ತುಮಕೂರು

ಜಾಗತೀಕರಣ ನೀತಿಯಿಂದ ನಿರುದ್ಯೋಗ ಸಮಸ್ಯೆ

Published On :

ಕ.ಪ್ರ.ವಾರ್ತೆ ,  ತುಮಕೂರು ,  ಜು. 30
ಜಾಗತೀಕರಣದ ನೀತಿಗಳಿಂದಾಗಿ ಇಂದು ಯುವಜನರು ನಿರುದ್ಯೋಗದಂತಹ ಸಮಸ್ಯೆಯನ್ನು ಎದುರಿಸಬೇಕಾಗಿದೆ ಎಂದು ಡಿ.ವೈ.ಎಫ್.ಐ ಜಿಲ್ಲಾ ಕಾರ್ಯದರ್ಶಿ ಆದಿಮೂರ್ತಿ ಅಭಿಪ್ರಾಯಪಟ್ಟರು.
ಅವರು ಕೊರಟಗೆರೆ ತಾಲೂಕಿನ ಸಿದ್ದರಬೆಟ್ಟದಲ್ಲಿ ನಡೆದ ಹೋಬಳಿ ಮಟ್ಟದ ಯುವಜನರ ಸಮಾವೇಶದಲ್ಲಿ ಮಾತನಾಡಿದರು.
ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಜಾರಿಗಾಗಿ ಸಮರಧೀರ ಹೋರಾಟವನ್ನು ನಡೆಸಿದ ಡಿವೈಎಫ್‌ಐ ಸಂಘಟನೆಯ ಭಾಗವಾಗಿ ಹಾಗೂ ಎಡಪಕ್ಷಗಳ ಒತ್ತಡದಿಂದ ಯುಪಿಎ-1 ಸರ್ಕಾರ ಜಾರಿಗೆ ತಂದ ಗ್ರಾಮೀಣ ಉದ್ಯೋಗಖಾತ್ರಿ ಯೋಜನೆ ಇಂದು ನಿರುದ್ಯೋಗಿಗಳಿಗೆ ಕೆಲಸ ನೀಡುವ ಬದಲು ರಾಜಕಾರಣಿಗಳ ಹಿಡಿತದಿಂದ ಕೆಲಸಗಳು ನಡೆಯದೇ ಇದ್ದರು ಸಹ ಹಣಗಳನ್ನು ಪಡೆಯುವ ಯೋಜನೆಯಾಗಿದೆ. ಇದರ ವಿರುದ್ಧ ಡಿ.ವೈ.ಎಫ್.ಐ ಹೋರಾಟ ನಡೆಸುತ್ತದೆ ಎಂದರು.
ಖಂಡನೆ: ಡಿ.ವೈ.ಎಫ್.ಐ ಜಿಲ್ಲಾಧ್ಯಕ್ಷ ಎಂ.ಆರ್.ನಾಗರಾಜು  ಮಾತನಾಡಿ  ಮುಖ್ಯಮಂತ್ರಿಗಳು ಈ ಬಾರಿಯ ಬಜೆಟ್‌ನಲ್ಲಿ ಯುವಜನರಿಗೆ  ಯಾವುದೇ ರೀತಿಯ ಯೋಜನೆಗಳನ್ನು ಪ್ರಕಟಿಸದೇ ಇರುವುದನ್ನು ಖಂಡಿಸಿದ ಅವರು ಅತಿಥಿ ಉಪನ್ಯಾಸಕರನ್ನು  ಕಾಯಂ ಮಾಡಿಕೊಳ್ಳುವ ಬದಲು ಗುತ್ತಿಗೆ ಆಧಾರದಲ್ಲಿ ದುಡಿಸಿಕೊಳ್ಳುವ ನೀತಿಯನ್ನು ಕೈಬೀಡಬೇಕು ಎಂದರು.
ಪಾರ್ಲಿಮೆಂಟ್ ಚಲೋ: ಡಿ.ವೈ.ಎಫ್.ಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್. ರಾಘವೇಂದ್ರ ಮಾತನಾಡಿ ಯಾವುದೇ ಜಾತಿ, ಭಾಷೆ, ಧರ್ಮದ ಹೆಸರಿನಲ್ಲಿ ಡಿ.ವೈ.ಎಫ್.ಐ ಸಂಘಟನೆಯು ಕೆಲಸ ಮಾಡುತ್ತಿಲ್ಲ.  ಬದಲಾಗಿ ದೇಶದಲ್ಲಿ ನಡೆಯುವ ಅನ್ಯಾಯ ದಬ್ಬಾಳಿಕೆ, ಶೋಷಣೆಗಳ ವಿರುದ್ಧ ಸಂಘಟಿತ ಹೋರಾಟವನ್ನು ನಡೆಸುತ್ತಾ ದೇಶದ ಅತಿ ದೊಡ್ಡ ಯುವಜನ ಸಂಘಟನೆಯಾಗಿ ಕೆಲಸ  ಮಾಡುತ್ತಿದೆ.  ಆಗಸ್ಟ್ 12 ರಂದು ಭ್ರಷ್ಟಾಚಾರ, ನಿರುದ್ಯೋಗ ಸಮಸ್ಯೆ, ನಗರ ಪ್ರದೇಶಕ್ಕೂ  ಉದ್ಯೋಗ ಖಾತ್ರಿ ಯೋಜನೆಯನ್ನು ಜಾರಿಗೆ ತರುವಂತೆ  ಹಾಗೂ ಎಲ್ಲರಿಗೂ ಪಡಿತರ ಚೀಟಿಯನ್ನು  ನೀಡುವಂತೆ ಆಗ್ರಹಸಿ ಪಾರ್ಲಿಮೆಂಟ್ ಚಲೋ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದರು. ವೇದಿಕೆಯಲ್ಲಿ ಡಿ.ವೈ.ಎಫ್.ಐ ಜಿಲ್ಲಾ ಉಪಾಧ್ಯಕ್ಷೆ ಲಕ್ಷ್ಮೀ, ಸುರೇಂದ್ರನಾಥ್ ಎಂ.ಆರ್. ಮಂಜುನಾಥ್, ತಾಲೂಕು ಅಧ್ಯಕ್ಷ, ರಂಗನಾಥ್, ಪ್ರದೀಪ್, ಸುರೇಶ್ ಉಪಸ್ಥಿತರಿದ್ದರು. ಎಂ.ಜಿ. ಮಂಜುನಾಥ್ ಸ್ವಾಗತಿಸಿ, ರವಿಕುಮಾರ್ ವಂದಿಸಿದರು, ಹನುಂತರಾಜು ನಿರೂಪಿಸಿದರು.
ಪದಾಧಿಕಾರಿಗಳ ಆಯ್ಕೆ: ಕೊರಟಗೆರೆ ತಾಲೂಕು ಸಿದ್ದರಬೆಟ್ಟ, ಸಿ.ಎನ್.ದುರ್ಗ ಹೋಬಳಿ ಮಟ್ಟದ ಪದಾಧಿಕಾರಿಗಳನ್ನು ಸಭೆಯು ಆಯ್ಕೆ  ಮಾಡಿತು.
ಅಧ್ಯಕ್ಷರಾಗಿ ವಿಶ್ವನಾಥ್. ಎಸ್, ಉಪಾಧ್ಯಕ್ಷರಾಗಿ, ರಮೇಶ್. ಎಂ.ಆರ್, ನಾಗೇಂದ್ರ, ಸುರೇಶ್ ಹೊಸಮನಿ, ಕಾರ್ಯದರ್ಶಿಯಾಗಿ ಬಸವರಾಜ್, ಸಹಕಾರ್ಯದರ್ಶಿಗಳಾಗಿ, ಧನಂಜಯ್ಯ,  ಶಿವಣ್ಣ (ಆಟೋ), ಸಂಘಟನಾ ಕಾರ್ಯದರ್ಶಿಯಾಗಿ  ಮಂಜುನಾಥ್, ಎನ್.ಎಂ, ಖಜಾಂಚಿಯಾಗಿ ಗಿರೀಶ್ ಸದಸ್ಯರಾಗಿ ಪ್ರಕಾಶ್, ಸಿದ್ದೇಶ್, ದರ್ಶನ್, ಗಂಗಾಧರಯ್ಯ, ನಾಗಭೂಷಣ್, ಧನಂಜಯ್ಯ. ಎಸ್ ಅವರನ್ನು ಸಭೆ ಆಯ್ಕೆ ಮಾಡಿತು.
ನೂತನ ಹೋಬಳಿಮಟ್ಟದ  ಸಭೆಯಲ್ಲಿ ಸಿದ್ದರಬೆಟ್ಟದಲ್ಲಿ ಯಾತ್ರಾರ್ಥಿಗಳಿಂದ ಗುಹೆತೊರಿಸುವ ನೆಪದಲ್ಲಿ ವಸೂಲಿ ಮಾಡುವ ಮತ್ತು ಮುಜುರಾಯಿ ಇಲಾಖೆ  ನಿಗದಿ ಪಡಿಸಿದ ಹಣಕ್ಕಿಂತ ಹೆಚ್ಚಿನ ಹಣವನ್ನು ಸಾರ್ವಜನಕರಿಂದ ವಸೂಲಿ ಮಾಡುವ ಬಗ್ಗೆ ಹೋರಾಟ ರೂಪಿಸುವುದು ಮತ್ತು ಗ್ರಾಮಪಂಚಾಯ್ತಿಗಳಲ್ಲಿ  ನಡೆಯುತ್ತಿರುವ ಅಕ್ರಮಗಳ ಬಗ್ಗೆ ಹೋರಾಟ ರೂಪಿಸುವ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಸಭೆಯಲ್ಲಿ ಜಿಲ್ಲಾಧ್ಯಕ್ಷರಾದ ಎಂ.ಆರ್. ನಾಗರಾಜು ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ.ಎಸ್, ಜಿಲ್ಲಾ ಕಾರ್ಯದರ್ಶಿ ಆದಿಮೂರ್ತಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.