ತುಮಕೂರು

ಗ್ರಾಮೀಣ ಮಹಿಳೆಯರು ಸ್ವಾವಲಂಬಿಗಳಾಗಲಿ

Published On :

ಕಪ್ರ.ವಾರ್ತೆ  ಚೇಳೂರು  ಜು.14
ಗ್ರಾಮೀಣ ಮಹಿಳೆಯರು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ವತಿಯಿಂದ ದೊರೆಯುವ ಸೌಲಭ್ಯಗಳನ್ನು  ಬಳಸಿಕೊಂಡು ಸ್ವಾವಲಂಬಿಗಳಾಗಬೇಕು ಎಂದು ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಮೇಲ್ವಿಚಾರಕ ಹರೀಶ್. ಡಿ ತಿಳಿಸಿದರು.
ಸೀಗೆಮಳೆಹಟ್ಟಿ ಪ್ರಾಥಮಿಕ ಪಾಠಶಾಲೆಯ ಆವರಣದಲ್ಲಿ  ಆಯೋಜಿಸಿದ್ದ ಶ್ರೀ ಧರ್ಮಸ್ಥಳ  ಗ್ರಾಮೀಣಾಭಿವೃದ್ಧಿ ವತಿಯಿಂದ ಒಕ್ಕೂಟದ ತ್ರೈಮಾಸಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಶ್ರೀಗಳ ಸಂಸ್ಥೆಯಲ್ಲಿ ಸಂಘಗಳನ್ನು ಕಟ್ಟಿರುವ ಗ್ರಾಮೀಣ ಮಹಿಳೆಯರಿಗೆ ಸಾಲ ಸೌಲಭ್ಯಗಳನ್ನು ಕೊಡುತ್ತಿರುವುದರಿಂದ ಮಹಿಳೆಯರು ಸ್ವಾವಲಂಬಿಗಳಾಗಿ ಬದುಕಬಹುದಾಗಿದೆ ಎಂದರು.
ಗೃಹ ನಿರ್ಮಾಣಕ್ಕಾಗಿ, ಮನೆಯ ಕಾಂಪೌಂಡ್, ಕೃಷಿ ಚಟುವಟಿಕೆ, ಹೈನುಗಾರಿಕೆ, ತಿನಿಸುಗಳ ತಯಾರಿಕೆ ಮುಂತಾದ ಕೆಲಸಗಳಲ್ಲಿ  ತೊಡಗುವವರಿಗೆ  ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯು ಸಾಲ  ಸೌಲಭ್ಯಗಳನ್ನು ನೀಡುತ್ತಿದೆ. ಮಹಿಳೆಯರು ಈ ಸದಾವಕಾಶವನ್ನು ಸದುಪಯೋಗ ಪಡಿಸಿಕೊಳ್ಳದೆ ಉಪಯುಕ್ತವಾಗುವಂತೆ ಬಳಕೆ ಮಾಡಿಕೊಳ್ಳಬೇಕಿದೆ ಎಂದರು.
ಸಾಧನೆಗೆ ಪಾತ್ರ: ನಮ್ಮ ಸಂಸ್ಥೆಯು ರಾಜ್ಯಾದಾದ್ಯಂತ ಗ್ರಾಮೀಣ ಪ್ರದೇಶಗಳಿಗೆ ಭೇಟಿ ನೀಡಿ ಮಹಿಳೆಯರನ್ನು  ಸಂಘಟಿತರನ್ನಾಗಿಸಿ ಸ್ವ- ಸಹಾಯ ಗುಂಪುಗಳಾಗಿ ಒಟ್ಟುಗೂಡಿಸಿ ಮಾಹಿತಿಯ ರವಾನೆ ಮಾಡುವುದರ ಮೂಲಕ ಸಾಧನೆಗೆ ಪಾತ್ರವಾಗಿದೆ ಎಂದರು. ಗ್ರಾಮೀಣ ಜನತೆಯಲ್ಲಿ ಅಭಿವೃದ್ಧಿಯ ಮನೋಭಾವನೆಯನ್ನು ಬೇಳೆಸಿ ನಿರುದ್ಯೋಗವನ್ನು  ನಿವಾರಣೆ ಮಾಡುವ ಉದ್ದೇಶ ನಮ್ಮದಾಗಿದೆ, ಗ್ರಾಮೀಣ ಮಹಿಳೆಯರು ಮಾತನಾಡಲು ಮುಂದೆ ಬರುತ್ತಿಲ್ಲ ಹಿಂಜರಿಯುತ್ತಿದ್ದಾರೆ, ಆದ್ದರಿಂದ ಗ್ರಾಮೀಣ ಪ್ರದೇಶಗಳಿಗೆ ಭೇಟಿ ಮಾಡಿ  ಅಲ್ಲಿನ ಮಹಿಳೆಯರಿಗೆ ಮಾತನಾಡುವ ಶೈಲಿ ಹಾಗೂ ಉದ್ಯೋಗಿಗಳಾಗಿ ಅಭಿವೃದ್ಧಿಯತ್ತ ಮುಂದೆ ಸಾಗಲಿ  ಎನ್ನುವ ನಿಟ್ಟಿನಲ್ಲಿ ಪ್ರತಿಯೊಂದು ಹಳ್ಳಿಗೂ ಪ್ರಯಾಣ ಬೆಳೆಸಿ ತಿಳುವಳಿಕೆ ನೀಡುತ್ತಿದ್ದೇವೆ ಎಂದರು.
 ಮೇಲ್ವಿಚಾರಕ ಹರೀಶ್. ಡಿ, ಅಧ್ಯಕ್ಷ ನರಸಿಂಹಯ್ಯ, ಸೇವಾ  ಪ್ರತಿನಿಧಿ ಎಸ್.ಪಿ.ಎನ್ ಹನುಮಂತರಾಜು,  ಶಿವಗಂಗಾ, ವಿಜಯಲಕ್ಷ್ಮಿ, ಬಸವರಾಜು, ಸುವರ್ಣ, ಕಮಲಮ್ಮ, ಸಂಘದ ಸದಸ್ಯರು ಮತ್ತು ಕಾರ್ಯಕರ್ತರು ಮುಂತಾದ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.