ತುಮಕೂರು

ತೊರೆಮಾವಿನಹಳ್ಳಿಯಲ್ಲಿ ಸಂಭ್ರಮದ ಕಾರಹಬ್ಬ

Published On :

ತುಮಕೂರು: ಜಿಲ್ಲೆಯ ತುರುವೇಕೆರೆ ತಾಲೂಕು ತೊರೆಮಾವಿನಹಳ್ಳಿಯಲ್ಲಿ ಸಂಭ್ರಮದಿಂದ ಕಾರಹಬ್ಬ ಆಚರಿಸಲಾಯಿತು.
ಮನೆಯಲ್ಲಿ ದನ ಕರುಗಳಿಗೆ ಮೈತೊಳೆದು, ವಿವಿಧ ಬಣ್ಣಗಳಿಂದ ಕೊಂಬುಗಳಿಗೆ ಶೃಂಗಾರಗೊಳಿಸಿ, ಗ್ರಾಮದ ಪ್ರಮುಖ ಬೀದಿಗಳಲ್ಲಿ ಮಂಗಳವಾದ್ಯದೊಂದಿಗೆ ಮರವಣಿಗೆ ನಡೆಸಲಾಯಿತು.
ಹಳೆ ಊರಿನಲ್ಲಿರುವ ಕರಿಕಲ್ಲಿನ ಬಳಿ ತೆರಳುವರು. ಇದೇ ಸಮಯದಲ್ಲಿ ಗ್ರಾಮದ ಹೆಣ್ಣ ಮಕ್ಕಳು, ತಾಯಂದಿರು ಹಣ್ಣು ಕಾಯಿಗಳೊಂದಿಗೆ ಮೆರವಣಿಗೆ ಮೂಲಕವೇ ಕರಿಕಲ್ಲಿನ ಬಳಿ ಆಗಮಿಸುವರು.
ಈ ಸಂದರ್ಭದಲ್ಲಿ ಶಾಸ್ತ್ರೋಕ್ತವಾಗಿ ಕರಿಕಲ್ಲಿಗೆ ಪೂಜೆ ಸಲ್ಲಿಸಿದ ನಂತರ ಗೋ ಸಂಪತ್ತಿಗೆ ತೀರ್ಥ ಪ್ರೋಕ್ಷಣೆ ಮಾಡಿ ದನ ಕರುಗಳಿಗೆ, ಗ್ರಾಮದ ಮಕ್ಕಳಿಗೆ ಯಾವುದೇ ರೋಗ, ರುಜಿನ ಬರದೇ ಕಾಪಾಡು, ಗ್ರಾಮಕ್ಕೆ ಒಳ್ಳೆಯ ಮಳೆ, ಬೆಳೆ ಆಗುವಂತೆ ಮಾಡು ಎಂದು ಗ್ರಾಮಸ್ಥರು ದೇವರಲ್ಲಿ ಮೊರೆಯಿಟ್ಟರು.
ನಂತರ ಗ್ರಾಮದಲ್ಲಿ ಹೊಸದಾಗಿ ಮದುವೆಯಾದ ಹೆಣ್ಣು ಮಕ್ಕಳ ಗಂಡಂದಿರು  ಗ್ರಾಮದ ಕರಿಕಲ್ಲ ಬಳಿಯ ಮಹಾದ್ವಾರದಕ್ಕೆ ಕಟ್ಟಿರುವ ಮಾವಿನ ತೋರಣವನ್ನು ಕೀಳುವ ಸ್ಪರ್ಧೆ ನಡೆಯಿತು. ಆ ನಂತರ ಕರಿಕಲ್ಲಿನ  ಬಳಿ ಸೇರಿದ ಗೋವುಗಳು ಮತ್ತು ಜನರು ಗ್ರಾಮದ ಅಂಜನೇಯಸ್ವಾಮಿ ಹಾಗೂ ಬಸವೇಶ್ವರ ಸ್ವಾಮಿಗೆ ಪ್ರದರ್ಶನ ಹಾಕಿ, ಹೆಬ್ಬಾಗಿಲಿನ  ಮೂಲಕ ಗ್ರಾಮಕ್ಕೆ ಪ್ರವೇಶ ಪಡೆದರು. ನಂತರ ಅಳಿಯಂದಿರು ತಂದ ಮಾವಿನ ಸೋಪ್ಪಿನ ಜೊತೆಗೆ ಕರಿಕಲ್ಲಿನ ಬಳಿ ತೆರಳಿ ಗೋವುಗಳಿಗೂ ಮನೆಯ ಬಾಗಿಲಿನಲ್ಲಿಯೇ  ಪೂಜೆ ನಡೆಸಿ ಗೋವುಗಳಿಗೆ ಪ್ರಸಾದ ತಿನ್ನಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.