ತುಮಕೂರು

ಮೊಬೈಲ್ ಸಂದೇಶಗಳಿಗೆ ಮಾರುಹೋಗದಿರಿ

Published On :

ಕ.ಪ್ರ.ವಾರ್ತೆ  ಕುಣಿಗಲ್  ಜು. 8
ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಇತ್ತೀಚಿನ ದಿನಗಳಲ್ಲಿ ಬಹುತೇಕ ಮೊಬೈಲ್ ಗ್ರಾಹಕರಿಗೆ, ಅವರ ಮೊಬೈಲ್ ಸಂಖ್ಯೆ ಲಕ್ಕಿಡಿಪ್ ಸ್ಪರ್ಧೆಯಲ್ಲಿ ಆಯ್ಕೆಯಾಗಿದ್ದು, ಕೋಟಿಗಟ್ಟಲೆ, ಲಕ್ಷಗಟ್ಟಲೆ ಬಹುಮಾನ ಬಂದಿದೆ ಎಂಬ ಸಂದೇಶ ಕಳುಹಿಸಿ, ಗ್ರಾಹಕರನ್ನು ಮೋಸ ಮಾಡಿ, ಶೋಷಿಸುವ ದಂಧೆ ಹೆಚ್ಚಾಗಿದ್ದು ಗ್ರಾಹಕರು ಇಂತಹ ಪೊಳ್ಳು ಸಂದೇಶಗಳಿಗೆ ಮಾರುಹೋಗದಂತೆ ತಾಲೂಕು ಕರವೇ ಅಧ್ಯಕ್ಷ ಮಂಜುನಾಥ್ ಮನವಿ ಮಾಡಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಅವರು, ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ವಿವಿಧ ಕಂಪನಿಯ ಮೊಬೈಲ್ ಗ್ರಾಹಕರಿಗೆ, ನಿಮ್ಮ ಮೊಬೈಲ್ ಸಂಖ್ಯೆ ಅದೃಷ್ಟಶಾಲಿ ಸ್ಪರ್ಧೆಯಲ್ಲಿ ಆಯ್ಕೆಯಾಗಿದ್ದು ಮೂರುವರೆ ಕೋಟಿ ರು. ಬಹುಮಾನ ಬಂದಿದೆ. ಚೆವರಲೆಟ್ ಕಂಪನಿ ಮೋಟಾರ್ ಕಂಪನಿ ಯುಕೆಯಿಂದ, ಇನ್ನು ಕೆಲವರಿಗೆ ಬಾಸ್ ಕಂಪನಿಯೊಂದು ನಡೆಸಿದ ಲಕ್ಕಿಡಿಪ್ ಸ್ಪರ್ಧೆಯಲ್ಲಿ ಮೊಬೈಲ್ ಸಂಖ್ಯೆ ವಿಜೇತವಾಗಿರುವುದರಿಂದ 40ಸಾವಿರ ಅಮೆರಿಕನ್ ಡಾಲರ್ ಬಹುಮಾನ ಬಂದಿದೆ ಎಂದು, ಮತ್ತೆ ಕೆಲವರಿಗೆ ಕಂಪನಿಯೊಂದು, ಲಕ್ಷಗಟ್ಟಲೆ ನಂಬರ್‌ಗಳನ್ನು ಡ್ರಾ ಬಾಕ್ಸ್‌ನಲ್ಲಿ ಹಾಕಿದ್ದು, ಈ ಪೈಕಿ ನಿಮ್ಮ ಸಂಖ್ಯೆ ಮಾತ್ರ ಆಯ್ಕೆಯಾಗಿದ್ದು, 50ಲಕ್ಷ ರು.ಬಹುಮಾನದ ಜೊತೆ ಬೆಂಗಳೂರಿನ ಪ್ರತಿಷ್ಠಿತ ಸ್ಥಳದಲ್ಲಿ ನಿವೇಶನ ಬಹುಮಾನ ಲಭಿಸಿದೆ ಎಂದು  ಸಂದೇಶಗಳು ಬರುತ್ತಿವೆ. ಹೆಚ್ಚಿನ ವಿವರಗಳಿಗೆ ಕೆಲ ಸಂದೇಶಗಳಲ್ಲಿ ಈ ಮೇಲ್ ವಿಳಾಸ ನೀಡಿದ್ದರೆ, ಮತ್ತೆ ಕೆಲ ಸಂದೇಶಗಳಲ್ಲಿ ಮೊಬೈಲ್ ನಂಬರ್‌ಗಳನ್ನು ನೀಡಿ ಸಂಪರ್ಕಿಸುವಂತೆ ಸೂಚಿಸಲಾಗಿರುತ್ತದೆ.
ಈ ಮೇಲ್ ವಿಳಾಸಕ್ಕೆ ಸಂಪರ್ಕಿಸಿದರೆ, ಸದರಿಯವರು ಮೊದಲಿಗೆ ಎಸ್‌ಬಿಐ ಅಥವಾ ಆಕ್ಸಿಸ್ ಬ್ಯಾಂಕ್‌ನ ಖಾತೆಗೆ ಪ್ರಾಥಮಿಕ ಹಂತವಾಗಿ ಕನಿಷ್ಠ ಹತ್ತು ಸಾವಿರ ಕಟ್ಟುವಂತೆ ಸೂಚಿಸಿದರೆ, ಮೊಬೈಲ್ ನಂಬರ್‌ಗೆ ಸಂಪರ್ಕಿಸಿದರೆ, ಹಿಂದಿ ಅಥವಾ ಆಂಗ್ಲ ಭಾಷೆಯಲ್ಲಿ ಮಾತನಾಡುವ ವ್ಯಕ್ತಿಗಳು ಎಸ್‌ಬಿಐನ 20124146267 ನಂಬರ್ ರಾಮದೇವಿ ಎಂಬ ಖಾತೆಗೆ ಹದಿನೈದು ಸಾವಿರ ಕಟ್ಟಿದ ಕೂಡಲೆ ಬಹುಮಾನ ಹಣದ ಲಭಿಸುತ್ತದೆ ಎಂದು ತಿಳಿಸಲಾಗುತ್ತಿದೆ.
ಉತ್ತರ ಬರುವುದಿಲ್ಲ: ಬೋಗಸ್ ಸಂದೇಶಗಳು ಬರುವ 918375989660, 918587044260, 91965 4511925 ಸೇರಿದಂತೆ ಹಲವು ಮೊಬೈಲ್ ನಂಬರ್‌ಗಳಿಗೆ ಕರೆ ಮಾಡಿದರೆ ಯಾವುದೇ ಉತ್ತರ ಬರುವುದಿಲ್ಲ. ಗ್ರಾಮಾಂತರ ಪ್ರದೇಶದ ಮೊಬೈಲ್ ಗ್ರಾಹಕರು ಇಂತಹ ಬೋಗಸ್ ಸಂದೇಶಗಳು ಸತ್ಯಾಂಶವನ್ನು ಅರಿಯದೆ ಈಗಾಗಲೆ ಕೆಲವರು ಪ್ರಾಥಮಿಕ ಹಂತವಾಗಿ ಹದಿನೈದು ಸಾವಿರ ರು.ಗಳನ್ನು ಪಾವತಿಸಿ ಇದ್ದ ಹಣ ಕಳೆದುಕೊಂಡು, ಯಾವುದೇ ಬಹುಮಾನದ ಮೊತ್ತ ಬಾರದೆ ಪರದಾಡುವಂತಾಗಿದ್ದರೆ, ಪ್ರಾಥಮಿಕ ಹಣ ಕಟ್ಟಿದ ನಂತರ ಈ ನಿಟ್ಟಿನಲ್ಲಿ ಹಣ ಕಟ್ಟಲು ಸೂಚಿಸಿದ ನಂಬರ್‌ಗೆ ಕರೆ ಮಾಡಿದರೆ ಸಮರ್ಪಕ ಉತ್ತರ ಬಾರದೆ ಗ್ರಾಹಕರು ನಷ್ಟ ಅನುಭವಿಸುವಂತಾಗಿದೆ. ಸದರಿ ಬೋಗಸ್ ಸಂದೇಶ ದಂಧೆಯ ವಂಚನೆಗೆ ಮೊಬೈಲ್ ಗ್ರಾಹಕರು ಬಲಿಯಾಗದಂತೆ ಹಾಗೂ ಮುಂದಿನ ದಿನಗಳಲ್ಲಿ ಇಂತಹ ಯಾವುದೇ ಸಂದೇಶಗಳ ಆಮಿಶಗಳ ಬಗ್ಗೆ ತಲೆ ಕೆಡಿಸಿಕೊಳ್ಳದಿರುವಂತೆ ಮನವಿ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.