ತುಮಕೂರು

ಎಲ್ಲರ ಸಹಕಾರದಿಂದ ಸಾಹಿತ್ಯ ಸಮ್ಮೇಳನ ಯಶಸ್ವಿ

Published On :

ಮಧುಗಿರಿ: ಎಲ್ಲರ ಸಹಕಾರದಿಂದ 5ನೇ ಕನ್ನಡ ಸಾಹಿತ್ಯ ಸಮ್ಮೇಳನ ಅತ್ಯಂತ ಯಶಸ್ವಿಯಾಗಿ ನಡೆಯಿತು ಎಂದು  ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಚಿ.ಸೂ. ಕೃಷ್ಣಮೂರ್ತಿ ತಿಳಿಸಿದರು.
ಸಮ್ಮೇಳನದ ಯಶಸ್ಸಿಗೆ ಸಹಕರಿಸಿದ ಸ್ವಾಗತ ಸಮಿತಿ ಪದಾಧಿಕಾರಿಗಳು ಮತ್ತು ತಾಲೂಕು ಸಾಹಿತ್ಯ ಪರಿಷತ್ತು ಪದಾಧಿಕಾರಿಗಳಿಗೆ ಏರ್ಪಡಿಸಿದ್ದ ಅಭಿನಂದನಾ ಸಭೆಯಲ್ಲಿ  ಎಲ್ಲರಿಗೂ ಶಾಲು ಹೊದಿಸಿ ನೆನಪಿನ ಕಾಣಿಕೆ ನೀಡಿ ಅಭಿನಂದಿಸಿ ಮಾತನಾಡಿದರು.
ಪರಿಷತ್ತಿನ ಎಲ್ಲ ಪದಾಧಿಕಾರಿಗಳು ವಿವಿಧ ಸಮಿತಿ ಮುಖ್ಯಸ್ಥರು ಮತ್ತು ಶಿಕ್ಷಕ ಸಮೂಹ ತಮ್ಮ ಪಾಲಿನ ಕೆಲಸ, ಕಾರ್ಯವನ್ನು ಅತ್ಯಂತ ಶ್ರದ್ಧೆಯಿಂದ ಮಾಡಿದ್ದನ್ನು ಮರೆಯುವಂತಿಲ್ಲ ಎಂದು ಶ್ಲಾಘಿಸಿದರು.
ಹಿರಿಯ ಸಾಹಿತಿ ಪ್ರೊ.ಮ.ಲ.ನ.ಮೂರ್ತಿ ಮಾತನಾಡಿ, ಈ ಸಮ್ಮೇಳನದ ಅನುಭವ ಅವಿಸ್ಮರಣೀಯವಾಗಿದ್ದು ಯಶಸ್ಸು ಕಂಡಿದೆ. ಕಾರ್ಯಕ್ರಮಕ್ಕೆ ಬಂದು ಭಾಗವಹಿಸಿದವರು ಮುದಗೊಂಡಿದ್ದಾರೆ. ಅರ್ಥಪೂರ್ಣ ಗೋಷ್ಠಿಗಳು, ಮನರಂಜನೆ, ಸಾಂಸ್ಕೃತಿಕ ಕಾರ್ಯಕ್ರಮ, ರುಚಿಕಟ್ಟಾದ ಭೋಜನ ಮತ್ತು ಸುವ್ಯಸ್ಥಿತ ಪೂರ್ವ ತಯಾರಿ ಈ ಸಮ್ಮೇಳನವನ್ನು ಅಚ್ಚುಕಟ್ಟಾಗಿ ನಡೆಸಿ ಕೊಟ್ಟ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಶ್ರಮ ಅಡಗಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತು ಕೋಶಾಧ್ಯಕ್ಷ ರಂಗರಾಜು ಮಾತನಾಡಿ, ಈ ಸಮ್ಮೇಳನಕ್ಕೆ 8ಲಕ್ಷ ರು. ವೆಚ್ಚವಾಗಿದೆ. ಈ ಪೈಕಿ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು 1ಲಕ್ಷ, ಸಾರ್ವಜನಿಕರಿಂದ ಮತ್ತು ಪ್ರತಿನಿಧಿ ಶುಲ್ಕ ಸುಮಾರು 5ಲಕ್ಷ ರು. ಸಂಗ್ರಹವಾಗಿದೆ. 2 ಲಕ್ಷ ರು.ಕೊರತೆಯಿದ್ದು ಬಾಕಿ ಬರಬೇಕಾದ ಹಣ ಬಂದರೆ ಸರಿದೂಗಬಹುದು.ವೆಚ್ಚದ ಲೆಕ್ಕ ಇನ್ನೂ  ನಿಖರವಾಗಿ ದೊರೆತಿಲ್ಲ, ಮುಂದಿನ ಸಭೆಯಲ್ಲಿ ನಿಖರವಾಗಿ ಜಮಾ-ಖರ್ಚು ವಿವರಿಸುವುದಾಗಿ ತಿಳಿಸಿದರು.
ಸಮ್ಮೇಳನದ ಸರ್ವಾಧ್ಯಕ್ಷ ಎಂ.ಡಿ.ಶ್ರೀನಿವಾಸ್ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ಎಂ.ಜಿ.ಶ್ರೀನಿವಾಸಮೂರ್ತಿ, ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಪಿ.ಸಿ.ಕೃಷ್ಣಾರೆಡ್ಡಿ, ಕೋಶಾಧ್ಯಕ್ಷ ಬಿ.ಬಸವರಾಜು, ಉಪಾಧ್ಯಕ್ಷ ನಾ.ಮಹಾಲಿಂಗೇಶ್, ತಾ.ಕಸಾಪ ಮಾಜಿ ಅಧ್ಯಕ್ಷ ಪ.ವಿ.ಸುಬ್ರಹ್ಮಣ್ಯ, ಸಿ.ಕೃಷ್ಣಪ್ಪ, ಸಂಘಟನಾ ಕಾರ್ಯದರ್ಶಿ ಮಂಜುನಾಥ್, ಐ.ಡಿ.ಹಳ್ಳಿ ರಂಗನಾಥ್, ಪತ್ರಕರ್ತ ಬಂಡಿಚೌಡಯ್ಯ ಉಪಸ್ಥಿತರಿದ್ದರು.
ರಾಮಚಂದ್ರಪ್ಪ ಪ್ರಾರ್ಥಿಸಿದರು. ಟಿ.ಎಸ್.ಕೃಷ್ಣಚಾರ್ ಸ್ವ್ವಾಗತಿಸಿ ಅಮರಾವತಿ ದ್ರೇಹಾಚಾರ್ ನಿರೂಪಿಸಿ ವಂದಿಸಿದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.