ಗುಬ್ಬಿ ವೀರಣ್ಣರಿಂದ ರಂಗಭೂಮಿ ಶ್ರೀಮಂತ
ಕ.ಪ್ರ. ವಾರ್ತೆ ತುಮಕೂರು ಜು.20
ಕಲೆ, ಸಂಸ್ಕೃತಿ, ನಾಟಕ, ಭಜನೆ, ಹರಿಕಥೆ ಇವೆಲ್ಲವೂ ಎಂದೂ ಮರೆಯಲಾಗದ ಕಲಾಪ್ರಕಾರಗಳು. ಅದರಲ್ಲೂ ನಾಟಕ ಕಲೆ ಜೀವಂತ ಕಲೆ ಅದು ನಮ್ಮೂರಿನಲ್ಲಿ ಗುಬ್ಬಿ ವೀರಣ್ಣನಂತಹ ಮಹಾನ್ ನಾಟಕಕಾರರಿಂದ ಶ್ರೀಮಂತವಾಗಿದೆ. ಅದನ್ನು ಗೌರವಿಸುವುದನ್ನು ನೋಡುಗರು ಮೊದಲು ಕಲಿಯಬೇಕು ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಸೋ.ಮು. ಭಾಸ್ಕರಾಚಾರ್ ಅಭಿಪ್ರಾಯಪಟ್ಟರು.
ಸಮೀಪದ ಮಲ್ಲಸಂದ್ರದ ಕೀರ್ತನ ರಂಗಸಂಪದ ಸಂಸ್ಥೆ ಡಾ. ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಮೂರು ದಿವಸಗಳ ನಾಟಕೋತ್ಸವ ಸಮಾರಂಭದಲ್ಲಿ ಸಮಾರೋಪ ಭಾಷಣ ಮಾಡಿದರು. ಸಮಾಜದಲ್ಲಿ ಏನಾದರು ಬದಲಾವಣೆಯಾಗಬೇಕಾದರೆ ಅದು ನಾಟಕಗಳಂತಹ ಕಲಾಮಾಧ್ಯಮಗಳಿಂದ ಮಾತ್ರ ಸಾಧ್ಯ. ಆದ್ದರಿಂದ ನಾಟಕಗಳು ಸಾಮಾಜಿಕ ಬದಲಾವಣೆಯ ಕೈಗನ್ನಡಿ ಎಂದರು.
ಜಿಲ್ಲಾ ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ ಸಿ.ವಿ. ಮಹದೇವಯ್ಯ ಮಾತನಾಡಿ, ರಂಗಕಲೆ ಉಳಿಯಲು ಮತ್ತು ಬೆಳೆಯಲು ಸರ್ಕಾರ ಹೆಚ್ಚಿನ ಪ್ರೋತ್ಸಾಹ ನೀಡುವುದರ ಜೊತೆಗೆ ಅಶಕ್ತ ಕಲಾವಿದರಿಗೆ ಧನಸಹಾಯದ ನೀಡಬೇಕೆಂದರು.
ಜಿ.ಎಸ್. ಸೋಮಶೇಖರ್ ಮಾತನಾಡಿದರು. ಜ್ಞಾನಬುತ್ತಿ ಸತ್ಸಂಗ ಕೇಂದ್ರದ ಅಧ್ಯಕ್ಷ ಸೋಮೇಶ್ವರ ಗುಪ್ತ, ಎಸ್.ಎಂ. ನಾಗರಾಜಾಚಾರ್ ಮತ್ತು ಹೆಬ್ಬೂರಿನ ಸಮಾಜ ಸೇವಕ ಎಚ್.ವಿ. ಪಾಂಡುರಂಗಶೆಟ್ಟಿ ಅವರಿಗೂ ಇದೇ ಸಂದರ್ಭದಲ್ಲಿ ರಂಗ ಗೌರವ ನೀಡಿ ಸನ್ಮಾನಿಸಲಾಯಿತು. ಕಲಾವಿದರಾದ ಮೆಡಿಕಲ್ ಭೀಮಣ್ಣ ಪ್ರಾರ್ಥಿಸಿ, ನಾಗಾರ್ಜುನ ಕಲಾ ಸಂಘದ ಅಧ್ಯಕ್ಷ ಕೆ.ಸಿ. ನರಸಿಂಹಮೂರ್ತಿ ಸ್ವಾಗತಿಸಿದರೆ, ಮಾರುತಿ ಗೆಳೆಯರ ಬಳಗದ ಎಂ.ವಿ. ನಾಗಣ್ಣ ನಿರೂಪಿಸಿದರು. ನಂತರ ಸಂಪೂರ್ಣ ರಾಮಾಯಣ ನಾಟಕ ಯಶಸ್ವಿಯಾಗಿ ಪ್ರದರ್ಶನಗೊಂಡಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

