ಸುದ್ದಿ ಸಂಕ್ಷೇಪ
ಇಂದು ತಿಪಟೂರಿಗೆ ದೇವೇಗೌಡ ಭೇಟಿ
ತಿಪಟೂರು: ತಾಲೂಕಿನಲ್ಲಿ ಭೀಕರ ಬರಗಾಲದಿಂದ ಸಾವಿರಾರು ತೆಂಗಿನ ಮರಗಳು ಒಣಗಿ ಹೋಗಿದ್ದು ತೆಂಗು ಬೆಳೆಗಾರರಿಗೆ ಹಾಗೂ ಸಂಕಷ್ಟಕ್ಕೀಡಾಗಿರುವ ರೈತರಿಗೆ ಸ್ಪಂದಿಸಿ ಸರ್ಕಾರದಿಂದ ಸೂಕ್ತ ಪರಿಹಾರ ದೊರಕಿಸಲು ಒತ್ತಾಯಿಸುವ ಸಲುವಾಗಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಮಂಗಳವಾರ ಮಧ್ಯಾಹ್ನ ತಾಲೂಕಿಗೆ ಭೇಟಿ ನೀಡಲಿದ್ದಾರೆ. ಈ ಸಂಬಂದ ಗೌಡರು ರೈತರ ತೋಟಗಳಿಗೆ ಖುದ್ದು ಬೇಟಿ ನೀಡಿ ಪರಿಶಿಲಿಸಲಿದ್ದಾರೆಂದು ಜೆಡಿಎಸ್ ತಿಳಿಸಿದೆ.
ಇಂದು ಚಿತ್ರಕಲಾ
ಕೃತಿಗಳ ಪ್ರದರ್ಶನ
ತುಮಕೂರು: ಇಲ್ಲಿನ ರವೀಂದ್ರ ಕಲಾನಿಕೇತನದಲ್ಲಿ ಇದೇ ತಿಂಗಳ 9 ರಂದು ಬೆಳಿಗ್ಗೆ 10.30 ಕ್ಕೆ 2013-14ನೇ ಸಾಲಿನ ತರಗತಿಗಳ ಪ್ರಾರಂಭೋತ್ಸವ ಹಾಗೂ ಚಿತ್ರಕಲಾ ಕೃತಿಗಳ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮವನ್ನು ಸರ್ವೋದಯ ಕಾರ್ಯಕರ್ತ ಹೆಚ್.ಎಸ್. ದೊರೆಸ್ವಾಮಿ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಎಂ.ಎನ್. ವೆಂಕಟಾಚಲಯ್ಯ, ಎಂ. ಬಸವಯ್ಯ, ಡಿ.ಹೆಚ್. ಗೌರಮ್ಮ ಆಗಮಿಸಲಿದ್ದಾರೆ.
ಎಸ್ಬಿಎಂ ಶ್ರೀಕಾಂತ್ ಮುಂದುವರಿಕೆಗೆ ಆಗ್ರಹ
ಪಾವಗಡ: ಬ್ಯಾಂಕ್ ನಿಯಮನುಸಾರ ಸಾಲ ಮರುಪಾವತಿ ಸೇರಿದಂತೆ ಗಡಿ ಭಾಗದ ರೈತರ ಕಷ್ಟ ಸುಖಕ್ಕೆ ಸ್ವಂದಿಸಿ ಕೆಲಸ ಮಾಡುವ ನಿಷ್ಠಾವಂತ ಅಧಿಕಾರಿ ಸ್ಟೇಟ್ ಬ್ಯಾಂಕ್ ಅಫ್ ಮೈಸೂರ್ನ ವ್ಯವಸ್ಥಾಪಕ ಶ್ರೀಕಾಂತ್ ಅವರನ್ನು ಇಲ್ಲಿಯೆ ಮುಂದುವರಿಸುವಂತೆ ಕೋಟಗುಡ್ಡ ವ್ಯಾಪ್ತಿಯ ನೂರಾರು ರೈತರು ಒತ್ತಾಯಿಸಿ ಮನವಿ ಮಾಡಿದ್ದಾರೆ. ಸೋಮವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ರೈತರ ಪರವಾಗಿ ಮಾತನಾಡಿದ ಜಿಪಂ ಸದಸ್ಯೆ ರೇಖಾ ಅಂಜನೇಯಲು ಕೋಟಗುಡ್ಡ ಗ್ರಾಮದ ಸ್ಟೇಟ್ ಬ್ಯಾಂಕ್ ಅಫ್ ಮೈಸೂರಿನ ಬ್ಯಾಂಕ್ ವ್ಯವಸ್ಥಾಪಕ ಶ್ರೀಕಾಂತ್ ಅವರು ಉತ್ತಮ ಅಧಿಕಾರಿ. ರೈತರ ಹಾಗೂ ಸಾರ್ವಜನಿಕರ ಸಮಸ್ಯೆಗಳಿಗೆ ಸ್ವಂದಿಸಿ ಕೆಲಸ ಮಾಡುತ್ತಿದ್ದಾರೆ. ಶ್ರೀಕಾಂತ್ ಅವರ ಸೇವೆ ನಮ್ಮ ಗಡಿ ಭಾಗಕ್ಕೆ ಅವಶ್ಯಕತೆ ಇದೆ ಎಂದರು. ಮುಖಂಡ ಬೂದಿಬೆಟ್ಟ ನರೇಂದ್ರರೆಡ್ಡಿ ಮಾತನಾಡಿ ಶ್ರೀಕಾಂತ್ ಅವರ ಸೇವೆ ಕುರಿತು ಈಗಾಗಲೇ ಸಂಬಂಧಪಟ್ಟ ಹೆಚ್ಚುವರಿ ಅಧಿಕಾರಿಗಳಿಗೆ ಮನವಿ ನೀಡಲಾಗಿದೆ. ಶ್ರೀಕಾಂತ್ ವ್ಯವಸ್ಥಾಪಕರಾಗಿ ಬ್ಯಾಂಕ್ಗೆ ಆಗಮಿಸಿದ ಸ್ವಲ್ಪ ದಿನಗಳಲ್ಲಿಯೇ ಬ್ಯಾಂಕ್ ಪ್ರಗತಿ ಪಥದಲ್ಲಿ ಮುನ್ನಡೆಯುತ್ತಿದೆ ಎಂದ ಅವರು ಅರ್ಹ ಫಲಾನುಭವಿಗಳಿಗೆ ಅರ್ಥಿಕ ಪ್ರಗತಿಗೆ ಸಹಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಇಂತಹ ಉತ್ತಮ ಅಧಿಕಾರಿಯನ್ನು ವರ್ಗಾಯಿಸದೇ ಇಲ್ಲಿಯೆ ಮುಂದುವರಿಸಿ ಪ್ರಗತಿಗೆ ಸಹಕರಿಸಿ ಎಂದು ಅಧಿಕಾರಿಗಳಲ್ಲಿ ಅವರು ಮನವಿ ಮಾಡಿದರು. ಮುಖಂಡರಾದ ಸಣ್ಣಾರೆಡ್ಡಿ, ಸಿಂಗರೆಡ್ಡಿಹಳ್ಳಿ, ಶ್ರೀನಿವಾಸ್ರೆಡ್ಡಿ ಮುಂತಾದವರು ಮಾತನಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

