ಅರ್ಹರಿಗೆ ಮಾಸಾಶನ ಮಂಜೂರಾತಿ
ಕ.ಪ್ರ. ವಾರ್ತೆ ಪಾವಗಡ ಜು.14
ಈ ಹಿಂದೆ ಅಧಿಕಾರಿಗಳ ಅಸಡ್ಡೆಯಿಂದ ಅರ್ಹರ ಮಾಸಾಶನ ಸೌಲಭ್ಯ ವಿಳಂಬವಾಗಿದ್ದು ಅರ್ಹರ ಮಾಸಾಶನ ಮಂಜೂರಾತಿ ಪತ್ರಗಳನ್ನು ಹಂತಹಂತವಾಗಿ ವಿತರಿಸುವ ಗುರಿ ಹೊಂದಿದ್ದೇನೆ ಎಂದು ಶಾಸಕ ತಿಮ್ಮರಾಯಪ್ಪ ತಿಳಿಸಿದರು.
ಅವರ ತಾಲೂಕು ಆಡಳಿತ ಹಾಗೂ ತಾಪಂ ವತಿಯಿಂದ ವೈ.ಎನ್ ಹೊಸಕೋಟೆ ಗ್ರಾಮದ ಗ್ರಾಪಂ ಅವರಣದಲ್ಲಿ ಶನಿವಾರ ಏರ್ಪಡಿಸಿದ್ದ ಅನ್ನ ಭಾಗ್ಯ ಹಾಗೂ ನಿರ್ಗತಿಕರ ಮಾಸಾಶನ ಮಂಜೂರಾತಿ ಪತ್ರಗಳ ವಿತರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ತಾಲೂಕಿನ ನಿಡಗಲ್ ಹೋಬಳಿ ಸೇರಿದಂತೆ ವೈ.ಎನ್ ಹೊಸಕೋಟೆ ಹೋಬಳಿಗೆ ಇಂದು 482 ನಿರ್ಗತಿಕರ ಮಾಸಾಶನದ ಮಂಜೂರಾತಿ ಪತ್ರಗಳನ್ನು ವಿತರಿಸಲಾಗಿದೆ. ಅರ್ಹರ ಅನೇಕ ಮಂಜೂರಾತಿ ಪತ್ರಗಳು ಅತೀ ಶೀಘ್ರ ವಿತರಿಸಲಾಗುವುದು. ಮಾಸಾಶನ ಮಂಜೂರು ಪತ್ರಗಳು ತಲುಪಿದ ಕೂಡಲೇ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಂಡಿದ್ದು 2 ತಿಂಗಳ ಒಳಗಡೆ ಮಾಸಾಶನದ ಸೌಲಭ್ಯ ಎಲ್ಲಾ ಫಲಾನುಭವಿಗಳಿಗೆ ದೊರೆಯುವ ಭರವಸೆ ವ್ಯಕ್ತಪಡಿಸಿದರು. ಅರ್ಹರಿಗೆ ಕಾರ್ಡು ಸೌಲಭ್ಯ ಕಲ್ಪಿಸುವಂತೆ ತಹಸೀಲ್ದಾರ್ ಆಲ್ತಾಪ್ ಪಾಷ ಹಾಗೂ ಇಒ ರಂಗನಾಥ್ ಅವರಿಗೆ ಸಭೆಯಲ್ಲಿ ಆದೇಶಿಸಿದರು. ಗ್ರಾಪಂ ಪಿಡಿಒ ಕಾರ್ಯದರ್ಶಿಗಳು ಅರ್ಹರಿಗೆ ಸೌಲಭ್ಯ ದೊರಕಿಸಲು ನಿರ್ಲಕ್ಷ್ಯ ವಹಿಸುತ್ತಿರುವುದು ತಮ್ಮ ಗಮನಕ್ಕೆ ಬಂದಿದ್ದು ಈ ಬಗ್ಗೆ ವರದಿ ಪಡೆಯಲಾಗಿದೆ. ಜವಾಬ್ದಾರಿ ಇಲ್ಲದ ಅಧಿಕಾರಿಗಳು ಮುಂದಿನ ಪರಿಣಾಮ ಎದುರಿಸಬೇಕಾಗಿದೆ ಎಂದು ಎಚ್ಚರಿಸಿದರು. ಎನ್. ತಿಮ್ಮಾರೆಡ್ಡಿ, ಪ್ರಧಾನ ಕಾರ್ಯದರ್ಶಿ ಗೋವಿಂದಬಾಬು, ಮುಖಂಡರಾದ ಎಸ್.ಟಿ. ನಾಗರಾಜ್, ಜಿ.ಬಿ.ದೇವರಾಜ್ ಕತಿಕ್ಯಾತನಹಳ್ಳಿ ಚಂದ್ರಶೇಖರ್ ಮುಂತಾದವರು ಮಾತನಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

