ಜಾಗೃತಿಯಿಂದ ಸಮಾಜದ ಸ್ವಾಸ್ಥ್ಯ ಸಾಧ್ಯ: ನಾಗಪ್ಪ
ತುಮಕೂರು: ಸಮಾಜದ ಪ್ರತಿ ಹಂತದಲ್ಲಿಯೂ ಇಂದು ಜಾಗೃತಿ ಮತ್ತು ಕಾನೂನುಗಳ ಪರಿಣಾಮಕಾರಿ ಬಳಕೆಯಿಂದ ಸಮಾಜದ ಸ್ವಾಸ್ಥ್ಯ ಸಾಧ್ಯ ಎಂದು ಸಾಹಿತಿ ಹಾಗೂ ಪ್ರಾಚಾರ್ಯ ಎನ್. ನಾಗಪ್ಪ ಅಭಿಪ್ರಾಯಪಟ್ಟರು.
ಅವರು ಶಿರಾ ತಾಲೂಕು ಚಿಕ್ಕನಹಳ್ಳಿ ಗುರುಶ್ರೀ ಕಾಲೇಜು ಆಫ್ ಕಾಮರ್ಸ್ ಅಂಡ್ ಸೋಷಿಯಲ್ ವರ್ಕ್, ಸ್ನಾತಕೋತ್ತರ ಅಧ್ಯಯನ ವಿಭಾಗದ ವತಿಯಿಂದ ಏರ್ಪಡಿಸಿದ್ದ ಮಹಿಳೆಯರ, ಮಕ್ಕಳ ಮೇಲಿನ ಹಿಂಸೆ, ದೌರ್ಜನ್ಯ ತಡೆಯುವಲ್ಲಿ ಕಾನೂನುಗಳ ಪಾತ್ರ ಮತ್ತು ಮದ್ಯ ವ್ಯಸನದ ದುಷ್ಪರಿಣಾಮಗಳ ಬಗ್ಗೆ ಯುವ ಜನತೆಗೆ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಆಧುನಿಕ ಜಗತ್ತಿನಲ್ಲಿ ಮಕ್ಕಳ ಬೆಳವಣಿಗೆಗೆ ಪೋಷಕರು ಗಮನಹರಿಸಿ ಅವರನ್ನು ಸರಿದಾರಿಗೆ ತರುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ನುಡಿದರು.
ಯುವ ಜನತೆಗೆ ಅರಿವು ಮತ್ತು ಜಾಗೃತಿ ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದ ಸಹಾಯಕ ಪ್ರಾಧ್ಯಾಪಕ ಶಶಿಕಾಂತರಾವ್ ಅವರು ಯುವ ಜನರ ಸಬಲೀಕರಣದಲ್ಲಿ ಯುವ ಜನರ ಪಾತ್ರ ಮತ್ತು ನಿರ್ವಹಣೆ ಹಾಗೂ ಯುವ ಜನರ ಚಿಂತನೆಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಿ ಕಾರ್ಯಕ್ರಮದ ಆಯೋಜನೆಯ ಮಹತ್ತರಗಳನ್ನು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ವರದಕ್ಷಿಣೆ ವಿರೋಧಿ ಕೇಂದ್ರದ ಕಾರ್ಯದರ್ಶಿ ಸಾ.ಚಿ. ರಾಜ್ಕುಮಾರ್ ಮಾತನಾಡಿ ಮಹಿಳೆಯರು ಮತ್ತು ಮಕ್ಕಳ ಮೇಲಿನ ಹಿಂಸೆ ಮತ್ತು ಅವುಗಳನ್ನು ತಡೆಯಲು ಇರುವ ಕಾನೂನುಗಳ ಬಗ್ಗೆ ತಿಳಿಸಿದರು. ಆಚರ್ಡ್ ಸಂಸ್ಥೆ ಆಪ್ತ ಸಮಾಲೋಚಕ ರಾಯಪ್ಪ ಮಾತನಾಡಿದರು. ಯುವ ಜನತೆ ಆಧುನಿಕ ಶೈಲಿಯ ಜೀವನದ ಸೋಗಿನಲ್ಲಿ ತಮ್ಮ ಅನೇಕ ಕೆಟ್ಟ ಹವ್ಯಾಸಗಳಿಗೆ ಬಲಿಯಾಗಿ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುವ ಬಗ್ಗೆ ಹಾಗೂ ಮದ್ಯಪಾನ ಮತ್ತು ಮದ್ಯವ್ಯಸನಗಳು ಮಾನವ ಸಂಕುಲನವನ್ನು ನಾಶ ಮಾಡುವ ಕುರಿತು ಸುದೀರ್ಘವಾಗಿ ತಿಳಿಸಿದರು.
ಕಾರ್ಯಕ್ರಮದ ಅಧ್ಯತೆಯನ್ನು ಚಿಕ್ಕನಹಳ್ಳಿ ಗ್ರಾ.ಪಂ. ಅಧ್ಯಕ್ಷ ಕೃಷ್ಣಮೂರ್ತಿ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಬಿ.ಪಿ. ಶಿವಲಿಂಗಪ್ಪ, ಶಶಿಕಾಂತರಾವ್, ಮಂಜುನಾಥಯ್ಯ, ರಘು ಕೆ.ಪಿ., ಮಂಜುನಾಥ್, ಡಿ. ಶಿವರಾಜು, ಲೋಕೇಶ್, ಎನ್.ಡಿ., ವಿಜಯಕುಮಾರ್, ಜಗದೀಶ್, ದಿವ್ಯಜ್ಯೋತಿ, ಕಾವ್ಯ ಇದ್ದರು. ವಿಜಯಕುಮಾರ ಸ್ವಾಗತಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

