ಎಲ್.ಪಿ.ಜಿ. ಗ್ರಾಹಕರಿಗೆ ವಿಶೇಷ ಸೂಚನೆ
ತುಮಕೂರು: ಎಲ್.ಪಿ.ಜಿ. ಗ್ರಾಹಕರಿಗೆ ಸಿಲಿಂಡರ್ ಮೇಲಿನ ಸಬ್ಸಿಡಿ ಹಣವನ್ನು ನೇರವಾಗಿ ಗ್ರಾಹಕರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡುವ ನೇರ ಸವಲತ್ತು ವರ್ಗಾವಣೆ ಯೋಜನೆಯನ್ವಯ ತುಮಕೂರು ಜಿಲ್ಲೆಯ ಎಲ್ಲಾ ಎಲ್.ಪಿ.ಜಿ. ಗ್ರಾಹಕರು ತಮ್ಮ ಆಧಾರ್ ಕಾರ್ಡ್ ಪ್ರತಿಯನ್ನು ತಮ್ಮ ಗ್ಯಾಸ್ ಏಜೆನ್ಸಿ ಮತ್ತು ಬ್ಯಾಂಕ್ ಖಾತೆ ಹೊಂದಿರುವ ಬ್ಯಾಂಕ್ಗಳಿಗೆ ಈ ಕೂಡಲೇ ತಲುಪಿಸುವಂತೆ ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ ಅವರು ಕೋರಿದ್ದಾರೆ. ಒಂದು ವೇಳೆ ಆಧಾರ್ ಕಾರ್ಡ್ ಹೊಂದಿಲ್ಲದಿದ್ದರೆ ಅಂತಹ ಎಲ್.ಪಿ.ಜಿ. ಗ್ರಾಹಕರು ಸೆಪ್ಟೆಂಬರ್ 1 ನೇ ತಾರೀಖಿನಿಂದ ಸಿಲಿಂಡರ್ನ್ನು ಮಾರುಕಟ್ಟೆಯ ದರದಲ್ಲಿ ಪಡೆಯಬೇಕಾಗಿರುತ್ತದೆ. ಎಲ್.ಪಿ.ಜಿ. ಗ್ರಾಹಕರು ಕೊನೆಯ ದಿನಾಂಕದವರೆಗೆ ಕಾಯದೆ ಕೂಡಲೇ ಆಧಾರ್ ಕಾರ್ಡ್ನ್ನು ಮಾಡಿಸಿಕೊಳ್ಳತಕ್ಕದ್ದು.
ಆಧಾರ್ ಕಾರ್ಡ್ ಇಲ್ಲದ ಎಲ್.ಪಿ.ಜಿ. ಅನಿಲ ಗ್ರಾಹಕರಿಗಾಗಿ ಆಧಾರ್ ನೋಂದಣಿ ಕೇಂದ್ರಗಳು ಜುಲೈ 21 ಭಾನುವಾರ ಹಾಗೂ 28 ಭಾನುವಾರ ಮತ್ತು ಆಗಸ್ಟ್ 4 ಭಾನುವಾರದಂದು ವಿಶೇಷವಾಗಿ ತೆರೆದಿರುತ್ತದೆ. ಉಳಿದ ದಿನಗಳಲ್ಲಿ ಎಲ್ಲಾ ನೊಂದಣಿ ಕೇಂದ್ರಗಳಲ್ಲಿ ಅನಿಲ ಗ್ರಾಹಕರಿಗಾಗಿಯೇ ವಿಶೇಷ ಕೌಂಟರ್ ಅನ್ನು ತೆರೆಯಲಾಗಿದ್ದು, ಗ್ರಾಹಕರು ಈ ಸೇವೆಯ ಲಾಭ ಪಡೆದುಕೊಳ್ಳುವಂತೆ ಅವರು ಕೋರಿದ್ದಾರೆ.
ದುಷ್ಕರ್ಮಿಗಳಿಂದ ನಲಿ-ಕಲಿ ಕೊಠಡಿಗೆ ಬೆಂಕಿ
ತಿಪಟೂರು: ತಾಲೂಕಿನ ಹೊನ್ನವಳ್ಳಿ ಹೋಬಳಿ ಹಾಲ್ಕುರಿಕೆ ಗ್ರಾಮದಲ್ಲಿನ ಸರ್ಕಾರಿ ಪ್ರಾಥಮಿಕ ಪಾಠಶಾಲೆಯ ನಲಿ-ಕಲಿ ಕೊಠಡಿ ಒಳನುಗ್ಗಿ ಕೊಠಡಿಯಲ್ಲಿದ್ದ ನಲಿ-ಕಲಿ ಕಾರ್ಡ್ಗಳು, ಚಾರ್ಟ್ಗಳಿಗೆ ಯಾರೋ ದುಷ್ಕರ್ಮಿಗಳು ಬೆಂಕಿ ಹಚ್ಚಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ. ಶಾಲಾ ಶಿಕ್ಷಕರ ವಿರುದ್ಧ ಕೆಲ ಅಶ್ಲೀಲ ಪದಗಳನ್ನು ಬರೆದಿರುವ ದೃಶ್ಯ ಕಂಡುಬಂದಿದ್ದು, ಶಾಲೆಯ ಯಾವುದೇ ದಾಖಲಾತಿಗಳಿಗೆ ತೊಂದರೆಯಾಗಿಲ್ಲವೆಂದು ಬಿ.ಇ.ಒ ಮನಮೋಹನ್ ತಿಳಿಸಿದ್ದಾರೆ. ಹೊನ್ನವಳ್ಳಿ ಪೊಲೀಸರು ಸ್ಥಳ ಪರಿಶೀಲಿಸಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಜಾತ್ರಾ ಮಹೋತ್ಸವ
ಮಧುಗಿರಿ: ತಾಲೂಕಿನ ಐ.ಡಿ.ಹಳ್ಳಿ ಹೋಬಳಿ ದೊಡ್ಡದಾಳವೆಟ್ಟ ಗ್ರಾಮದ ಶ್ರೀಲಕ್ಷ್ಮೀನರಸಿಂಹಸ್ವಾಮಿ ಜಾತ್ರಾ ಮಹೋತ್ಸವ ಜು. 18ರಂದು ಪ್ರಾರಂಭವಾಗಿ 22ರವರೆಗೆ ವಿಜೃಂಭಣೆಯಿಂದ ನಡೆಯಲಿದ್ದು ಬ್ರಹ್ಮರಥೋತ್ಸವ ಅದ್ಧೂರಿಯಾಗಿ ನಡೆಯಲಿದೆ ಎಂದು ದೇವಸ್ಥಾನದ ಮೂಲಗಳು ಪ್ರಕಟಣೆಯಲ್ಲಿ ತಿಳಿಸಿವೆ. 18 ರಂದು ಅಂಕುರಾರ್ಪಣ, ಭೇರಿತಾಡನ ಕೌತುಕ.19 ರಂದು ಕಲ್ಯಾಣೋತ್ಸವ, 20 ರಂದು ಬ್ರಹ್ಮರಥೋತ್ಸವ ನಡೆಯಲಿದ್ದು ಶಾಸಕ ಕೆ.ಎನ್.ರಾಜಣ್ಣ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸುವರು. 21 ರಂದು ರಾತ್ರಿ ಶಯನೋತ್ಸವ, 22 ಕ್ಕೆ ದವನೋತ್ಸವ ಸೇರಿದಂತೆ ಇನ್ನು ಅನೇಕ ದೇವತಾ ಕಾರ್ಯಗಳು ನಡೆಯಲಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

