ಹೇಳೋದು 30, ಕೊಡೋದು 28.5 ಕೆಜಿ ಅಕ್ಕಿ!
ಕನ್ನಡಪ್ರಭ ವಾರ್ತೆ , ತುರುವೇಕೆರೆ , ಜು.23
ಸರ್ಕಾರ ಬಡ ಜನರಿಗಾಗಿ ಪ್ರತಿ ತಿಂಗಳು ಪಡಿತರ ನೀಡುವ ಸಂಕಲ್ಪ ಮಾಡಿದೆ. ಇತ್ತೀಚೆಗೆ ಪ್ರತಿಯೊಬ್ಬರಿಗೆ 10 ಕೆಜಿ ಅಕ್ಕಿ. ಇಬ್ಬರಿಗೆ 20 ಹಾಗೂ ಮೂವರಿಗಿಂತ ಹೆಚ್ಚಿರುವವರಿಗೆ 30 ಕೆಜಿ ಅಕ್ಕಿ ನಿಗದಿ ಮಾಡಿದೆ. ಆದರೆ, ಇಲ್ಲಿಗೆ ಸಮೀಪದ ಮಲ್ಲಾಘಟ್ಟದ ಪಡಿತರ ವಿತರಣಾ ಕೇಂದ್ರದಲ್ಲಿ ಕಾರ್ಯದರ್ಶಿ ಅಕ್ಕಿ ವಿತರಣೆಯಲ್ಲಿ ಲೋಪ ಮಾಡುತ್ತಿರುವ ಘಟನೆ ನಡೆದಿದೆ. ಇಲ್ಲಿ ಪ್ರತಿ ತೂಕಕ್ಕೆ 1 ರಿಂದ 1.50 ಕೆಜಿಯಷ್ಟು ಕಡಿಮೆ ತೂಕ ನೀಡಲಾಗುತ್ತಿದೆ ಎಂದು ದೂರಿ ಕೆಲ ಕಾಲ ಗ್ರಾಹಕರು ಪ್ರತಿಭಟನೆ ಮಾಡಿದರು.
ಕೆಜಿ ಅಕ್ಕಿಗೆ 1ನಂತೆ 30 ಕೆಜಿಗೆ 30 ಪಡೆಯಲಾಗುತ್ತದೆ. ಆದರೆ, ಅಕ್ಕಿ ಕೊಡುವ ವೇಳೆ 28.50 ಕೆಜಿ ಅಕ್ಕಿ ಮಾತ್ರ ಕೊಟ್ಟು ಮೂವತ್ತು ರುಪಾಯಿ ಪಡೆಯಲಾಗುತ್ತದೆ ಎಂದು ಗ್ರಾಹಕರು ಪಡಿತರ ವಿತರಣಾ ಅಂಗಡಿ ಮುಂದೆ ತಗಾದೆ ತೆಗೆದರು.
ತಮಗೆ ನೀಡುವ ಅಕ್ಕಿಯಲ್ಲೇ ತೂಕ ಕಡಿಮೆ ಇರುತ್ತದೆ. ಚೀಲದ ತೂಕ ಹಾಗೂ ಸಾರಿಗೆ ವೆಚ್ಚಕ್ಕಾಗಿ 1 ರಿಂದ 1.50 ಕೆಜಿ ಅಕ್ಕಿ ಹಿಡಿದು ಕೊಡಲಾಗುವುದು ಎಂದು ಕಾರ್ಯದರ್ಶಿ ಶೇಖರ್ ಹೇಳುತ್ತಾರೆ ಎಂದು ಸಾರ್ವಜನಿಕರು ದೂರಿದರು.
ಪರಿಸ್ಥಿತಿ ಬಿಗಡಾಯಿಸುತ್ತಿದ್ದಂತೆ ಗ್ರಾಹಕರಿಗೆ ನೀಡಬೇಕಾದ ಪಡಿತರವನ್ನು ಸರಿಯಾದ ತೂಕದಲ್ಲಿ ನೀಡಲು ಕಾರ್ಯದರ್ಶಿ ಮುಂದಾದರು. ಆ ವೇಳೆಗೆ ಸ್ಥಳಕ್ಕೆ ಆಗಮಿಸಿದ ಆಹಾರ ನಿರೀಕ್ಷಕ ಶಿವಶಂಕರ್, ಕಾರ್ಯದರ್ಶಿ ಶೇಖರ್ ರಿಗೆ ತರಾಟೆಗೆ ತೆಗೆದುಕೊಂಡರು. ಸಾರ್ವಜನಿಕರು ಸದರಿ ಕಾರ್ಯದರ್ಶಿ ಅಂಗಡಿಯನ್ನು ಸಕಾಲಕ್ಕೆ ತೆಗೆಯುವುದಿಲ್ಲ, ಕೇವಲ 3 ದಿನ ಮಾತ್ರ ಬಾಗಿಲು ತೆಗೆಯುತ್ತಾರೆ, ನಂತರ ಬಂದವರಿಗೆ ಆಹಾರ ಪದಾರ್ಥವಿಲ್ಲ ಎಂದು ಹೇಳುತ್ತಾರೆ. ಸೀಮೆಎಣ್ಣೆ ವಿತರಣೆಯಲ್ಲೂ ಜನರಿಗೆ ಮೋಸ ಮಾಡಲಾಗುತ್ತದೆ. 3 ಲೀಟರ್ ಬದಲು 2 ಲೀಟರ್ ನೀಡಲಾಗುತ್ತಿದೆ. ಈಗ 5 ಲೀಟರ್ ಕೊಡಬೇಕು. ಆದರೆ, ಕೇವಲ 3 ಲೀಟರ್ ಮಾತ್ರ ಸೀಮೆಎಣ್ಣೆ ನೀಡಲಾಗುತ್ತಿದೆ ದೂರು ನೀಡಿದರು.
ಸಾರ್ವಜನಿಕರ ದೂರು ಆಲಿಸಿದ ಆಹಾರ ನಿರೀಕ್ಷಕ ಶಿವಶಂಕರ್, ಪಡಿತರ ವಿತರಣೆಯನ್ನು ಕಾನೂನಿನನ್ವಯ ವಿತರಣೆ ಮಾಡಬೇಕು. ಕೇವಲ 3 ದಿನ ಮಾತ್ರ ಬಾಗಿಲು ತೆಗೆದು ಗೊಂದಲ ಉಂಟು ಮಾಡಿದರೆ ಕ್ರಮ ಜರುಗಿಸುವ ಎಚ್ಚರಿಕೆ ನೀಡಿದರು. ಸ್ಥಳಕ್ಕೆ ಆನೇಕೆರೆ ಗ್ರಾಮ ಪಂಚಾಯಿತಿ ಸದಸ್ಯ ಶ್ರೀನಿವಾಸ್ ಗೌಡ ಆಗಮಿಸಿದ್ದರು. ಸರ್ಕಾರ ನೀಡಿದ ಅಕ್ಕಿಯನ್ನು ಸೂಕ್ತವಾಗಿ ವಿತರಣೆ ಮಾಡದಿರುವ ಬಗ್ಗೆ ಸೂಕ್ತ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಸಿದರು.
ಒಕ್ಕಲಿಗ ವಿರೋಧಿ ಧೋರಣೆ: ಆರೋಪ
ಅಭದ್ರಗೊಳಿಸುವ ಯತ್ನ
ಒಕ್ಕಲಿಗರು ಕಲಿಗಳ ಹಿಂಡೇ ಹೊರತು, ಕುರಿಗಳ ಹಿಂಡಲ್ಲ. 100 ಜನ ಸಿದ್ದರಾಮಯ್ಯ ಬಂದರೂ ಏನೂ ಮಾಡಲು ಸಾಧ್ಯವಿಲ್ಲ. ಬಾಲ ಗಂಗಾಧರ ಶ್ರೀಗಳು ನಿಧನರಾಗಿ 6 ತಿಂಗಳೂ ಕಳೆದಿಲ್ಲ. ಆಗಲೇ ಒಕ್ಕಲಿಗ ಸಮಾಜ ಅಭದ್ರಗೊಳಿಸಲು ಹೊರಟಿದ್ದಾರೆ. ಊರಿಗೊಂದು ಶಾಲೆಯಿದ್ದಂತೆ ಕನಿಷ್ಠ ತಾಲೂಕಿಗೊಂದು ಒಕ್ಕಲಿಗ ಮಠವಾದರೂ ಬೇಕೇ ಬೇಕು. ಧರ್ಮದ ನೆಲೆಗಟ್ಟಿನ ಮೇಲೆ ಒಂದಾಗದಿದ್ದರೆ ಒಕ್ಕಲಿಗ ಸಮಾಜಕ್ಕೆ ಉಳಿಗಾಲವಿಲ್ಲ.
- ಕುಣಿಗಲ್ನ ಸಿದ್ದರಾಮ ಚೈತನ್ಯ ಸ್ವಾಮಿಗಳು
ಮುತ್ತಿಗೆ: ಎಚ್ಚರಿಕೆ
ಧರ್ಮಗುರುಗಳು, ಮಠಾಧೀಶರು ಪ್ರತಿಭಟನೆ ಮಾಡುವಂತಿಲ್ಲ. ಆದರೂ ಪ್ರತಿಭಟನೆ ಮಾಡುವ ವಾತಾವರಣ ನಿರ್ಮಾಣ ಮಾಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಒಕ್ಕಲಿಗ ವಿರೋಧಿ ಧೋರಣೆ ನೋಡಿ ಬೇಸತ್ತು ಅನಿವಾರ್ಯವಾಗಿ ಪ್ರತಿಭಟನೆ ಮಾಡುವ ಹಾಗಾಗಿದೆ. ಧರ್ಮಪೀಠಗಳನ್ನು ಅಧರ್ಮ ಪೀಠಗಳನ್ನಾಗಿ ಮಾಡಲು ಸಿದ್ದರಾಮಯ್ಯ ಹೊರಟಿದ್ದಾರೆ. ಸರ್ಕಾರ ರಚನೆಯಾಗಿ ಇನ್ನೂ 6 ತಿಂಗಳು ಕಳೆದಿಲ್ಲ. ಆಗಲೆ ಒಕ್ಕಲಿಗ ವಿರೋಧಿ ಧೋರಣೆ ಗೋಚರಿಸಿದೆ. ಹೀಗೆ ಮುಂದುವರೆದಲ್ಲಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು.
- ಹನುಮಂತನಾಥ ಸ್ವಾಮಿಗಳು
ಸಿಎಂ ಹುದ್ದೆಗೆ ಅರ್ಹರಲ್ಲ
ಮುಖ್ಯಮಂತ್ರಿ ಸಿದ್ದರಾಮಯ್ಯ ಜಾತಿವಾದಿ, ದುರಂಹಕಾರಿ, ದೌರ್ಜನ್ಯ ಎಸಗುವ ವ್ಯಕ್ತಿ. ಮುಖ್ಯಮಂತ್ರಿ ಸ್ಥಾನ ಅಲಂಕರಿಸಲು ಅರ್ಹರಲ್ಲ. ಮಾಜಿ ಪ್ರಧಾನಿ ದೇವೇಗೌಡರ ಫೋಟೋ ತೆಗೆಸಿರುವುದು ಖಂಡನೀಯ.
- ಬಿ. ಸತ್ಯನಾರಾಯಣ, ಮಾಜಿ ಸಚಿವ
ಇತರ ಸಂಸ್ಥೆಗಳ ಮೇಲೆ ನಡೆಸಲಿ
ಒಕ್ಕಲಿಗರು ಕುಂಭಕರ್ಣ ನಿದ್ರೆಯಲ್ಲಿದ್ದಾರೆ. ಸೂಜಿಯಿಂದ ಚುಚ್ಚದ ಹೊರತು ಅವರು ಎಚ್ಚೆತ್ತುಕೊಳ್ಳಲ್ಲ. ಐಟಿ ದಾಳಿ ಸ್ವಾಗತಿಸೋಣ. ಆದರೆ, ಆದಿಚುಂಚನಗಿರಿ ಸಂಸ್ಥೆಯ ಮೇಲೆ ದಾಳಿ ನಡೆಸಿದ ಹಾಗೆಯೇ ಬೇರೆ ಮಠಗಳ ಶಿಕ್ಷಣ ಸಂಸ್ಥೆಗಳ ಮೇಲೂ ದಾಳಿ ನಡೆಸಲಿ.
- ಎಸ್.ಆರ್. ಶ್ರೀನಿವಾಸ್, ಗುಬ್ಬಿ ಜೆಡಿಎಸ್ ಶಾಸಕ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

