ತುಮಕೂರು

ಅಕ್ರಮವಾಗಿ ಖಾಸಗಿ ಟ್ಯಾಂಕರ್ಗಳಿಗೆ ನೀರು

Published On :

ಕ.ಪ್ರ.ವಾರ್ತೆ   ಕುಣಿಗಲ್   ಜು.21
ಪಟ್ಟಣದ ನಾಗರಿಕರಿಗೆ ಕುಡಿಯುವ ನೀರು ಪೂರೈಸಲು ಕೋಟ್ಯಂತರ ರು. ವೆಚ್ಚದಲ್ಲಿ ಸ್ಥಾಪಿಸಲಾಗಿರುವ, ಸಂತೇಮೈದಾನದ ಪುರಸಭೆ ಪಂಪ್ ಹೌಸ್ನಿಂದ, ಅಕ್ರಮವಾಗಿ ಖಾಸಗಿ ಟ್ಯಾಂಕರ್ಗಳಿಗೆ ನೀರು ಪೂರೈಸುವ ಜಾಲ ವ್ಯವಸ್ಥಿತವಾಗಿ ನಡೆಯುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ಕೂಡಲೆ ಅಗತ್ಯ ಕ್ರಮ ಕೈಗೊಂಡು ಅಕ್ರಮಗಳಿಗೆ ಕಡಿವಾಣ ಹಾಕುವಂತೆ ನಾಗರಿಕರು ಆಗ್ರಹಿಸಿದ್ದಾರೆ
ಪಟ್ಟಣದ ನಾಗರಿಕರಿಗೆ ಕುಡಿಯುವ ನೀರು ಪೂರೈಸಲು 7 ಕೋಟಿ ರು.ವೆಚ್ಚದಲ್ಲಿ, ದೊಡ್ಡಕೆರೆಯಲ್ಲಿ ಸಂಗ್ರಹವಾಗುವ ನೀರನ್ನು ಮೇಲೆತ್ತಿ ಸಂತೇಮೈದಾನದ ಸಮೀಪದ ನೀರು ಶುದ್ಧೀಕರಣ ಕಾರ್ಯಾಗಾರದ ಪಂಪ್ಹೌಸ್ನಲ್ಲಿ ಶುದ್ಧೀಕರಿಸಿ, ನಾಗರಿಕರಿಗೆ ವಿತರಿಸುವ ಯೋಜನೆ ಚಾಲನೆಗೊಂಡು ಮೂರು ವರ್ಷ ಕಳೆಯುತ್ತಾ ಬಂದರೂ, ಇಂದಿಗೂ ಪಟ್ಟಣದ ಬಹುತೇಕ ವಾರ್ಡ್ಗಳಲ್ಲಿ 5 ರಿಂದ 15 ದಿನಕ್ಕೊಮ್ಮೆ ಕುಡಿಯುವ ನೀರು ಪೂರೈಸಲಾಗುತ್ತಿದೆ. ಕುಣಿಗಲ್ ಪುರಸಭೆ ವ್ಯಾಪ್ತಿಯಲ್ಲಿ ಸಾಕಷ್ಟು ಜಲಸಂಗ್ರಹವಿದ್ದರೂ, ಸಮರ್ಪಕ ಪೂರೈಕೆ ಮಾಡವಲ್ಲಿ ಸಂಬಂಧಪಟ್ಟ ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ಜನತೆ ಪರದಾಡುವಂತಾಗಿದೆ.
ಈ ಮಧ್ಯೆ ಸಂತೇಮೈದಾನದಲ್ಲಿರುವ ಪುರಸಭೆಯ ಪಂಪ್ ಹೌಸ್ನಿಂದ, ಶುದ್ಧೀಕರಿಸಿದ ಕುಡಿಯುವ ನೀರನ್ನು ಯಾವುದೇ ಅನುಮತಿ ಇಲ್ಲದೆ, ಪಂಪ್ಹೌಸ್ನಲ್ಲಿ ಕಾರ್ಯನಿರ್ವಹಿಸುವ ಮತ್ತು ಮೇಲುಸ್ತುವಾರಿ ನೋಡಿಕೊಳ್ಳುವವರು, ಖಾಸಗಿ ವ್ಯಕ್ತಿಗಳೊಂದಿಗೆ ಶಾಮೀಲಾಗಿ, ಖಾಸಗಿ ಟ್ರ್ಯಾಕ್ಟರ್, ಲಾರಿ ಟ್ಯಾಂಕರ್ಗಳಿಗೆ ಹಾಡುಹಗಲೇ ತುಂಬಿ ಕಳಿಸುತ್ತಿದ್ದು, ಈ ಜಾಲ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿದೆ. ದಿನವೊಂದಕ್ಕೆ ಹತ್ತರಿಂದ ಹದಿನೈದು ಲೋಡ್ ನೀರನ್ನು ಅಕ್ರಮವಾಗಿ ಕಳಿಸಲಾಗುತ್ತಿದೆ.
600-750 ರು.: ಸಾಗಾಣೆದಾರರು, ಸಿಬ್ಬಂದಿಗೆ ತಿಂಗಳ ಮಾಮೂಲು ಮಾಡಿಕೊಂಡು, ಜನತೆಗೆ ಪೂರೈಸಬೇಕಾದ ಕುಡಿಯುವ ನೀರನ್ನು ಮನೆಗಳಿಗೆ, ಕಟ್ಟಡ ಕಾಮಗಾರಿ ನಡೆಯುವ ಸ್ಥಳಕ್ಕೆ 600 ರಿಂದ 750 ರು.ವರೆಗೂ ಪೂರೈಸುತ್ತಾರೆಂದು ಜೆಡಿಎಸ್ ಯುವ ಮುಖಂಡ ಗುರುಪ್ರಸಾದ್ ಆರೋಪಿಸಿದ್ದರೆ.  ಸಂತೇಮೈದಾನದಲ್ಲಿನ ಪಂಪ್ಹೌಸ್ನಿಂದ ಖಾಸಗಿ ಟ್ಯಾಂಕ್ರ್ಗಳು ನೀರು ತುಂಬಿಕೊಂಡು ಹೋಗುತ್ತಿರುವ ಬಗ್ಗೆ ಸಂಬಂಧಪಟ್ಟ ಮುಖ್ಯಾಧಿಕಾರಿಗಳಿಗೆ ಕರೆಮಾಡಿದರೆ ಅವರು, ಕರೆ ಸ್ವೀಕರಿಸುವುದ್ದಿಲ್ಲ. ಇನ್ನು ಸಂಬಂಧಪಟ್ಟ ಅಭಿಯಂತರರಿಗೆ ಕರೆ ಮಾಡಿದರೆ ಬೇಜವಾಬ್ದಾರಿ ಉತ್ತರ ನೀಡುತ್ತಾರೆಂದು ರಮೇಶ್ ಎಂಬುವವರು ದೂರಿದ್ದಾರೆ.
ಕೋಟೆ ಪ್ರದೇಶದ ಮಹಿಳೆಯರಾದ ವಿಜಿಯಮ್ಮ, ಲಕ್ಷ್ಮಮ್ಮ, ಸಂತೇಮೈದಾನದ ಪಂಪ್ಹೌಸ್ ಹತ್ತಿರ ಇದ್ದರೂ, ನಮಗೆ ವಾರಕ್ಕೊಮ್ಮೆ ಕುಡಿಯಲು ನೀರು ಬಿಡುತ್ತಾರೆ. ವಿಧಿ ಇಲ್ಲದೆ ಪಂಪ್ಹೌಸ್ ಬಳಿ ಬಂದು ನೀರು ತೆಗೆದುಕೊಂಡು ಹೋಗಬೇಕಿದೆ. ಖಾಸಗಿ ಟ್ಯಾಂಕರ್ಗಳಲ್ಲಿ ಲೋಡ್ಗಟ್ಟಲೆ ನೀರು ಹೋಗುವುದನ್ನು ಪ್ರಶ್ನಿಸಿದರೆ, ಸಿಬ್ಬಂದಿಗಳು ಬೇಜವಾಬ್ದಾರಿ ಉತ್ತರ ನೀಡುತ್ತಾರೆಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪುರಸಭೆ ಸಂತೇಮೈದಾನದ ಪಂಪ್ಹೌಸ್ನಲ್ಲಿ ಪಟ್ಟಣದ ನಾಗರಿಕರಿಗೆ ಪೂರೈಸಬೇಕಾದ ಕುಡಿಯುವ ನೀರನ್ನು, ಖಾಸಗಿ ಟ್ಯಾಂಕರ್ಗಳ ಮೂಲಕ ಖಾಸಗಿಯವರಿಗೆ ಪೂರೈಕೆ ಮಾಡುವ ಜಾಲ ವ್ಯವಸ್ಥಿತವಾಗಿ ನಡೆಯುತ್ತಿದ್ದು, ಸ್ಥಳೀಯ ಅಧಿಕಾರಿ ಹಾಗೂ ಸಿಬ್ಬಂದಿಗಳು ಶಾಮೀಲಾಗಿ ಈ ಅಕ್ರಮ ನಡೆಸುತ್ತಿರುವ ಬಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳು ಕೂಡಲೆ  ತಪ್ಪಿತಸ್ಥ ಸಿಬ್ಬಂದಿಗಳ ಮೇಲೆಕ್ರಮ ಕೈಗೊಂಡು, ಪಟ್ಟಣದ ನಾಗರಿಕರಿಗೆ ಸಮರ್ಪಕ ಕುಡಿಯುವ ನೀರು ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಗುರುಪ್ರಸಾದ್, ರಮೇಶ್, ಸೇರಿದಂತೆ ಇತರರು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.