ತುಮಕೂರಿನಲ್ಲಿ ಅಟ್ಟಹಾಸ ಮೆರೆಯುತ್ತಿರುವ ಸರಗಳ್ಳರು
ಕ.ಪ್ರ. ವಾರ್ತೆ ತುಮಕೂರು ಜು.19
ತುಮಕೂರಿನಲ್ಲಿ ಅಟ್ಟಹಾಸ ಮೆರೆಯುತ್ತಿರುವ ಸರಗಳ್ಳರು ತಮ್ಮ ಕೃತ್ಯವನ್ನ ಮುಂದುವರೆಸಿದ್ದಾರೆ.
ಕಳೆದ ಜನವರಿಯಿಂದ ಈವರೆಗೂ ಸುಮಾರು 20 ಕ್ಕೂ ಚೈನ್ ಸ್ನ್ಯಾಚಿಂಗ್ ಪ್ರಕರಣಗಳು ತುಮಕೂರು ನಗರದಲ್ಲಿ ನಡೆದಿವೆ. ಹೀಗಾಗಿ ಸರಗಳ್ಳರನ್ನ ಹಿಡಿಯಲು ಪೊಲೀಸರಿಗೆ ತಲೆನೋವಾಗಿದ್ದು ಎಲ್ಲಡೆ ಪೊಲೀಸರ ಕಾರ್ಯಾಚರಣೆ ತೀವ್ರಗೊಂಡಿದೆ. ಬೆಂಗಳೂರಿನ ಭವಿಷ್ಯದ ಉಪನಗರಿ ತುಮಕೂರಿನಲ್ಲಿ ಮತ್ತೆ ಸರಗಳ್ಳರ ಹಾವಳಿ ಮತ್ತಷ್ಟು ದೊಡ್ಡ ಮಟ್ಟದಲ್ಲಿ ಮುಂದುವರೆದಿದೆ. ಮಹಿಳೆಯರು ಆತಂಕದಲ್ಲಿ ವಾಕಿಂಗ್ ಮತ್ತು ಮಾರ್ಕೆಟ್ಗೆ ಹೋಗುವ ಪರಿಸ್ಥಿತಿ ಎದುರಾಗಿದೆ. ಏಕೆಂದರೆ ನಗರದ ಎನ್ಈಪಿಎಸ್, ಕ್ಯಾತ್ಸಂದ್ರ, ತಿಲಕ್ಪಾರ್ಕ್ ಮತ್ತು ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದ ಒಂದು ತಿಂಗಳಿಂದ ಹತ್ತಕ್ಕೂ ಹೆಚ್ಚು ಮಹಿಳೆಯರ ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳನ್ನ ಕಸಿದುಕೊಂಡು ಪರಾರಿಯಾಗಿದ್ದಾರೆ. ಇಲ್ಲಿನ ಜನನಿ ಬಿಡ ಪ್ರದೇಶಗಳಾದ ಜಯನಗರ, ಗೋಕುಲ ಬಡಾವಣೆ, ರಿಂಗ್ರಸ್ತೆಯಲ್ಲಿ ವಾಕ್ ಮಾಡುವ ಮತ್ತು ಮಾರ್ಕೆಟ್ಗೆ ಹೋಗುವ ಒಂಟಿ ಮಹಿಳೆಯರನ್ನ ಯಾಮಾರಿಸಿ ಮತ್ತು ಹಲ್ಲೆ ನಡೆಸಿ ಮಾಂಗಲ್ಯ ಸರಗಳು ಮತ್ತು ಚಿನ್ನಾಭರಣಗಳನ್ನ ದೋಚಿಕೊಂಡು ಪರಾರಿಯಾಗುತ್ತಿದ್ದಾರೆ. ಬುಧವಾರ ಬೆಳಿಗ್ಗೆ ನಗರದ ಹನುಮಂತಪುರ ಬಡಾವಣೆಯಲ್ಲಿ ಮನೆಗೆ ನಡೆದುಕೊಂಡು ಹೋಗುತ್ತಿದ್ದ ಮಂಜುಳ ಎಂಬ ಮಹಿಳೆಯ ಮಾಂಗಲ್ಯ ಸರವನ್ನ ಕಸಿದುಕೊಂಡು ಹೋಗಿದ್ದಾರೆ. ಕಳೆದ ಒಂದೂವರೆ ತಿಂಗಳಿಂದ ನಿರಂತರವಾಗಿ ನಡೆಯುತ್ತಿರುವ ಸರಗಳ್ಳರ ಹಾವಳಿಯಿಂದ ಜನತೆ ಭಯಭೀತಾರಾಗಿ ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ. ಈ ಬಗ್ಗೆ ಜಿಲ್ಲಾ ಪೊಲೀಸ್ ಇಲಾಖೆ ಎಚ್ಚೆತ್ತುಕೊಳ್ಳಬೇಕು. ನಿರಂತರವಾಗಿ ನಡೆಯುತ್ತಿರುವ ಸರಗಳ್ಳತನಕ್ಕೆ ಕಡಿವಾಣ ಹಾಕಿ ಮಹಿಳೆಯರು ನಿರ್ಭಿತವಾಗಿ ಸಂಚರಿಸಲು ಅನುವುಮಾಡಿಕೊಡಬೇಕೆಂದು ಸ್ಥಳಿಯರು ಆಗ್ರಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

