ತುಮಕೂರು

ರೈತರಿಗೆ ಉಚಿತ ಬಿತ್ತನೆ ಬೀಜ ವಿತರಣೆ

Published On :

ಕ.ಪ್ರ. ವಾರ್ತೆ  ಹುಳಿಯಾರು  ಜು.13
ಸರ್ಕಾರದ ಬರಪರಿಹಾರ ಯೋಜನೆಯಡಿ ಪಟ್ಟಣದ ಪಶು ಆರೋಗ್ಯಕೇಂದ್ರದಲ್ಲಿ ಹುಳಿಯಾರು ಹಾಗೂ ಸುತ್ತಮುತ್ತಲ ಹಳ್ಳಿಗಳ ರೈತರಿಗೆ ಜಾನುವಾರುಗಳ ಮೇವಿಗಾಗಿ ಬಿತ್ತನೆ ಬೀಜದ ಜೋಳನ್ನು ಉಚಿತ ವಿತರಣೆ ಕಾರ್ಯಕ್ರಮಕ್ಕೆ  ಗ್ರಾ.ಪಂ.ಅಧ್ಯಕ್ಷೆ ಪುಟ್ಟಿಬಾಯಿ ಶನಿವಾರ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಪಶು ವೈಧ್ಯಾಧಿಕಾರಿ ಡಾ.ಮಂಜುನಾಥ್ ಮಾತನಾಡಿ, ಸರ್ಕಾರದ ವತಿಯಿಂದ ರೈತರಿಗಾಗಿ ಸಾಕಷ್ಟು ಸೌಲಭ್ಯಗಳಿವೆ. ಅಂತೆಯೇ ಪಶು ಇಲಾಖೆವತಿಯಿಂದ ಉಚಿತ ಬಿತ್ತನೆ ಬೀಜ, ರಾಸುಗಳಿಗೆ ಉಚಿತ ಲಸಿಕೆ ಹಾಕುವ ಕಾರ್ಯಕ್ರಮ, ಗೊಬ್ಬರ ವಿತರಣೆಯನ್ನು ಮಾಡಲಾಗುತ್ತಿದೆ. ಕಳೆದ ಎರಡು-ಮೂರು ವರ್ಷಗಳಿಂದ ಈ ಭಾಗದಲ್ಲಿ ಬರಗಾಲ ವ್ಯಾಪಿಸಿದ್ದು ಜಾನುವಾರುಗಳಿಗೆ ಕುಡಿಯಲು ನೀರಿಲ್ಲದೆ, ಮೇವಿಲ್ಲದೆ ರೈತರು ದನಕರುಗಳನ್ನು ಖಸಾಯಿ ಖಾನೆಗೆ ದೂಡುತ್ತಿದ್ದಾರೆ. ಇದನ್ನು ಅರಿತ ಸರ್ಕಾರ ಜಾನುವಾರುಗಳಿಗೆ ಅಗತ್ಯವಾಗಿ ಬೇಕಾಗಿರುವ ಮೇವನ್ನು ಬೆಳೆದುಕೊಳ್ಳಲು ರೈತರಿಗೆ ಉಚಿತವಾಗಿ ಮೇವಿಗೆ ಯೋಗ್ಯವಾದ ಜೋಳವನ್ನು ನೀಡುತ್ತಿದೆ. ಈ ಜೋಳವನ್ನು ಭಿತ್ತಿ ಕಟಾವು ಮಾಡಿದ ನಂತರ ಸ್ವಲ್ಪ ನೀರು ಹಾಯಿಸಿದರೆ ಪುನಃ ಚಿಗುರುತ್ತದೆ ಎಂದರು.
ಮೂರು ಕಡೆ ಲಸಿಕಾ ಕೇಂದ್ರ: ರಾಸುಗಳಿಗೆ ಬರುವ ಕಾಲುಬಾಯಿ ರೋಗಕ್ಕೆ ಲಸಿಕೆ ಹಾಕುವ ಕಾರ್ಯಕ್ರಮವಿದ್ದು ಪಟ್ಟಣದಲ್ಲಿ ಮೂರುಕಡೆ ಲಸಿಕಾ ಕೇಂದ್ರಗಳನ್ನು ಸ್ಥಾಪಿಸುತ್ತವೆ ಹಾಗೂ ಹಳ್ಳಿಗಳಿಗೆ ಸ್ವತಃ ತಾವೇ ಹೋಗಿ ಲಸಿಕೆ ಹಾಕುತ್ತವೇ. ಪ್ರತಿಯೊಬ್ಬ ರೈತರು ತಮ್ಮ ಜಾನುವಾರುಗಳಿಗೆ ಲಸಿಕೆ ಹಾಕಿಸಿ ಜಾನುವಾರುಗಳನ್ನು ರಕ್ಷಿಸಿಕೊಳ್ಳುವಂತೆ ತಿಳಿಸಿದರು ಹಾಗೂ ಲಸಿಕೆ ಹಾಕುವ ಕಾರ್ಯಕ್ರಮದ ಬಗ್ಗೆ ಗ್ರಾಮ ಪಂಚಾಯ್ತಿಯವರು ಬಹಿರಂಗ ಪ್ರಚಾರ ಮಾಡುವಂತೆ ಕೋರಿದರು.
ತಾ.ಪಂ.ಸದಸ್ಯ ಕೆಂಕೆರೆ ನವೀನ್ ಮಾತನಾಡಿ, ಪ್ರಸ್ತುತ ಜಾನುವಾರುಗಳ ಸಂಖ್ಯೆ ಕ್ಷೀಣಿಸಿದ್ದು, ರೈತರು ವ್ಯವಸಾಯವನ್ನು ಬಿಟ್ಟು ನಗರಗಳತ್ತ ವಲಸೆ ಹೋಗುತ್ತಿದ್ದಾರೆ ಎಂದು ವಿಷಾದಿಸಿದರು. ಬರಗಾಲದಿಂದ ರೈತರು ಹೆಚ್ಚಿನ ಕಷ್ಟದಲ್ಲಿ ಸಿಲುಕಿದ್ದು, ಇತ್ತ ಉತ್ತಮ ಮಳೆಯಾಗದೇ ಬೆಳೆಯು ಇಲ್ಲ, ಜಾನುವಾರುಗಳಿಗೆ ಮೇವು ಇಲ್ಲದಂತಾಗಿ ಪರಿತಪಿಸುತ್ತಿದ್ದಾರೆ ಎಂದರು. ರೈತರು ತಮ್ಮ ಜಾನುವಾರುಗಳಿಗೆ ಯಾವುದೇ ಸಮಸ್ಯೆ ಬಂದರೂ ನಿರ್ಲಕ್ಷಿಸದೆ  ತಕ್ಷಣವೇ ಪಶು ವೈದ್ಯರನ್ನು ಭೇಟಿ ಮಾಡಿ ಪಶುಗಳಿಗೆ ಜೌಷದೋಪಚಾರ ಮಾಡಿಸಿ, ಈ ಭಾಗದಲ್ಲಿ ಮಂಜುನಾಥ್ ಅವರಂತಹ ಉತ್ತಮ ಡಾಕ್ಟರ್ ಇರುವುದು ನಮ್ಮೆಲ್ಲರಿಗೂ ಹೆಚ್ಚಿನ ಉಪಯೋಗವಾಗಲಿದೆ ಎಂದರು.
ನೇಪಿಯಲ್ ಕಡ್ಡಿ ಮೇವನ್ನು ಬೆಳೆಯುಲು ಮುಂದಾಗಿರುವ ರೈತರಿಗೆ ಉಚಿತವಾಗಿ ಒಂದು ಫೈಬರ್ ಬಾಂಡ್ಲಿ,ಪಿಕಾಸಿ, ಎರಡು ಚೀಲ ಯೂರಿಯಾ, ಒಂದು ಚೀಲ ಡಿಎಪಿ ಗೊಬ್ಬರವನ್ನು ವಿತರಿಸಲಾಯಿತು. ಗ್ರಾ.ಪಂ.ಅಧ್ಯಕ್ಷೆ ಪುಟ್ಟಿಬಾಯಿ, ತಾ.ಪಂ.ಸದಸ್ಯ ಜಯಣ್ಣ ಸೇರಿದಂತೆ ಹುಳಿಯಾರು ಹಾಗೂ ಸುತ್ತಮುತ್ತಲ ಹಳ್ಳಿಗಳ ರೈತರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.