ ಕಾರ್ಯಯೋಜನಾಧಿಕಾರಿ ಡಾ. ಗುಂಡೇಗೌಡ, ರೇಣುಕ ಎಚ್.ಆರ್, ಶ್ರೀ ಮುನಿರಾಜು ಎಂ, ಶ್ರೀನಿವಾಸಮೂರ್ತಿ ಎಂ.ಡಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

