ತುಮಕೂರು

ಜಾತಿಯಿಂದ ಅಸಹನೆ ಹೆಚ್ಚಳ: ದಿಲೀಪ್ಕುಮಾರ್

Published On :

ಕ.ಪ್ರ. ವಾರ್ತೆ   ಚಿಕ್ಕನಾಯಕನಹಳ್ಳಿ   ಜು.19
ವಿಶ್ವಕ್ಕೆ ವಸುದೈವ ಕುಟುಂಬದ ಮಂತ್ರವನ್ನು ಬೋಧಿಸಿದ ಭಾರತದ ಆಶಯದಂತೆ ವಿಶ್ವ ಇಂದು ವಸುದೈವ ಕುಟುಂಬವಾಗಿ ಉಳಿದಿಲ್ಲ ಎಂದು ದಿಲೀಪ್ಕುಮಾರ್ ಷಾ ವಿಷಾದಿಸಿದರು.
ಪಟ್ಟಣದ ರೋಟರಿ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿ, ಪ್ರಪಂಚದಲ್ಲಿ ಜಾತಿಗಳು ಹೆಚ್ಚಾಗಿವೆ. ಧಾರ್ಮಿಕ ಅಸಹನೆಯ ಜ್ವಾಲೆ  ಪ್ರಪಂಚವನ್ನು ದಹಿಸುತ್ತಿದೆ. ಇಂತಹ ಸಂಕೀರ್ಣ ಸಮಯದಲ್ಲಿ ಪ್ರಪಂಚವನ್ನು ಬೆಸೆಯುವ ಕಾರ್ಯ ರೋಟರಿ ಕಡೆಯಿಂದ ಸಾಗಿದೆ. ಆರೋಗ್ಯವಂತ ಮನಸ್ಸುಗಳಿದ್ದರೆ, ಸಮಾಜವು ಆರೋಗ್ಯವಾಗಿರುತ್ತದೆ. ಈ ನಿಟ್ಟಿನಲ್ಲಿ ರೋಟರಿ ಆರೋಗ್ಯ, ಶಿಕ್ಷಣ, ನೈರ್ಮಲ್ಯದ ಕಡೆಗೆ ಜನರನ್ನು ಸೆಳೆಯುವ ಕಾರ್ಯವನ್ನು ಯಶಸ್ವಿಯಾಗಿ ಮುಂದುವರಿಸಿಕೊಂಡು ಹೋಗುತ್ತಿದೆ. ಪ್ರಪಂಚಕ್ಕೆ ರೋಟರಿ ನೀಡುವ ಸಂದೇಶ ಆರೋಗ್ಯವಂತ ಸಮಾಜವೇ ದೇಶದ ಸಂಪತ್ತು. ಇದು ರೋಟರಿ ಸಂದೇಶ ಎಂದರು.
ನೂತನ ಪದಾಧಿಕಾರಿಗಳಿಗೆ ಪದವಿ ಪ್ರಧಾನ ಮಾಡಿ ಮಾತನಾಡಿದ ಕೆ.ಪಿ.ನಾಗೇಶ್, ವಿಶ್ವಮಟ್ಟದಲ್ಲಿ 108 ವಸಂತ ತುಂಬಿರುವ ರೋಟರಿ ಕ್ಲಬ್ ತಾಲೂಕಿನಲ್ಲಿ 39ರ ಹರೆಯಕ್ಕೆ ಕಾಲಿಟ್ಟಿದೆ. ರೋಟರಿ ತನ್ನ ಸೇವೆಯಿಂದಾಗಿಯೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದೆ. ತಾಲೂಕಿನಲ್ಲಿ 39 ವರ್ಷಗಳಿಂದ ಸೇವೆ ಮಾಡುತ್ತಾ ಬಂದಿರುವ ರೋಟರಿ ಪ್ರಸಕ್ತ ಸಾಲಿನಲ್ಲಿ 15 ಪ್ರಶಸ್ತಿ ತನ್ನದಾಗಿಸಿಕೊಂಡಿದೆ ಎಂದರು.
ಈ ಸಂದರ್ಭದಲ್ಲಿ ಪ್ರದೀಪ್ಕುಮಾರ್ ಅಧ್ಯಕ್ಷರಾಗಿ, ಡಾ. ಪ್ರಶಾಂತಕುಮಾರಶೆಟ್ಟಿ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕಾರ ಮಾಡಿದರು. ಕಾರ್ಯಕ್ರಮದಲ್ಲಿ ಸಾಹಿತಿ ಕವಿತಾಕೃಷ್ಣ,ಇನ್ನರ್ವ್ಹೀಲ್ ಅಧ್ಯಕ್ಷೆ ತೇಜಾವತಿ ನರೇಂದ್ರ, ನಾಗರತ್ನರಾವ್ ಮುಂತಾದವರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.