ತಿಪಟೂರು ಬೆಸ್ಕಾಂ ಕಚೇರಿಯಲ್ಲಿ ಗಲಾಟೆ, ಹಲ್ಲೆ
ತಿಪಟೂರು: ನಗರದ ಬೆಸ್ಕಾಂ ಕಚೇರಿಯಲ್ಲಿ ಕರ್ತವ್ಯದಲ್ಲಿದ್ದ ಕಿರಿಯ ಎಂಜಿನಿಯರ್ ಮತ್ತು ಮೇಲ್ವಿಚಾರಕರ ನಡುವೆ ಜಗಳವಾಗಿ ಕೈಕೈ ಮಿಲಾಯಿಸಿರುವ ಘಟನೆ ನಡೆದಿದೆ.
ಮೇಲ್ವಿಚಾರಕ ಎನ್. ನಾರಾಯಣಪ್ಪ ಮತ್ತು ಕಿರಿಯ ಎಂಜಿನಿಯರ್ ಕುಮಾರಸ್ವಾಮಿ ಅವರ ನಡುವೆ ಪ್ರಕರಣವೊಂದರ ವರದಿ ವಿಚಾರವಾಗಿ ಪ್ರಾರಂಭವಾದ ಜಗಳ ಅಂತಿಮವಾಗಿ ನಾರಾಯಣಪ್ಪ ಕುಮಾರಸ್ವಾಮಿ ಮೇಲೆ ಹಲ್ಲೆ ಮಾಡಿರುವವರೆಗೆ ಹೋಗಿದೆ. ಹಲ್ಲೆಗೊಳಗಾಗಿರುವ ಕುಮಾರಸ್ವಾಮಿ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೇ 12ರಂದು ನಗರದ ಕಂಚಾಘಟ್ಟದಲ್ಲಿ ಕರ್ತವ್ಯ ನಿರತ ಲೈನ್ಮನ್ ಒಬ್ಬರು ಕೆಲಸ ನಿಮಿತ್ತ ವಿದ್ಯುತ್ ಕಂಬ ಹತ್ತಿದ್ದಾಗ ತಾಂತ್ರಿಕ ತೊಂದರೆಯಿಂದಾಗಿ ಮೃತಪಟ್ಟಿದ್ದರು. ಸದರಿ ಘಟನೆಗೆ ಸಂಬಂಧಿಸಿ ಇಲಾಖೆಯ ಮೇಲಾಧಿಕಾರಿಗಳು ವರದಿ ಕೇಳಿದ್ದರ ಪರಿಣಾಮ ಎಂಜಿನಿಯರ್ ಕುಮಾರಸ್ವಾಮಿ ವರದಿ ಸಿದ್ಧಪಡಿಸಿದ್ದರು. ಸಿಬ್ಬಂದಿ ಸುರಕ್ಷತೆಗಾಗಿ ಹತ್ತು ಉಪಕರಣ ನೀಡಲಾಗಿತ್ತು. ಇವುಗಳಲ್ಲಿ ಸುರಕ್ಷತಾ ಕವಚವನ್ನು ಮೇಲ್ವಿಚಾರಕ ನಾರಾಯಣಪ್ಪ, ಮೃತ ಲೈನ್ಮನ್ಗೆ ಕುಮಾರಸ್ವಾಮಿ ನೀಡಿದ್ದರೂ ನೀಡಿರಲಿಲ್ಲ ಎಂದು ವರದಿಯಲ್ಲಿ ಬರೆದಿದ್ದೇ ಈ ಘಟನೆಗೆ ಕಾರಣವಾಯಿತು. ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಕೈಕೈ ಮಿಸಲಾಯಿಸಿದ ಘಟನೆಯನ್ನು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಈ ಬಗ್ಗೆ ಕುಮಾರಸ್ವಾಮಿ, ನಾರಾಯಣಪ್ಪ ಪರಸ್ಪರ ನಗರ ಠಾಣೆಗೆ ದೂರು ನೀಡಿದ್ದಾರೆ.
ಇಲಾಖೆಯ ಅಧಿಕಾರಿಗಳಿಬ್ಬರ ನಡುವೆ ನಡೆದ ಈ ಘಟನೆ ಹಿನ್ನೆಲೆಯಲ್ಲಿ ಶುಕ್ರವಾರ ಬೆಸ್ಕಾಂ ಕಚೇರಿಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದಲ್ಲದೆ ಯಾವುದೇ ಕೆಲಸ ಕಾರ್ಯಕ್ರಗಳು ನಡೆಯಲಿಲ್ಲ. ಇದರಿಂದ ಸಾರ್ವಜನಿಕರು ತೊಂದರೆಗೀಡಾದರು. ಈ ಘಟನೆ ತಿಳಿದ ತುಮಕೂರಿನ ಬೆಸ್ಕಾಂ ಡಿಸಿಎ ಚಂದ್ರಶೇಖರ್ ಮೂರ್ತಿ ತಿಪಟೂರಿಗೆ ಆಗಮಿಸಿ ಘಟನೆಗೆ ಸಂಬಂಧಿಸಿದ ವಿವರವನ್ನು ಬೆಸ್ಕಾಂ ಎಇಇ ಮಲ್ಲಪ್ಪಾಚಾರ್ ಅವರಿಂದ ಪಡೆದರು. ಕುಮಾರಸ್ವಾಮಿ ಪರ ಅಧಿಕಾರಿಗಳು ನಾರಾಯಣಪ್ಪ ಅವರನ್ನು ಕೂಡಲೆ ಅಮಾನತುಗೊಳಿಸಬೇಕೆಂದು ಪಟ್ಟು ಹಿಡಿದು ಸ್ಥಳದಲ್ಲೇ ಕ್ರಮ ಜರುಗಿಸಿ ಹೋಗಬೇಕೆಂದು ಒತ್ತಾಯಿಸಿದ್ದಕ್ಕೆ ಪರಿಶೀಲಿಸಿದ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿಎ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

