ತೆಂಗು ಬೆಳೆಗಾರರಿಗೆ ದೇವೇಗೌಡ ಸಾಂತ್ವನ
ಕ.ಪ್ರ.ವಾರ್ತೆ ತಿಪಟೂರು ಜು. 8
ತಾಲೂಕಿನ ಗುಂಗರಮಳೆಗೆ ಮಂಗಳವಾರ ಸಂಜೆ ಮಾಜಿ ಪ್ರಧಾನಿ, ಜೆಡಿಎಸ್ ನಾಯಕ ಹೆಚ್.ಡಿ. ದೇವೇಗೌಡರು ಭೇಟಿ ನೀಡಿ ರೈತರಿಗೆ ಸಾಂತ್ವನ ಹೇಳಿದರು.
ತಾಲೂಕಿನ ರೈತರ ಜೀವನಾಡಿ ಪ್ರಮುಖ ಬೆಳೆ ತೆಂಗಾಗಿದ್ದು ಕಳೆದ ಹಲವರು ವರ್ಷಗಳಿಂದ ಮಳೆ ಇಲ್ಲದೆ ಬರಗಾಲಕ್ಕೀಡಾಗಿದ್ದು ಇದರಿಂದ ಲಕ್ಷಾಂತರ ತೆಂಗಿನ ಮರಗಳು ಒಣಗಿಹೋಗಿವೆ. ಈ ಬಗ್ಗೆ ರೈತರು ತಮ್ಮ ಅಳಲನ್ನು ಮಾಜಿ ಪ್ರಧಾನಿ ದೇವೇಗೌಡರ ಬಳಿ ತೋಡಿಕೊಂಡಾಗ ಅವರು ತಾಲೂಕಿನ ನೊಣವಿನಕೆರೆ ಹೋಬಳಿ ಗುಂಗರಮಳೆಗೆ ಭೇಟಿ ನೀಡಿ ರೈತರ ಕಷ್ಟಗಳನ್ನು ಆಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಮಳೆ ಕೊರತೆ, ನಾನಾ ರೋಗ ರುಜಿನೆಗಳಿಂದ ತೆಂಗಿನ ಮರಗಳು ಒಣಗಿಹೋಗಿರುವುದು ತೀವ್ರ ಸಂಕಟ ತಂದಿದೆ. ಬೆಳೆಗಾರನ ಬದುಕು ಇದರಿಂದ ಮೂರಾಬಟ್ಟೆಯಾಗಿದ್ದು ಇವನ ಕಣ್ಣೀರು ಒರೆಸಲು ಸರ್ಕಾರ ಮುಂದಾಗದಿರುವುದು ನೋವಿನ ಸಂಗತಿ.
ಮುಂಬರಲಿರುವ ಅಧಿವೇಶನದಲ್ಲಿ ವಿರೋದಪಕ್ಷದ ನಾಯಕರಾಗಿರುವ ಕುಮಾರಸ್ವಾಮಿಯವರಿಂದ ಸರ್ಕಾರದ ಗಮನ ಸೆಳೆದು ಬೆಳೆಗಾರರಿಗೆ ಸೂಕ್ತ ಪರಿಹಾರ ಮತ್ತು ಹೊಸದಾಗಿ ತೆಂಗಿನ ಗಿಡಗಳ ಹಾಕಲು ಕ್ರಮ ನೂತನ ಯೋಜನೆಯನ್ನು ರೂಪಿಸಲು ಒತ್ತಾಯಿಸಲಾಗುವುದು ಎಂದರು.
ಕೇರಳ ಮಾದರಿಯಲ್ಲಿ ರಾಜ್ಯದ ರೈತರಿಗೂ ಪರಿಹಾರವನ್ನು ನೀಡಲು ಹೋರಾಟ ರೂಪಿಸಿ ತೆಂಗು ಬೆಳೆಗಾರರಿಗೆ ನ್ಯಾಯ ದೊರಕಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆಂದು ರೈತರಿಗೆ ತಿಳಿಸಿ ಸಾಂತ್ವನ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

