ತುಮಕೂರು

ಸ್ಪಷ್ಟ ನಿರ್ಧಾರ ಪ್ರಕಟಿಸದ ಬಜೆಟ್ ನೀತಿ

Published On :

ಕನ್ನಡಪ್ರಭ ವಾರ್ತೆ, ತುಮಕೂರು, ಜು.12
ನಗರಸಭೆ ಮತ್ತು ಮಹಾನಗರಪಾಲಿಕೆಗಳಿಂದ ಸಂಗ್ರಹವಾದ ಘನತ್ಯಾಜ್ಯದಿಂದ ವಿದ್ಯುತ್ ತಯಾರಿಸುವ ಯೋಜನೆಯನ್ನು ಪ್ರಕಟಿಸಿರುವ ಸರ್ಕಾರ, ಪ್ರತಿದಿನ ನಗರದಲ್ಲಿ ಘನತ್ಯಾಜ್ಯವನ್ನು ಸಂಗ್ರಹಿಸುವ ಪೌರಕಾರ್ಮಿಕರ ಬಗ್ಗೆ ಯಾವುದೇ ಸ್ಪಷ್ಟ  ನಿರ್ಧಾರ  ಪ್ರಕಟಿಸದ ಬಜೆಟ್ ನೀತಿಯನ್ನು ಪೌರಕಾರ್ಮಿಕ ಸಂಘದ ಜಿಲ್ಲಾ ಉಪಾಧ್ಯಕ್ಷ ಬಿ. ಉಮೇಶ್ ಖಂಡಿಸಿದರು.
ಅವರು ನಗರದ ಟೌನ್ ಹಾಲ್ ವೃತ್ತದಲ್ಲಿ ರಾಜ್ಯಸರ್ಕಾರ ಪೌರಕಾರ್ಮಿಕರಿಗೆ ಬಜೆಟ್ನಲ್ಲಿ ಸ್ಪಷ್ಟವಾದ  ನಿರ್ಧಾರವನ್ನು ಪ್ರಕಟಿಸದ ಕ್ರಮವನ್ನು  ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.
ನಗರಾಭಿವೃದ್ಧಿಗೆ ಎಂದು ಕೋಟಿ, ಕೋಟಿ ಹಣವನ್ನು  ಮೀಸಲಿರಿಸಿರುವ ಸರ್ಕಾರ ಪ್ರತಿದಿನ ನಗರದ  ಸ್ವಚ್ಛತೆಗಾಗಿ ದುಡಿಯುತ್ತಿರುವ ಪೌರಕಾರ್ಮಿಕರಿಗೆ  ಹಣವನ್ನು ಮೀಸಲಿರಿಸದ ಕ್ರಮವನ್ನು  ಖಂಡಿಸಿದರು.
ಭಗ್ನ: ಸಾಮಾಜಿಕ ನ್ಯಾಯದ ಮಾತನಾಡುತ್ತಿದ್ದ ಸರ್ಕಾರ ಪೌರಕಾರ್ಮಿಕರ ಬದುಕಿನ ಕಡೆ ಗಮನಹರಿಸಬಹುದು ಎಂದು ಬಹಳಷ್ಟು ನೀರಿಕ್ಷಗಳನ್ನು ಇಟ್ಟುಕೊಂಡಿದ್ದ ಪೌರಕಾರ್ಮಿಕರು ನಾವು ಸಹ ಸಾಮಾನ್ಯ ಜನರಂತೆ ಬದುಕಬಹುದು ಎಂಬ ಹಲವು ಕನಸುಗಳನ್ನು ಸರ್ಕಾರ ಭಗ್ನಮಾಡಿದೆ ಎಂದರು.ದಲಿತರ ಬಗ್ಗೆ  ಮತ್ತು ಸಾಮಾಜಿಕ ನ್ಯಾಯದ ಬಗ್ಗೆ  ಮಾತನಾಡುವ ಮಾನ್ಯ ಮುಖ್ಯಮಂತ್ರಿಗಳು  ಹಂತಹಂತವಾಗಿ ಗುತ್ತಿಗೆ ಪದ್ಧತಿಯನ್ನು ರದ್ದುಮಾಡುವುದಾಗಿ  ಹೇಳಿದ್ದಾರೆ. ಆದರೆ ಗುತ್ತಿಗೆ ಆಧಾರದಲ್ಲಿ  ದುಡಿಯುವವರನ್ನು ಕಾಯಂ ಮಾಡುವ  ಮಾತುಗಳನ್ನು ಆಡಿಲ್ಲ, ಸರ್ಕಾರ ಗುತ್ತಿಗೆ  ಪದ್ಧತಿಯನ್ನು ಸಂಪೂರ್ಣವಾಗಿ ರದ್ದು ಮಾಡಬೇಕು  ಮತ್ತು ಕಾಯಂ ಮಾಡಿಕೊಳ್ಳಬೇಕು ಎಂದರು.
ಪೌರಕಾರ್ಮಿಕರ ಸಂಘದ ಖಜಾಂಚಿ ಮಂಜುನಾಥ್ ಮಾತನಾಡಿ ಅಧಿಕಾರದ ಆಸೆಗಾಗಿ ಕಾಂಗ್ರೆಸ್ ಸರ್ಕಾರ ಬಾಯಿ ಬಿಟ್ಟರೆ ದಲಿತರ ಅಭಿವೃದ್ಧಿಗಾಗಿ ಶ್ರಮಿಸುತ್ತೇವೆ ಎಂದು ಹೇಳುತ್ತದೆ. ಆದರೆ  ಹಲವಾರು ವರ್ಷಗಳಿಂದ ನಮ್ಮ ತಂದೆ, ತಾಯಿ  ಸೇರಿದಂತೆ ಇಂದು ನಾವು ನಗರದ ಸ್ವಚ್ಛತೆಗಾಗಿ ದುಡಿಯುತ್ತಿದ್ದೇವೆ. ಆದರೆ ಸರ್ಕಾರ ನಮಗೆ ಕೊಟ್ಟಿರುವ ಕೊಡುಗೆ ಈ ಬಜೆಟ್ನಿಂದ ತಿಳಿಯುತ್ತಿದ್ದೆ ಎಂದರು.
ಕಾಂಗ್ರೆಸ್ ನೀತಿ ತೋರುತ್ತೆ: ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟಿಕೊಂಡು ಬಜೆಟ್ ಮಂಡಿಸಿರುವ  ಮುಖ್ಯಮಂತ್ರಿಗಳು ಪೌರಕಾರ್ಮಿಕರಿಗೆ ಸಮಾನ ಕೆಲಸಕ್ಕೆ ಸಮಾನ  ವೇತನವನ್ನು ಪ್ರಕಟಿಸುವ ಮಾತುಗಳನ್ನು ಆಡದೆ ಇರುವುದು ಕಾಂಗ್ರೆಸ್ ಸರ್ಕಾರದ ನೀತಿಯನ್ನು ತೋರಿಸುತ್ತದೆ ಎಂದರು.
ಈ ಕೂಡಲೇ ಸರ್ಕಾರ  ಪೌರಕಾರ್ಮಿಕರಿಗೆ ಕನಿಷ್ಠ ಕೂಲಿ 12 ಸಾವಿರ ನಿಗದಿ ಮಾಡಬೇಕು ಎಂದರು. ಮತ್ತು ಕಾಯಂಮಾತಿ ಮಾಡಬೇಕು. ದಲಿತರ ಅಭಿವೃದ್ಧಿಗೆ ಹೆಚ್ಚಿನ ಹಣವನ್ನು ಮೀಸಲಿಡಬೇಕು ಎಂದರು. ಪ್ರತಿಭಟನೆಯನ್ನು ಬೆಂಬಲಿಸಿ ಡಿ.ವೈ.ಎಫ್.ಐ ನ ಜಿಲ್ಲಾ ಕಾರ್ಯದರ್ಶಿ ಎಸ್. ರಾಘವೇಂದ್ರ ಎಸ್.ಎಫ್.ಐನ ಜಿಲ್ಲಾ ಮುಖಂಡ ಆದಿಮೂರ್ತಿ ಮಾತನಾಡಿದರು. ಪ್ರತಿಭಟನೆಯ ನೇತೃತ್ವವನ್ನು ನರಸಿಂಹಮೂರ್ತಿ, ಮೂರ್ತಿ, ದೇವರಾಜು, ಕದರಪ್ಪ, ಸಿದ್ದಲಿಂಗ, ಉಮೇಶ್, ಚಿಕ್ಕಗಂಗು ಮುಂತಾದವರು ವಹಿಸಿದ್ದರು.


ಸಾಮಾಜಿಕ ನ್ಯಾಯದ ಮಾತನಾಡುತ್ತಿದ್ದ ಸರ್ಕಾರ ಪೌರಕಾರ್ಮಿಕರ ಬದುಕಿನ ಕಡೆ ಗಮನಹರಿಸಬಹುದು ಎಂದು ಬಹಳಷ್ಟು ನೀರಿಕ್ಷಗಳನ್ನು ಇಟ್ಟುಕೊಂಡಿದ್ದ ಪೌರಕಾರ್ಮಿಕರು ನಾವು ಸಹ ಸಾಮಾನ್ಯ ಜನರಂತೆ ಬದುಕಬಹುದು ಎಂಬ ಹಲವು ಕನಸುಗಳನ್ನು ಸರ್ಕಾರ ಭಗ್ನಮಾಡಿದೆ
ಟಿ  ಬಿ. ಉಮೇಶ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.