ಫೆ.5 ರಂದು ಬಾಲಗಂಗಾಧರನಾಥರ ಪುಣ್ಯಾರಾಧನೆ
ತುರುವೇಕೆರೆ: ಆದಿಚುಂಚನಗಿರಿ ಮಠಾಧ್ಯಕ್ಷರಾಗಿದ್ದ ಡಾ.ಬಾಲಗಂಗಾಧರನಾಥಸ್ವಾಮೀಜಿಯವರ ಪುಣ್ಯಾರಾಧನೆಯನ್ನು ತಾಲೂಕು ಒಕ್ಕಲಿಗರ ಸಂಘದ ವತಿಯಿಂದ ಫೆ 5 ರಂದು ಏರ್ಪಡಿಸಲಾಗಿದೆ.
ಪಟ್ಟಣದ ಸರಸ್ವತಿ ಬಾಲಿಕಾ ಪ್ರೌಢಶಾಲಾ ಆವರಣದಲ್ಲಿ ಏರ್ಪಡಿಸಲಾಗಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಈ ಬಗ್ಗೆ ನಿರ್ಣಯಿಸಲಾಯಿತು. ವಿಶ್ವದಾದ್ಯಂತ ಸರ್ವಧರ್ಮೀಯರ ಉದ್ಧಾರಕ್ಕಾಗಿ ಶ್ರಮಿಸಿದ ಬಾಲಗಂಗಾಧರನಾಥ ಸ್ವಾಮೀಜಿಯವರು ದೈವಾಂಶ ಸಂಭೂತರು ಎಂದು ಕಲ್ಪತರು ಆಶ್ರಮದ ಶಿವಕುಮಾರನಾಥಸ್ವಾಮೀಜಿ ಹೇಳಿದರು. ಚುಂಚನಗಿರಿಯನ್ನು ಚಿನ್ನದ ಗಿರಿಗೆ ಏರಿಸಿ ಸಮಾಜಕ್ಕೆ ಧಾರ್ಮಿಕ, ಶೈಕ್ಷಣಿಕ, ಆರೋಗ್ಯ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಅಪಾರವಾದ ಸೇವೆ ಸಲ್ಲಿಸಿದ್ದ ಶ್ರೀಗಳ ಆದರ್ಶ ಶ್ಲಾಘನೀಯ. ಶ್ರೀಗಳು ತಾಲೂಕಿನ ಸರ್ವಾಂಗೀಣ ಪ್ರಗತಿಗೂ ಮಾರ್ಗದರ್ಶಕರಾಗಿದ್ದರು. ಇಂತಹ ಶ್ರೀಗಳ ಸ್ಮರಣೆ ಮಾಡುವುದು ಆದ್ಯ ಕರ್ತವ್ಯವಾಗಿದೆ ಎಂದರು.
ನೂತನ ಶ್ರೀಗೆ ಅಭಿನಂದನಾ ಸಮಾರಂಭ: ನೂತನ ಶ್ರೀಗಳಿಗೆ ಅಭಿನಂದನಾ ಸಮಾರಂಭವನ್ನು ಏರ್ಪಡಿಸುವುದು ಅಗತ್ಯವಾಗಿದೆ. ನೂತನ ಶ್ರೀಗಳಾದ ನಿರ್ಮಲಾನಂದನಾಥ ಸ್ವಾಮಿಗಳು ತುರುವೇಕೆರೆ ಕ್ಷೇತ್ರದವರೇ ಆದ್ದರಿಂದ ಹೆಮ್ಮೆಯ ಸಂಗತಿಯಾಗಿದೆ. ಆದ್ದರಿಂದ ಶ್ರೀಗಳಿಗೆ ಪಟ್ಟಾಭಿಷೇಕವಾದ ನಂತರ ಸೂಕ್ತ ದಿನಾಂಕದಂದು ತಾಲೂಕಿನ ಭಕ್ತಾದಿಗಳ ಅಭಿನಂದನೆಯನ್ನು ಸಮರ್ಪಿಸಬೇಕು ಎಂದು ನಿರ್ಣಯಿಸಲಾಯಿತು.
ಶ್ರದ್ಧಾಂಜಲಿ ಸಭೆಯಲ್ಲಿ ಶಾಸಕ ಎಂ.ಟಿ.ಕೃಷ್ಣಪ್ಪ, ಮಾಜಿ ಶಾಸಕ ಎಸ್. ರುದ್ರಪ್ಪ, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಕಡೇಹಳ್ಳಿ ಸಿದ್ದೇಗೌಡ, ಜಿ.ಪಂ.ಮಾಜಿ ಉಪಾಧ್ಯಕ್ಷ ಚೌದ್ರಿ ಟಿ ರಂಗಪ್ಪ, ಕೆಜೆಪಿ ಮುಖಂಡ ಮಸಾಲಾ ಜಯರಾಂ, ಬಿಎಸ್ಆರ್ ಮುಖಂಡ ಎಚ್.ಆರ್. ರಾಮೇಗೌಡ, ಜಿಲ್ಲಾ ಪಂಚಾಯ್ತಿಯ ಶಿಕ್ಷಣ ಮತ್ತು ಆರೋಗ್ಯ ಸಮಿತಿಯ ಅಧ್ಯಕ್ಷ ಎ.ಬಿ. ಜಗದೀಶ್, ಜಿ.ಪಂ.ಸದಸ್ಯ ಶ್ರೀನಿವಾಸಯ್ಯ, ಉಗ್ರಯ್ಯ, ಮಾಜಿ ಜಿ.ಪಂ.ಸದಸ್ಯ ಎನ್.ಆರ್. ಜಯರಾಂ, ಪಿಎಲ್ಡಿ ಬ್ಯಾಂಕ್ನ ಅಧ್ಯಕ್ಷ ಮೂಡಲಗಿರಿಗೌಡ, ನಿರ್ದೇಶಕರಾದ ಟಿ.ಎಸ್. ದಾನಿಗೌಡ, ಟಿ.ಎಸ್. ಬೋರೇಗೌಡ, ವಕೀಲ ಧನಪಾಲ್, ವೆಂಕಟೇಶ್ ಮೂರ್ತಿ, ವಿನಯ್ ರಾಜಶೇಖರ್, ಎಂ.ಎನ್.ಚಂದ್ರೇಗೌಡ, ತೇಜು ಮೊದಲಾದವರು ಭಾಗವಹಿಸಿ ಶ್ರೀಗಳ ಗುಣಗಾನ ಮಾಡಿದರು.
ತಾಲೂಕು ಒಕ್ಕಲಿಗರ ಸಂಘದ ವತಿಯಿಂದ ಏರ್ಪಡಿಸಲಾಗುವ ಪುಣ್ಯಾರಾಧನೆಯನ್ನು ಬಿಜಿಎಸ್ ಕಲ್ಯಾಣ ಮಂಟಪದಲ್ಲಿ ನಡೆಸಲಾಗುವುದು. ಬೆಳಗ್ಗೆ 11.30 ಕ್ಕೆ ಧಾರ್ಮಿಕ ಸಭೆ ಏರ್ಪಡಿಸಿ ತದ ನಂತರ ಒಕ್ಕಲಿಗರ ಸಂಘದ ಖರ್ಚಿನಲ್ಲೇ ಸುಮಾರು 5 ಸಾವಿರ ಮಂದಿಗೆ ಅನ್ನದಾಸೋಹ ಮಾಡಲಾಗುವುದು ಎಂದು ನಿರ್ಧರಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

