ತುಮಕೂರು

ಅನ್ನಭಾಗ್ಯ ಯೋಜನೆ ಕಾಂಗ್ರೆಸ್ ಸರ್ಕಾರದ ಮಹತ್ವದ ಯೋಜನೆ

Published On :

ಕ.ಪ್ರ. ವಾರ್ತೆ  ತಿಪಟೂರು  ಜು.14
ಕರ್ನಾಟಕವನ್ನು ಹಸಿವು ಮುಕ್ತ ರಾಜ್ಯವನ್ನಾಗಿ ಮಾಡಬೇಕಾಗಿರುವುದರಿಂದ ಕಾಂಗ್ರೆಸ್ ಸರ್ಕಾರ ಚುನಾವಣಾ ಸಂದರ್ಭದಲ್ಲಿ ಮತದಾರಪ್ರಭುವಿಗೆ ನೀಡಿದ ಪ್ರಣಾಳಿಕೆಯ ಭರವಸೆಯಂತೆ 1ರು.ಕೆ.ಜಿ.ಯಂತೆ 30 ಕೆ.ಜಿ.ಅಕ್ಕಿಯನ್ನು ಅರ್ಹ ಪಡಿತರದಾರರಿಗೆ ನೀಡುವುದರ ಮೂಲಕ ಅನ್ನಭಾಗ್ಯ ಯೋಜನೆಯನ್ನು ಮಹತ್ವದ ಯೋಜನೆಯನ್ನಾಗಿ ಮಾಡಿದೆ ಎಂದು ಶಾಸಕ ಕೆ.ಷಡಕ್ಷರಿ ತಿಳಿಸಿದರು.
ನಗರದ ಟಿ.ಎ.ಪಿ.ಸಿ.ಎಂ.ಎಸ್. ಆವರಣದಲ್ಲಿ ಬಿ.ಪಿ.ಎಲ್.ಪಡಿತರದಾರರ ಕುಟುಂಬಕ್ಕೆ 30 ಕೆ.ಜಿ.ಅಕ್ಕಿ ನೀಡುವ ಅನ್ನಭಾಗ್ಯ ಯೋಜನೆ ಉದ್ಘಾಟಿಸಿ ಮಾತನಾಡಿದ ಅವರು ಈ ಯೋಜನೆ ತುರ್ತಾಗಿ ಕಾರ್ಯಗತವಾಗದೆ ಇರಲು ಅಧಿಕಾರಿಗಳ ತಯಾರಿ ನಿಧಾನಗತಿ ಆದ್ದರಿಂದ ಸ್ವಲ್ಪ ತಡವಾಯಿತು. ರಾಜ್ಯದಲ್ಲಿ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಅನ್ನಭಾಗ್ಯ ಯೋಜನೆ ಈ ತಿಂಗಳಿಂದ ಜಾರಿಗೆ ಬಂದಿದೆ. ಈ ತಾಲೂಕಿನಲ್ಲಿ 37467 ಕುಟುಂಬಕ್ಕೆ ಈ ಯೋಜನೆಯ ಭಾಗ್ಯ ದೊರೆಯಲಿದೆ. ರಾಜ್ಯದಲ್ಲಿ ಈ ಬಾರಿ ಅತಿವೃಷ್ಟಿ ಅನಾವೃಷ್ಟಿಯಾಗಿದ್ದು, ಸರ್ಕಾರ ತುರ್ತಾಗಿ ಕ್ರಮಕೈಗೊಳ್ಳಲಿದೆ. ರಾಜ್ಯ ಸರ್ಕಾರ ರೈತರಿಗೆ 2ಲಕ್ಷ ರು.ವರೆಗೆ ಬಡ್ಡಿ ಸಾಲ ನೀಡುತ್ತಿದ್ದು, ರೈತರ ಪರ ಚಿಂತನೆ ಮಾಡುವ ಸರ್ಕಾರ ನಮ್ಮದಾಗಿದೆ ಎಂದರು.
ಸಹಕರಿಸಿ: ಉಪವಿಭಾಗಾಧಿಕಾರಿ ಶಿಲ್ಪ ಮಾತನಾಡಿ ಸರ್ಕಾರದ ಈ ಯೋಜನೆ ಮಹತ್ವ ಯೋಜನೆಯಾಗಿದ್ದು, ಅಧಿಕಾರಿಗಳ ಸಹಕಾರ ಅಗತ್ಯ. ಪ್ರತಿಯೊಬ್ಬರು ಈ ಯೋಜನೆ ಯಶಸ್ಸಿಗೆ ಸಹಕರಿಸಬೇಕೆಂದರು. ಜಿ.ಪಂ.ಸದಸ್ಯ ತ್ರಿಯಂಬಕ ಮಾತನಾಡಿ ಚುನಾಯಿತ ಪ್ರತಿನಿಧಿಗಳು ಮತ್ತು ಅಧಿಕಾರಿಗಳು ಅರ್ಹ ಫಲಾನುಭವಿಗಳನ್ನು ಆರಿಸಬೇಕು. ಕಾಂಗ್ರೆಸ್ ಸರ್ಕಾರ ಉತ್ತಮ ಯೋಜನೆ ಹಾಕಿಕೊಂಡಿದೆ ಎಂದರು. ಟಿ.ಎ.ಪಿ.ಸಿ.ಎಂ.ಎಸ್.ಅಧ್ಯಕ್ಷ ರೇಣುಕಾಮೂರ್ತಿ ಮಾತನಾಡಿ ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಸರ್ಕಾರದಿಂದ ಉತ್ತಮ ಯೋಜನೆಗಳನ್ನು ನೀಡಿದ್ದಾರೆ. ಮಧ್ಯಮ ವರ್ಗದವರಿಗೂ ಈ ಯೋಜನೆಯ ಲಾಭ ದೊರಕಬೇಕೆಂದರು. ಇ.ಓ. ಕೃಷ್ಣಾರೆಡ್ಡಿ, ತಾ.ಪಂ.ಉಪಾಧ್ಯಕ್ಷ ರಾಜು,ಸದಸ್ಯ ರಾಮಯ್ಯ, ಆಹಾರ ಇಲಾಖಾಧಿಕಾರಿಗಳಾದ ಕಲ್ಲಪ್ಪ,ರಂಗಸ್ವಾಮಿ ಮತ್ತಿತರರಿದ್ದರು. ಶುಭ ಪ್ರಾರ್ಥಿಸಿ, ತಹಸೀಲ್ದಾರ್ ಮಂಜುನಾಥ್ ಸ್ವಾಗತಿಸಿ, ಕಂದಾಯಾಧಿಕಾರಿ ರಂಗಪ್ಪ ನಿರೂಪಿಸಿ, ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.