ತುಮಕೂರು

ಗಮಕ ಅಭ್ಯಾಸದಿಂದ ಸಮಾಜ ಪರಿವರ್ತನೆ ಸಾಧ್ಯ

Published On :

ಕ.ಪ್ರ.ವಾರ್ತೆ ,  ತುಮಕೂರು ,  ಜು. 30
ಗಮಕ ಅಭ್ಯಾಸದಿಂದ ಸಮಾಜದ ಪರಿವರ್ತನೆ ಸಾಧ್ಯ ಎಂದು ಇಮ್ಮಡಿ ಕರಿಬಸವ ದೇಶಿ ಕೇಂದ್ರ ಸ್ವಾಮೀಜಿ ಅಭಿಪ್ರಾಯಪಟ್ಟರು.
ಅವರು ತುಮಕೂರಿನ ಎಸ್‌ಎಸ್ ಪುರಂನಲ್ಲಿ ನಡೆಯುತ್ತಿರುವ 9 ದಿವಸಗಳ ಗಮಕ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗಮಕ ಕಲೆ ಮುಂದಿನ ದಿನಗಳಲ್ಲಿ ಮುಂದಿನ ಯುವಪೀಳಿಗೆಯ ಹೃದಯಗಳಲ್ಲಿ ಕಲಿಕೆಯ ಜ್ಯೋತಿ ಬೆಳಗಬೇಕು ಎಂದರು. ಪ್ರಾಚೀನವಾದ ಕಲೆ ಲವಕುಶರಿಂದ ಆರಂಭವಾಯಿತೆಂದು ಪುರಾಣಗಳಲ್ಲಿ ತಿಳಿಯಬಹುದು. ಮಹಾಕಾವ್ಯಗಳು ದೇಶವನ್ನು, ದೇಶಿಯರನ್ನು ಮಾನಸಿಕವಾಗಿ ಸಂರಕ್ಷಿಸಲ್ಪಡುವುದು ಎಂದರು.
ರಾಮಾಯಣ, ಮಹಾಭಾರತ, ಜೈಮಿನಿ ಭಾರತ, ಪ್ರಭುಲಿಂಗಲೀಲೆ, ಸಿದ್ಧರಾಮ ಚರಿತೆ ಇವೆಲ್ಲವೂ ನೀತಿಯ ದ್ಯೋತಕವಾಗಿದೆ ಎಂದರು. ಇವುಗಳ ಅಧ್ಯಯನಾಭ್ಯಾಸದಿಂದ ಭಾಷಾ ಹಿಡಿತ, ಆದರ್ಶ ಜೀವನದ ಗುಣಗಳು, ಧರ್ಮ ಸಂರಕ್ಷಣೆ ಉಳಿವು ಸಾಧ್ಯವೆಂದರು.
ನವ ಚೈತನ್ಯ: ಈ ದಿಸೆಯಲ್ಲಿ ಗಮಕ ಭಾರತೀ ಚಾರಿಟಬಲ್ ಟ್ರಸ್ಟ್ ಹಮ್ಮಿಕೊಂಡಿರುವ ಈ ಕಾರ್ಯ ಮಹಾಯಜ್ಞವೆಂದು ಪ್ರಶಂಸಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕೆನರಾ ಬ್ಯಾಂಕಿನ ಸಹಾಯಕ ಮಹಾಪ್ರಬಂಧಕ ಆರ್.ಜಿ. ಸ್ವಾಮಿ ಅವರು ಬ್ಯಾಂಕ್ ಮತ್ತು ಇತರೆ ವಹಿವಾಟಿನಲ್ಲಿ ಮುಳುಗಿರುವ ನೌಕರರಿಗೆ ಗಮಕ ಕೇಳುವಿಕೆಯಿಂದ ಹೊಸ ಚೈತನ್ಯ ಮೂಡುವುದು ಎಂದರು.
ಕೆನರಾ ಬ್ಯಾಂಕ್ ಯಾವತ್ತಿಗೂ ಇಂತಹ ಕಲೆಯ ಬೆಳೆವಣಿಗೆಗೆ ಸಹಕಾರಿಯಾಗಿರುತ್ತದೆ ಎಂದರು. ಟ್ರಸ್ಟ್‌ನ ಕಾರ್ಯದರ್ಶಿ ಸಭಾದ್ಯಕ್ಷ ಅನಂತರಾಮಯ್ಯ ಮಾತನಾಡಿ ತಂದೆ, ತಾಯಂದಿರು ನಿಮ್ಮ ಜತೆ ಮಕ್ಕಳನ್ನು ಕರೆ ತರಬೇಕು. ಇಲ್ಲವೇ ಕಾರ್ಯಕ್ರಮದ ವಿವರ ಅವರಿಗೆ ತಿಳಿಸಿದಲ್ಲಿ ಅವರಿಗೆ ಕಲಿಯಬೇಕೆಂಬ ಉತ್ಸಾಹ ಬರುತ್ತದೆ ಎಂದರು. ಸ್ಥಳೀಯ ಕಲಾವಿದ ವಿದ್ವಾನ್ ಬಿ.ಎಲ್. ಕೃಷ್ಣಶರ್ಮ, ಪದ್ಮಾ ಸೂರ್ಯನಾರಾಯಣ ಅವರು ಜೈಮಿನಿ ಭಾರತದ ಧರ್ಮರಾಯ ಅಶ್ವಮೇಧ ಯಾಗಕ್ಕೆ ಸಂಕಲ್ಪಿಸುವ ಕಾವ್ಯ  ಭಾಗವನ್ನು ವಾಚನ ವ್ಯಾಖ್ಯಾನ ಮಾಡಿದರು.
ವಂದೇ ಮಾತರಂ ಗೀತ ಗಾಯನದೊಂದಿಗೆ ಸಭೆ ಪ್ರಾರಂಭವಾಯಿತು. ನಗರದ ಗಮಕ ಪಾಠ ಶಾಲೆಯ ಅಧ್ಯಾಪಕಿ ಡಿ.ವಿ. ಪೂರ್ಣಿಮಾ, ಎಚ್.ಆರ್. ಮಂಜುಳ, ಲಕ್ಷ್ಮೀ ಜೈ ಪ್ರಕಾಶ್, ಶ್ರೀದೇವಿ ಗಮಕ ಗೀತೆಯನ್ನು ಹಾಡಿದರು. ಪಾವಗಡ ರೇಣುಕಪ್ರಸಾದ್ ಸ್ವಾಗತಿಸಿದರು. ಗ.ಸೀ. ಶ್ರೀನಿವಾಸಮೂರ್ತಿ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.