ತುಮಕೂರು

ಒಂಟಿ ಪುಂಡಾನೆ ಸಲಗದಿಂದ ಗಿಡ ಮರ ನಾಶ

Published On :

ಗುಬ್ಬಿ: ಪಟ್ಟಣದಲ್ಲಿ ಒಂಟಿ ಪುಂಡಾನೆ ಸಲಗ ವಿವಿಧೆಡೆ ಗೇಟ್ ಮುರಿದು ಗಿಡ-ಮರಗಳನ್ನು ಹಾಳು ಮಾಡಿ ಹೋಗಿದೆ.
ಶನಿವಾರ ಸಂಜೆ ಮಾಗಡಿ ತಾಲೂಕಿನಿಂದ ರಾಜನ ಕಾವಿಲ್‌ಗುಡ್ಡದಿಂದ ತುಮಕೂರು ಲಕ್ಷ್ಮಣ ಕೆರೆಯಲ್ಲಿ ಬೀಡು ಬಿಟ್ಟದ್ದ ಈ ಒಂಟಿ ಸಲಗ  ಪಟ್ಟಣಕ್ಕೆ ರಾತ್ರಿ ಸುಮಾರು 12.30 ರ ಸಮಯದಲ್ಲಿ ಬಂದು ಎಲ್ಲೆಡೆ ಅಡ್ಡಾಡಿದೆ. ನಂತರ ಪ್ರಥಮ ದರ್ಜೆ ಕಾಲೇಜಿಗೆ ಹೋಗಿ ಅಲ್ಲಿನ ಗೇಟ್ ಮುರಿದು ಒಳನುಗ್ಗಿ ಆವರಣದಲ್ಲಿದ್ದ ಗಿಡ ಹಾಗೂ ಮರಗಳನ್ನು ಕಿತ್ತು ಬಿಸಾಡಿದೆ. ನಂತರ ಪಕ್ಕದಲ್ಲೇ ಇರುವ ಅರಣ್ಯ ಇಲಾಖೆ ಕಚೇರಿಯ ಗೇಟನ್ನೂ ಮುರಿದು ಒಳನುಗ್ಗಿ ಗಿಡಗಳನ್ನು ನಾಶ ಮಾಡಿದೆ. ಈ ಆನೆ ಮಧ್ಯರಾತ್ರಿಯಲ್ಲಿ  ಪಟ್ಟಣದ ಇನ್ನೂ ಕೆಲವೆಡೆ ಗೇಟುಗಳನ್ನು ಮರಿದಿದೆ.  ತಾಲೂಕಿ ಚೇಳೂರು ಹೋಬಳಿಯ ಗಂಗಯ್ಯನ ಪಾಳ್ಯದ ಉಜ್ಜನಪ್ಪ  ಆನೆಯನ್ನು ಕಂಡು ಗಾಬರಿ ಹಾಗೂ ಪ್ರಾಣಭಯದಿಂದ ಓಡಲು ಹೋಗಿ ಹಳ್ಳದಲ್ಲಿ ಉರುಳಿ ತೀವ್ರ ಗಾಯಗೊಂಡಿದ್ದಾನೆ. ಇಷ್ಟೆಲ್ಲ ಅವಾಂತರ ಮಾಡಿದ ನಂತರ ಮಂಚನದೊರೆ ಅರಣ್ಯ ಮಧ್ಯ ಭಾಗದಲ್ಲಿರುವ ಲಕ್ಷ್ಮಣ ಕೆರೆಯಲ್ಲಿ ಆನೆ ಬೀಡು ಬಿಟ್ಟಿದೆ. ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಓಡಿಸಲು ಹರಸಾಹಸಪಟ್ಟರೂ ನೀರಲ್ಲಿ ಆಟವಾಡುತ್ತಿದೆ.

ಜಯರಾಮ್ ರಾಜ್ಯಪರಿಷತ್‌ಗೆ ಅವಿರೋಧ ಆಯ್ಕೆ
ತಿಪಟೂರು: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ತಿಪಟೂರು ಶಾಖೆಯ ರಾಜ್ಯಪರಿಷತ್ ಸದಸ್ಯರಾಗಿ ಶಿಕ್ಷಕರಾದ ಜಿ.ಆರ್. ಜಯರಾಂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.