ಪಟ್ಟನಾಯಕನಹಳ್ಳಿ ಅವಧೂತ ಪರಂಪರೆಯ ಪೀಠ ಉಳಿಯಲಿ
ಕ.ಪ್ರ. ವಾರ್ತೆ ತುಮಕೂರು ಜು.19
ಶಿರಾ ತಾಲೂಕಿನ ಪಟ್ಟನಾಯಕನಹಳ್ಳಿಯ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಠದ ನಂಜಾವಧೂತ ಸ್ವಾಮಿಗಳ ವಿರುದ್ಧ ಅಹಿಂದ ಸಂಘಟನೆ ಹೆಸರಿನಲ್ಲಿ ಒಂದು ಜಾತಿಯವರು ಪ್ರತಿಭಟನಾ ಕಾಲ್ನಾಡಿಗೆ ಜಾಥ ಮಾಡುತ್ತಿರುವುದು ಜಾತಿ ಜಾತಿಗಳ ಮಧ್ಯೆ ವಿಷ ಬೀಜಬಿತ್ತುವ ಹುನ್ನಾರವಾಗಿದೆ ಎಂದು ಪ್ರಗತಿಪರ ಹೋರಾಟಗಾರ ಚೇಳೂರು ವೆಂಕಟೇಶ್ ಅಭಿಪ್ರಾಯಪಟ್ಟಿದ್ದಾರೆ.
ಯಾವುದೇ ಸ್ವಾಮೀಜಿಗಳನ್ನು ಪೂರ್ವಾಶ್ರಮದ ಹೆಸರಿನಲ್ಲಿ ಘೋಷಣೆ ಕೂಗುತ್ತಾ, ಕಳ್ಳ, ಸುಳ್ಳ ಇತ್ಯಾದಿ ಕೆಟ್ಟ ಪದಗಳ ಬಳಕೆ ಸರಿಯಾದ ಹೋರಾಟದ ಕ್ರಮವಲ್ಲ ಎಂದು ತಿಳಿಸಿದ್ದಾರೆ.
ಯಾವುದೇ ಜಾತಿಯ ವ್ಯಕ್ತಿಗಳು ಪೀಠಾಧ್ಯಕ್ಷರಾಗಬಹುದು. ಇದು ಅಲ್ಲಿನ ಮಠದ ಬೈಲಾದಲ್ಲಿದೆ. ಇತ್ತೀಚಿನ ದಿನಗಳಲ್ಲಿ ಕುರುಬ ಜನಾಂಗದ ಕೆಲವು ಮುಖಂಡರು, ಶ್ರೀಮಠವು ಕುರುಬ ಸಮಾಜಕ್ಕೆ ಸೇರಿದ ಮಠವೆಂದು ಜಮೀನಿನ ವಿವಾದದ ಹೆಸರಿನಲ್ಲಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಹಾಲಿ ಪೀಠಾಧ್ಯಕ್ಷ ನಂಜಾವದೂತ ಸ್ವಾಮೀಜಿಗಳು ಇದು ಒಕ್ಕಲಿಗರ ಮಠವೆಂಬಂತೆ ಕೆಲ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ಹಾಗಾಗಿ ಇದು ಕುರುಬ ಜನಾಂಗ, ಒಕ್ಕಲಿಗ ಜನಾಂಗದ ಜಾತಿ ಆಧಾರಿತ ಪ್ರಕರಣವೆಂಬಂತೆ ಬಿಂಬಿತವಾಗಿದೆ. ಇದರಿಂದ ಅವಧೂತ ಮಠದ ಸಾಂಸ್ಕೃತಿಕ ಹಿನ್ನೆಲೆಗೆ ಧಕ್ಕೆಯಾಗಿದೆ.
ಪ್ರಸ್ತುತ ನಂಜಾವಧೂತ ಸ್ವಾಮೀಜಿಗಳು ಪೀಠಾಧ್ಯಕ್ಷರಾದ ಮೇಲೆ ಶ್ರೀ ಮಠವು ಬಹಳ ಅಭಿವೃದ್ಧಿಯಾಗಿರುವುದಂತೂ ನಿಜ. ಅಲ್ಲಿನ ಕಟ್ಟಡಗಳು, ಶಾಲಾ ಕಾಲೇಜುಗಳು ಪ್ರಗತಿಯತ್ತ ಹೆಜ್ಜೆ ಇಟ್ಟಿವೆ. ಶ್ರೀ ಮಠದ ದೊಡ್ಡ ದೊಡ್ಡ ಕಾರ್ಯಕ್ರಮಗಳಲ್ಲಿ ರಾಜ್ಯದ ವಿವಿಧ ಜಾತಿಗೆ ಸೇರಿದ ಸಾಧಕರಾದ ಪ್ರೊ.ಬಿ. ಕೃಷ್ಣಪ್ಪ, ಡಾ. ನಟರಾಜ್ ಹುಳಿಯಾರ್, ಕೋಡಿಹಳ್ಳಿ ಚಂದ್ರಶೇಖರ್ ಸೇರಿದಂತೆ ಅನೇಕರಿಗೆ ಸ್ಪಟಿಕ ಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ.
ಶ್ರೀಮಠದ ಸವಾಂರ್ಗೀಣ ಅಭಿವೃದ್ಧಿ ಒತ್ತು ಕೊಡುತ್ತಿರುವ ಹಾಲಿ ಪೀಠಾಧ್ಯಕ್ಷರಿಗೆ ಪ್ರೋತ್ಸಾಹ ನೀಡಬೇಕಾದ ಕುರುಬ ಸಮಾಜದ ಕೆಲ ಮುಖಂಡರು ಕಳೆದ 3-4 ವರ್ಷಗಳಿಂದ ಅಭಿವೃದ್ಧಿಗೆ ಅಡ್ಡಿಪಡಿಸುತ್ತಾ ರಾಜ್ಯದ ಅಭಿವೃದ್ಧಿ ಹೊಂದುತ್ತಿರುವ ಮಠಗಳಲ್ಲಿ ಪ್ರಥಮ ಸ್ಥಾನದಲಿದ್ದ ಅವಧೂತ ಮಠವನ್ನು ವಿನಾಕಾರಣ ಇಕ್ಕಟ್ಟಿಗೆ ಸಿಲುಕಿಸುತ್ತಿರುವುದು ಸರಿಯಲ್ಲ ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

